ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದುರಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾದುದರಿಂದ ಗ್ರಾಮದ ರೈತರು ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು ಸೇರಿದಂತೆ ವಲಯ ಅರಣ್ಯಾಧಿಕಾರಿಗಳಿಗೆ ಸುಮಾರು ಸಲ ಅರ್ಜಿ ಕೊಟ್ಟರೂ ಸಹ ಸಮಸ್ಯೆ ಬಗೆಹರಿಯದ ಕಾರಣ ಕರುನಾಡ ಕಂದ ಪತ್ರಿಕೆಯ ಮೇ ೧೬,೨೦೨೫ ರ ಸಂಚಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು ತದ ನಂತರ ಸುದ್ದಿ ಪ್ರಕಟವಾದ ಮರು ದಿನವೇ ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಬಂದು ರೈತರ ಸಮಸ್ಯೆ ಬಗೆಹರಿಸಿ ಪರಿಹಾರ ಒದಗಿಸುವ ಭರವಸೆ ಕೊಟ್ಟ ನಂತರ ಗ್ರಾಮದ ರೈತರು ಸಂತೋಷಗೊಂಡು ನಮ್ಮೆಲ್ಲರ ಹೋರಾಟಕ್ಕೆ ಕರುನಾಡ ಕಂದ ಪತ್ರಿಕೆ ತುಂಬಾ ಸಹಕಾರ ಮಾಡಿದೆ ಎಂದು ಧನ್ಯವಾದಗಳನ್ನು ಸಲ್ಲಿಸಿ ,ಶುಭ ಹಾರೈಸಿದರು.
ವರದಿ : ಶ್ರೀನಿವಾಸ ಬಿರಾದಾರ
