ಒಂದು ವೇಳೆ ವೃಷಭಾವತಿ ಏತ ನೀರಾವರಿ ಹೆಸರಿನಲ್ಲಿ ವಿಷಪೂರಿತ ನೀರು ಹರಿಸಿ ಫಲವತ್ತಾದ ಭೂಮಿಯನ್ನು ಹಾಳು ಮಾಡುವ ಈ ಕೆಟ್ಟ ಯೋಜನೆಯನ್ನು ಕೈಬಿಡದಿದ್ದರೆ ರಾಜ್ಯವೇ ತಿರುಗಿ ನೋಡುವಂತ ಬೃಹತ್ ಪ್ರತಿಭಟನೆ ಮಾಡುವ ಅನಿವಾರ್ಯತೆ ಎದುರಾಗಿದ್ದು ತಾಲ್ಲೂಕಿನ ಸರ್ವತೋಮುಕ ಜನತೆ ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ನಮ್ಮ ಮುಂದಿನ ಪೀಳಿಗೆಯ ಉಳಿವಿಗಾಗಿ ಪ್ರತಿಭಟನೆಯಲ್ಲಿ ಕೈಜೋಡಿಸಬೇಕು ಕೇವಲ ಐದು ವರ್ಷ ಆಡಳಿತ ನಡೆಸುವ ಶಾಸಕರು ತಮ್ಮ ಆಡಳಿತದ ಅವಧಿ ಮುಗಿದ ಕೂಡಲೇ ಸ್ವಗ್ರಾಮಕ್ಕೆ ಪಲಾಯನ ಮಾಡುತ್ತಾರೆ, ಆದರೆ ಸ್ಥಳ ಹೊಂದಿಗರಾದ ನಾವುಗಳು ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳನ್ನು ಎದುರಿಸಿ ಮುಂದಿನ ಪೀಳಿಗೆ ಬದುಕಲಾರದೆ 100 ರಿಂದ 150 ಕಿ.ಮೀ ಆಚೆಗೆ ವಲಸೆ ಹೋಗಿ ನಮ್ಮ ಅಸ್ಥಿತ್ವವನ್ನು ಕಳೆದುಕೊಂಡು ಬದುಕಬೇಕಾದ ದುಸ್ಥಿತಿ ಎದುರಾಗುತ್ತದೆ, ಶಾಸಕರಿಗೆ ತಾಲ್ಲೂಕಿನ ಜನತೆ ಮತ್ತು ರೈತರ ಮೇಲೆ ಪ್ರೀತಿ ಹಾಗೂ ಕಾಳಜಿ ಇದ್ದಲ್ಲಿ ಈಗಾಗಲೇ ಎತ್ತಿನಹೊಳೆಯ ಪೈಪ್ ಲೈನ್ ಕಾಮಗಾರಿ ಸಂಪೂರ್ಣವಾಗಿ ನಡೆದಿದ್ದು ಅಮೃತದಂತ ಎತ್ತಿನಹೋಳೆ ನೀರನ್ನು ಬಿಡಿಸುವ ನಿಟ್ಟಿನಲ್ಲಿ ಧೃಡ ನಿರ್ಧಾರ ತೆಗೆದುಕೊಳ್ಳಲಿ, ಒಂದು ವೇಳೆ ಹಠಮಾರಿತನ ಪ್ರದರ್ಶಿಸಿದಲ್ಲಿ ಮುಂದಿನ ಚುನಾವಣೆಯಲ್ಲಿ ಸೋಲಿನ ರುಚಿಯ ಪಾಠ ಕಲಿಸುವ ಕೆಲಸವನ್ನು ಖುದ್ದು ತಾಲ್ಲೂಕಿನ ಜನತೆಯೇ ಮಾಡುತ್ತದೆ, ವೃಷಭಾವತಿ (ಕೆಂಗೇರಿ ಮೋರಿ) ನೀರಾವರಿ ಯೋಜನೆ ಹೆಸರಿನಲ್ಲಿ ನೀರು ಯೋಗ್ಯವಾಗಿದೆ ಎನ್ನುವುದೇ ಆದರೆ ಮಾನ್ಯ ಶಾಸಕರು ಮೊದಲು ತಮ್ಮ ಸ್ವಗ್ರಾಮವಾದ ಚಿಕ್ಕನಹಳ್ಳಿ ಮತ್ತು ತಾವರೇಕೆರೆ ಹೊಬಳಿಯ ಅಕ್ಕ-ಪಕ್ಕದ ಗ್ರಾಮಗಳ ಕೆರೆಗೆ ಹರಿಸಿಕೊಳ್ಳಲಿ ಒಂದು ವೇಳೆ ಅಲ್ಲಿನ ಜನಸಾಮಾನ್ಯರು ಹಾಗೂ ರೈತರು ಈ ಯೋಜನೆಯನ್ನು ಸ್ವಾಗತಿಸಿದಲ್ಲಿ ಮುಂದಿನ ದಿನಗಳಲ್ಲಿ ಈ ಕಲುಷಿತ ನೀರಿನಿಂದ ಯಾವುದೇ ದುಷ್ಪರಿಣಾಮ ಉಂಟಾಗದೆ ಆರೋಗ್ಯವಾಗಿ ಬದುಕಿದಲ್ಲಿ 5 ವರ್ಷ ಕಳೆದ ನಂತರ ನೆಲಮಂಗಲ ತಾಲ್ಲೂಕಿನಾದ್ಯಂತ ಈ ಕಲುಷಿತ ನೀರು ತರುವ ದುರುದ್ದೇಷದ ಬಗ್ಗೆ ಆಲೋಚಿಸಲಿ ಎಂದು ಶಾಸಕರ ವಿರುದ್ದ ಮಿಣ್ಣಾಪುರ ಕಾಂತರಾಜು ಗುಡುಗಿದರು.
- ಕರುನಾಡ ಕಂದ
