ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗ್ರಾಹಕ ನ್ಯಾಯಾಲಯಗಳಲ್ಲಿ ವಿಳಂಬ ನೀತಿ: ಗ್ರಾಹಕ ಜಾಗೃತಿ

ಗ್ರಾಹಕರ ಸಂಕಷ್ಟಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ಒಂದು ವಿಧಿ ಬದ್ದವಾದ ಕಟಕಟೆಯೊಳಗೆ ತರುವ ನ್ಯಾಯದಾನ ವಿಭಾಗವೆಂದೇ ಪರಿಗಣಿಸಲ್ಪಟ್ಟಿರುವ ಗ್ರಾಹಕ ನ್ಯಾಯಾಲಯವು ಅತ್ಯಂತ ಸರಳ, ಮಿತವ್ಯಯ ಮತ್ತು ಬಡವರಿಗೆ ಯೋಗ್ಯವಾಗಿರುವ ತಾರತಮ್ಯ ರಹಿತವಾದ ವೇದಿಕೆಯಾಗಿದೆ. ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೆ ಅತ್ಯಂತ ಸರಳ ರೂಪದಲ್ಲಿರುವ ನ್ಯಾಯಾಲಯವಾಗಿರುವುದರಿಂದ ಇಲ್ಲಿ ವಾದಿಸಲು ವಕೀಲರ ಅವಶ್ಯಕತೆಯಿಲ್ಲ. ನಮ್ಮ ಪರವಾಗಿ ಲಭ್ಯವಿರುವ ದಾಖಲೆ ಪತ್ರಗಳ ಆಧಾರದ ಮೇಲೆ ನಮಗೆ ನಾವೇ ವಾದಿಸಿಕೊಂಡು ಜಯಿಸುವ ಅವಕಾಶವಿದೆ. ವಕೀಲರ ಮಾನಸಿಕ ಕಿರಿಕಿರಿ ವ್ಯರ್ಥ ಹಣ ಕಳೆದುಕೊಳ್ಳುವಿಕೆಯ ಜಂಜಾಟ ಈ ನ್ಯಾಯಾಲಯಗಳಲ್ಲಿ ಕಂಡು ಬರುವುದು ಬಹಳ ಅಪರೂಪ.

ಗ್ರಾಹಕ ಅಧಿನಿಯಮದ ಪ್ರಕಾರ ಗ್ರಾಹಕ ನ್ಯಾಯಾಲಯವು ವಂಚನೆ ನಡೆದ ಒಂದು ವರ್ಷದ ಒಳಗಿನ ಪ್ರಕರಣಗಳನ್ನು ಮಾತ್ರ ಸ್ವೀಕರಿಸಬೇಕು ಮತ್ತು ಈ ಪ್ರಕರಣವನ್ನು 3 ತಿಂಗಳ ಒಳಗೆ ಮುಗಿಸಬೇಕೆಂದು ಸ್ಪಷ್ಟ ಪಡಿಸಿದೆ. ಯಾವುದೇ ಕಾರಣಗಳಿಂದ ಪ್ರಕರಣವೊಂದು 3 ತಿಂಗಳಿಗಿಂತ ಹೆಚ್ಚು ಸಮಯವನ್ನು ವ್ಯವಹರಿಸಿದರೆ ಅದಕ್ಕೆ ಗ್ರಾಹಕ ನ್ಯಾಯಾಲಯವೇ ಹೊಣೆಯಾಗುತ್ತದೆಯಲ್ಲದೆ, ಅಂತಹ ಸಂದರ್ಭಗಳಲ್ಲಿ ಒಂದು ನ್ಯಾಯಾಲಯಗಳಿಂದ ಇನ್ನೊಂದು ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಿಕೊಳ್ಳುವ ಸ್ವಾತಂತ್ರ್ಯವು ಗ್ರಾಹಕನಿಗಿದ್ದು ಸಂಶಯಾತ್ಮಕ ನ್ಯಾಯದಾನವು ಗ್ರಾಹಕನಿಗೆ ಇಂತಹ ಸ್ಥಿತಿಯು ರಕ್ಷಣೆ ಒದಗಿಸಬಹುದಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವುದಾದರೆ ಜಿಲ್ಲಾ ನ್ಯಾಯಾಲಯದ ತೀರ್ಪು ಸಮಾಧಾನಕರವಾಗಿರದಿದ್ದ ಪಕ್ಷದಲ್ಲಿ ಅದನ್ನು ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಇದಲ್ಲದೆ ರಾಜ್ಯ ಗ್ರಾಹಕ ನ್ಯಾಯಾಲಯದ ತೀರ್ಪು ಸಮರ್ಪಕವಾಗಿಲ್ಲವೆಂದು ಮನದಟ್ಟಾದರೆ ಅಂತಿಮವಾಗಿ ಕೇಂದ್ರ ಗ್ರಾಹಕ ಆಯೋಗದ ಮೆಟ್ಟಲು ಹತ್ತಬಹುದು.

ಇಂತಹ ಅವಕಾಶಗಳು ಗ್ರಾಹಕ ನ್ಯಾಯಾಲಯದ ವಿಳಂಬ ನೀತಿಯ ಸ್ಪಷ್ಟ ಕನ್ನಡಿಯಾಗಿದೆ. ಗ್ರಾಹಕ ನ್ಯಾಯಾಲಯಗಳಲ್ಲಿ ಕಾನೂನು ಪದವೀಧರರನ್ನೇ ಸದಸ್ಯರನ್ನಾಗಿಸುವ ಪರಿಪಾಠ ಬಹಳಷ್ಟು ವಿರಳವಾಗಿರುವುದೂ ಇದಕ್ಕೆ ಕಾರಣವಲ್ಲದೆ ಕೆಲವೊಂದು ಸಂದರ್ಭಗಳಲ್ಲಿ ವಕೀಲರನ್ನು ನೇಮಿಸಿಕೊಳ್ಳಲು ಗ್ರಾಹಕ ನ್ಯಾಯಾಲಯ ಸಲಹೆ ಮಾಡಲೂ ಬಹುದು. ಅಂತಹ ಸಂದರ್ಭಗಳಲ್ಲಿ ವಕೀಲರು ಪದೇ ಪದೇ ಕೇಸಿಗೆ ಅವಧಿ ಕೇಳುವ ಪರಿಸ್ಥಿತಿ ಹುಟ್ಟಿಸಿ ತಾವು ಕಲಿತಿರುವ ವಿದ್ಯೆಗೆ ಒಂದು ಭೂಷಣವನ್ನು ತರಲು ಯತ್ನಿಸುತ್ತಾರೆ. ಅಂದರೆ ತಾವು ಶಿಕ್ಷಣಕ್ಕಾಗಿ ವೆಚ್ಚ ಮಾಡಿರುವುದನ್ನು ಗ್ರಾಹಕರಿಂದ ವಸೂಲಿ ಮಾಡಿಸಿಕೊಳ್ಳುವ ತಂತ್ರಗಾರಿಕೆಯನ್ನು ಕರಗತ ಮಾಡಿಕೊಳ್ಳುತ್ತಾರೆ, ಇದರ ಪರಿಣಾಮವೆಂದರೆ ಸೇವಾ ಕಾರ್ಯತತ್ಪರತೆಯು ಕಣ್ಮರೆಯಾಗಿ ಗ್ರಾಹಕ ನ್ಯಾಯಾಲಯದಂತಹ ಅತಿ ಸರಳ, ಮಿತವ್ಯಯಕಾರಿ ವೇದಿಕೆಯೊಂದು ಬಡ-ಬಗ್ಗರು, ಅಸಹಾಯಕರಿಂದ ನಿಧಾನವಾಗಿ ದೂರ ಸರಿಯುವಂತಾಗಬಹುದಲ್ಲದೆ ಬಹುತೇಕ ಸಂದರ್ಭಗಳಲ್ಲಿ 3 ತಿಂಗಳ ಅವಧಿಯಲ್ಲಿ ತೀಪರ್ು ಬರಬೇಕಾಗಿರುವುದು 13 ತಿಂಗಳುಗಳ ತನಕ ತೀರ್ಪಿಗಾಗಿ ಪದೇ ಪದೇ ವಕೀಲರ ಭೇಟಿ, ಫೋನ್ ಸಂಪರ್ಕ, ಗ್ರಾಹಕ ವೇದಿಕೆಗೆ ಅಲೆದಾಟ ಮುಂತಾದ ಕಿರಿಕಿರಿಯನ್ನು ಎದುರಿಸ ಬೇಕಾಗಬಹುದಲ್ಲದೆ ಗ್ರಾಹಕ ನ್ಯಾಯಾಲಯದ ಅಸ್ತಿತ್ವವೇ ಬುಡಮೇಲಾಗುವಂತಹ ಸನ್ನಿವೇಶ ಸೃಷ್ಟಿಗೊಳ್ಳುತ್ತದೆ ಎಂಬುದನ್ನು ಮರೆಯುವಂತಿಲ್ಲ.

ಗ್ರಾಹಕ ನ್ಯಾಯಾಲಯಗಳಲ್ಲಿ ವಿಳಂಬ ನೀತಿಯನ್ನು ತಡೆಗಟ್ಟ ಬೇಕಲ್ಲದೆ ಇನ್ನಿತರ ಸಿವಿಲ್ ನ್ಯಾಯಾಲಯಗಳಂತೆ ಇಲ್ಲಿಯೂ ಕಕ್ಷಿದಾರರ ಜೊತೆ ವಕೀಲರು ಹಾಜರಾಗುವುದನ್ನು ಕಡ್ಡಾಯವಾಗಿ ನಿಷೇದಿಸಬೇಕು. ವಕೀಲರನ್ನು ವಕಾಲತ್ತಿಗಾಗಿ ನೇಮಿಸುವ ಪ್ರವೃತ್ತಿ ಇರುವ ತನಕ ಗ್ರಾಹಕ ನ್ಯಾಯಾಲಯವು ಗ್ರಾಹಕ ಅಧಿನಿಯಮದಡಿಯ ಆಶಯವನ್ನು ಪಾಲಿಸಲು ಸಾಧ್ಯವಾಗದೇ ಇರಲೂ ಬಹುದು. ಇದಲ್ಲದೆ ಕೆಲವೊಂದು ಸಂದರ್ಭಗಳಲ್ಲಿ ಗ್ರಾಹಕ ನ್ಯಾಯಾಲದ ನ್ಯಾಯಾಧೀಶರು ರಜೆಯಲ್ಲಿ ಹೋದಾಗ ಬದಲಿ ನ್ಯಾಯಾಧೀಶರು ಹಾಗೂ ಬದಲಿ ನ್ಯಾಯಾಲಯದ ಸಿಬ್ಬಂದಿಗಳ ವ್ಯವಸ್ಥೆ ಇಲ್ಲದಿರುವುದು ನ್ಯಾಯ ವಿಳಂಬಕ್ಕೆ ಕಾರಣವಾಗುತ್ತದೆಯಲ್ಲದೆ ನ್ಯಾಯಾಧೀಶರು ವರ್ಗಾವಣೆಗೊಂಡಾಗ ಬದಲಿ ನ್ಯಾಯಾಧೀಶರನ್ನು ಒದಗಿಸಲು ಕೆಲವೊಂದು ಸಂದರ್ಭಗಳಲ್ಲಿ ಒಂದೆರಡು ವರ್ಷಗಳನ್ನು ಪಡೆದುಕೊಂಡಿರುವ ಗ್ರಾಹಕ ನ್ಯಾಯಾಲಯಗಳೂ ಇವೆ ಎಂಬುದು ಗಮನಿಸಬೇಕಾದ ಅಂಶ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವುದಾದರೆ ಕೆಲವೊಂದು ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು ಅಪರಾಧಿಗಳ ಜೊತೆ ಕುಮ್ಮಕ್ಕಾಗಿ ನೈಜ ನ್ಯಾಯವನ್ನು ಒದಗಿಸಲು ವಿಫಲರಾಗುತ್ತಾರೆಂಬುದು ಅಲ್ಲೊಂದು ಇಲ್ಲೊಂದು ಪ್ರಕರಣಗಳು ಸ್ಪಷ್ಟಪಡಿಸುತ್ತವೆ. ಹೈಕೋರ್ಟಿನ ಮುಖ್ಯ ನ್ಯಾಯಾಧೀಶರುಗಳೇ ಲಂಚ-ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿ ಬೀಳುತ್ತಿರುವ ವರದಿಗಳು ಗೋಚರಿಸುತ್ತಿರುವ ಇಂದಿನ ದಿನಗಳಲ್ಲಿ ಗ್ರಾಹಕ ನ್ಯಾಯಾಲಯದಂತಹ ಚಿಕ್ಕ ಪುಟ್ಟ ನ್ಯಾಯಾಲಯದ ನ್ಯಾಯಾಧೀಶರನ್ನು ನಂಬುವುದು ಸಾದ್ಯವೇ ಎಂಬ ಸಂಶಯವೂ ಹೊಗೆಯಾಡುವ ವಾತಾವರಣವು ಇಂದು ಎಲ್ಲೆಡೆಯ ಗ್ರಾಹಕ ನ್ಯಾಯಾಲಯಗಳಲ್ಲಿರುವು ದುರದೃಷ್ಟಕರ.

  • ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ