
ಜನಪದ ಸಮಾಜ, ಗ್ರಾಮೀಣ ಸಮಾಜ, ಇದು ನಗರದಿಂದ ಭಿನ್ನವಾದುದು, ಜನಪದ ಜೀವನ ನಿರಕ್ಷರಸ್ಥ ಸಮಾಜದ ಜೀವನ, ಅಕ್ಷರಸ್ಥ ಆಧುನಿಕ ಸಮಾಜದಿಂದ ಬೇರೆಯಾದುದು. ಇದೇ ಕಾರಣಗಳಿಂದ ಜನಪದ ಸಾಹಿತ್ಯ , ಸಾಮಾನ್ಯ ಅರ್ಥದ ಸಾಹಿತ್ಯದಿಂದ ಉದ್ದೇಶ, ವ್ಯಾಪ್ತಿ,ಸ್ವರೂಪದಲ್ಲಿ ಪ್ರತ್ಯೇಕವಾದುದು ಜನಪದರ ಆಹಾರ, ಉಡುಗೆ, ತೊಡುಗೆ, ಪೂಜೆ, ಪುನಸ್ಕಾರ, ಗಾಯನ, ಮನರಂಜನೆ, ಪ್ರತಿಯೊಂದೂ ವಿಶೇಷ ಗಮನ ಸೆಳೆಯುತ್ತವೆ,
ಪಟ್ಟಣದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಭೂಮರಡ್ಡಿ ಕಾಲೇಜಿನಲ್ಲಿ ಈಚೆಗೆ ಜಾನಪದ ಉತ್ಸವ ಕಾರ್ಯಕ್ರಮ ಜರುಗಿತು.
ಕಾಲೇಜಿನ ವಿದ್ಯಾರ್ಥಿಗಳು, ಶುಭ್ರವಾದ ಬಿಳಿ ಉಡುಪುಗಳನ್ನು ಧರಿಸಿದ್ದರೆ, ಯುವತಿಯರು ಇಲಕಲ್ ಸೀರೆಯುಟ್ಟು, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಮೂಲಕ ಕಂಗೋಳಿಸುತ್ತ,ಕುಂಭ ಗಳನ್ನು
ಹೊತ್ತು, ಮೆರವಣಿಗೆಯ ಮೂಲಕ ಅತಿಥಿ, ಗಣ್ಯಮಾನ್ಯರನ್ನು, ವೇದಿಕೆಗೆ ಸ್ವಾಗತಿಸಿದ್ದು, ನೆರೆದವರ ಮನಸ್ಸನ್ನು ಸೂರೆಗೊಂಡಂತಿತ್ತು. ಇದೇ
ಸಂದರ್ಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಡಾ. ಮಹಾಂತೇಶ ನೆಲಾಗಣಿಯವರು ” ಬಾಯಿಂದ ಬಾಯಿಗೆ ಹಬ್ಬುವ ಸಾಹಿತ್ಯವೇ ಜನಪದ ಸಾಹಿತ್ಯ, ಪ್ರಪಂಚದ ಎಲ್ಲಾ ಭಾಷೆಗಳಲ್ಲೂ ಜನಪದ ಸಾಹಿತ್ಯವಿದೆ, ಆದರೆ ಕನ್ನಡ ಜನಪದಕ್ಕೆ ವಿಶೇಷ ಸ್ಥಾನವಿದೆ. ಈ ಜನಪದ ಸಾಹಿತ್ಯವೇ ಮುಂದುವರಿದು ಜಾನಪದ ಸಾಹಿತ್ಯವಾಗಿದೆ, ಇಲ್ಲಿ ಒಗಟು, ಗಾದೆ, ಕಥೆ, ಲಾವಣಿ, ಹಾಡು, ಕುಣಿತ, ಡೊಳ್ಳಿನ ಪದ, ಬಯಲಾಟ ಮುಂತಾದ ಪ್ರಕಾರಗಳು ಅನಕ್ಷರಸ್ಥ ಸಮುದಾಯವರ ಬಾಯಲ್ಲಿ ಹೊರಹೊಮ್ಮಿರುವುದನ್ನು ಕಾಣುತ್ತೇವೆ, ಈ ಜನಪದ ಸಾಹಿತ್ಯ ದ ಪರಿಚಯವನ್ನು ಮೊದಲ ಬಾರಿಗೆ ಮಾಡಿದವರು ಡಾ.ಹಾ.ಮಾ.ನಾಯಕ್,
ಅವರು ಎಂದು ಗಜೇಂದ್ರಗಡ ಪಟ್ಟಣದ ,ಎಸ್ ಎಂ.ಭೂಮರಡ್ಡಿ ಕಲಾ, ವಿಜ್ಞಾನ, ವಾಣಿಜ್ಯ, ಪದವಿ ಕಾಲೇಜಿನಲ್ಲಿ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಬಿ.ವಿ.ಮುನವಳ್ಳಿ ಅವರು ಪ್ರಾಚೀನ ಇತಿಹಾಸವಿರುವ ಜಾನಪದ ಸಾಹಿತ್ಯವು ನಮಗೆ ಅನೇಕ ಕೊಡುಗೆಗಳನ್ನು ನೀಡಿದೆ ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿಗಳಾಗಿದ್ದ
ಎನ್.ಎಸ್.ಎಸ್ ಸಂಯೋಜನಾ ಅಧಿಕಾರಿ, ಎಸ್.ಕೆ.ಕಟ್ಟೀಮನಿಯವರು ಮಾತನಾಡುತ್ತಾ ಜನಪದ ಗೀತೆ, ಜನಪದ ಕುಣಿತ, ನಮ್ಮ ಸಂಸ್ಕೃತಿ-ನಮ್ಮ ಹೆಮ್ಮೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎನ್ ಶಿವರಡ್ಡಿ ಅವರು, ಜನಪದ ಸಾಹಿತ್ಯವನ್ನು ಆಸ್ವಾದಿಸುವ ಜೊತೆಗೆ
ಅದರ ರಕ್ಷಣೆಯನ್ನೂ ಮಾಡಬೇಕಾದ ಅಗತ್ಯವಿದೆ,
ಕುಟ್ಟುವ ಹಾಡು,ಬೀಸುವ ಹಾಡು, ಹಂತಿ ಪದ, ಸೋಬಾನೆ ಪದ,ಕೋಲಾಟದ ಹಾಡುಗಳಲ್ಲಿನ ಸೊಗಸು ಆಧುನಿಕ ಶಿಷ್ಟ ಸಾಹಿತ್ಯದಲ್ಲಿ ಕಂಡುಬರುವುದಿಲ್ಲ, ಆದರೆ ಜಾನಪದ ಸಾಹಿತ್ಯ ದಲ್ಲಿ ಎಲ್ಲವೂ ಇದೆ, ಇದನ್ನು ರಕ್ಷಿಸುವ ಕೆಲಸ, ಇಂದಿನ ಯುವಪೀಳಿಗೆಯವರ ಮೇಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಡಾ. ಎಸ್. ಕೆ. ಕಟ್ಟೀಮನಿ, ಎಲ್. ಕೆ. ಹಿರೇಮಠ, ಎಂ. ಎಲ್. ಕೋಟೆ, ಡಾ.ಎಸ್.ಎಚ್ ಪವಾರ್, ಯು.ಎನ್ ತಿಮ್ಮನ ಗೌಡ್ರ, ಎಂ.ಬಿ ಮುಲ್ಲಾ,ಕವಿತಾ ಬಂಡಿ,ವಕ್ರಾಣಿ, ಇದ್ದರು ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
- ಕರುನಾಡ ಕಂದ
