
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಆಗರಖೇಡ ಗ್ರಾಮದಲ್ಲಿ ಶ್ರೀ ಶಂಕರಲಿಂಗ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ:12/07/2025 ರಿಂದ 17/05/2025 ರ ವರೆಗೆ ರುದ್ರಾಭಿಷೇಕ, ರುದ್ರ ಹೋಮ್,ನವಗ್ರಹ ಈ ಎಲ್ಲಾ ಪೂಜಾ ವಿಧಿವಿಧಾನಗಳು ಶ್ರೀ ಪಂಚಯ್ಯ ಶಾಸ್ತ್ರಿಗಳು ಸೋಲಾಪುರ ಮತ್ತು ಶ್ರೀಬಸವರಾಜ್ ಹಿರೇಮಠ ಬುಯ್ಯಾರ್ ಹಾಗು ಶ್ರೀ ಸೋಮಶೇಖರ ಸ್ವಾಮಿಗಳು ತಡವಲಾಗ ಇವರ ಸಹಯೋಗದಲ್ಲಿ ಜರುಗಿದವು.
ದಿನಾಂಕ:17/05/2025 ರಂದು ಸಾಯಂಕಾಲ 7:೦೦ ಗಂಟೆಗೆ ರಥೋತ್ಸವ ಜರುಗಿತು. ರಥೋತ್ಸವದಲ್ಲಿ ಆಗರಖೇಡ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ನಂತರ ಸಕಲ ವಾದ್ಯ ಮೇಳದೊಂದಿಗೆ ರಂಗು ರಂಗಿನ ಮದ್ದು ಸುಡುತ್ತಾ ಶ್ರೀ ಶಂಕರಲಿಂಗ ದೇವರ ಹಾಗೂ ಭೀರಣ್ಣ ದೇವರ ಪಲ್ಲಕಿಯೊಂದಿಗೆ ಊರಿನ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ಜರುಗಿತು.
ವರದಿ ಮನೋಜ್ ನಿಂಬಾಳ
