ಕರ್ನಾಟಕ ರಾಜ್ಯವು ತನ್ನದೇ ಆದಂತಹ ಘನತೆ ಗೌರವಗಳನ್ನು ಇತಿಹಾಸವನ್ನು ಉಳಿಸಿಕೊಂಡು ಪ್ರಪಂಚದ ಎಲ್ಲಾ ಮೂಲೆಗಳಲ್ಲೂ ತನ್ನ ಭಾಷೆಯಿಂದಲೇ ಭಾಷೆಯ ಹುಟ್ಟಿನಿಂದಲೇ ಇತಿಹಾಸವನ್ನು ಸೃಷ್ಟಿಸಿಕೊಂಡಿದೆ, ಭಾರತ ದೇಶದಲ್ಲಿ ಅತೀ ಹಳೆಯ ಭಾಷೆಯಾಗಿ ಹಾಗೂ ಸುಲಭ, ಸರಳ ಸುಂದರ ಭಾಷೆಯಾಗಿ ತನ್ನ ವ್ಯಕ್ತಿತ್ವವನ್ನು ಅಜರಾಮರವಾಗಿ ಉಳಿಸಿಕೊಂಡು ಬಂದಿದೆ.
ಕನ್ನಡ ನಾಡು ನುಡಿ ಸಾಂಸ್ಕೃತಿಕ ಅನುಗುಣವಾಗಿ ಸಾಕಷ್ಟು ಹಿರಿಯರು ತಮ್ಮ ಸಾಹಿತ್ಯದಿಂದ ಕಲೆಯಿಂದ ನಾಡಿನ ಕೀರ್ತಿ ಪತಾಕೆಗಳನ್ನು ಎತ್ತಿ ಹಿಡಿದು ನಾಡಿಗೆ ತನ್ನದೇ ಆದಂತಹ ಕೊಡುಗೆಗಳನ್ನು ನೀಡಿ ನಾಡಿನ ಹಾಗೂ ಭಾಷೆಯ ಸಂಸ್ಕೃತಿಯ ಘನತೆಯನ್ನು ಉಳಿಸಿದ್ದಾರೆ.
ಇಂತಹ ಇತಿಹಾಸವುಳ್ಳ ಘನತೆ ಉಳ್ಳ ಕರ್ನಾಟಕ ಹಾಗೂ ಕನ್ನಡ ಭಾಷೆ ಜೊತೆಗೆ ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯಗಳು ಅನ್ಯಾಯಗಳು ನಡೆಯುತ್ತಿರುವುದು ಕನ್ನಡಿಗರಾದ ನಮಗೆ ಸಂಕುಚಿತ ಮನೋಭಾವವನ್ನು ಉಂಟು ಮಾಡುತ್ತಿದೆ
ಭಾರತ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯ ವಾಕ್ ಸ್ವಾತಂತ್ರ್ಯಗಳ ಹಾಗೂ ಮೂಲಭೂತ ಹಕ್ಕುಗಳ ವ್ಯಾಪ್ತಿಯನ್ನು ಬಳಸಿಕೊಂಡು ಪ್ರತಿಯೊಬ್ಬ ಭಾರತೀಯನು ತನಗೆ ಇಷ್ಟ ಬಂದಂತಹ ಜಾಗದಲ್ಲಿ ಪ್ರಬುದ್ಧವಾಗಿ ನ್ಯಾಯ ಸಮ್ಮತವಾಗಿ ಬದುಕಲು ಅವಕಾಶವಿರುವುದನ್ನು ಕೆಲವು ಅನ್ಯ ಭಾಷಿಗರು ದುರ್ಬಳಕ್ಕೆ ಮಾಡಿಕೊಂಡು ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯಗಳನ್ನು ಮಾಡುತ್ತಿರುವುದನ್ನು ನಾವು ಪ್ರತಿನಿತ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಪ್ರತಿಷ್ಠಿತ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ.
ಅದರಲ್ಲೂ ಹಳ್ಳಿಯಿಂದ ಪಟ್ಟಣಕ್ಕೆ ಬಂದು ದುಡಿಯುತ್ತಿರುವ ಜನರಿಗೆ ಅಂದರೆ ಕಾರ್ಖಾನೆ ಗಾರ್ಮೆಂಟ್ಸ್ ಕ್ಯಾಬ್ ಡ್ರೈವರ್ ಆಟೋ ಡ್ರೈವರ್ ಜೊತೆಗೆ ಪ್ರತಿಷ್ಠಿತ ಎಮ್.ಎನ್.ಸಿ ಕಂಪನಿಗಳಲ್ಲಿ ಮುಖ್ಯವಾಗಿ ಉತ್ತರ ಕರ್ನಾಟಕದಿಂದ ಬಂದು ದುಡಿಯುತ್ತಿರುವ ಕೂಲಿ ಕಾರ್ಮಿಕರ ಸಹಿತ ಇಂದು ಕರ್ನಾಟಕಕ್ಕೆ ವಲಸೆ ಬಂದು ಜೀವನ ಮಾಡುತ್ತಿರುವ ಅನ್ಯ ಭಾಷಿಗರಿಂದ ಹಲ್ಲೆಗಳಾಗುತ್ತಿರುವುದು ನಿಜಕ್ಕೂ ಖಂಡನೀಯ ಸಂಗತಿಯಾಗಿದೆ.
ನಮ್ಮ ದೇಶದ ಪ್ರಜೆಗಳಾಗಿದ್ದರೂ ಕೂಡಾ ಅವರಿಗೆ ಅವರ ಭಾಷೆಯ ಪ್ರೇಮದ ಅಮಲು ಏರಿ ನಮ್ಮನ್ನು ನಮ್ಮ ರಾಜ್ಯದಲ್ಲೇ ಹೊಡೆಯುವುದು ಬಯ್ಯುವುದು ನಮ್ಮ ಭಾಷೆಯನ್ನು ನಿಂದಿಸುವುದು ನಮ್ಮ ಭಾಷೆಗೆ ಕಲೆಗೆ ಮತ್ತು ಸಂಸ್ಕೃತಿಗೆ ಬೆಲೆ ಕೊಡದೆ ಗೌರವದಿಂದ ನಡೆದುಕೊಳ್ಳುವುದು ಈ ನಡುವೆ ಹೆಚ್ಚಾಗಿ ಕಂಡುಬರುತ್ತದೆ.
ಇತ್ತೀಚಿನ ಕೆಲವು ವರದಿಗಳ ಪ್ರಕಾರ ಕರ್ನಾಟಕದಲ್ಲಿ ಅಂದರೆ ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ಈ ಪ್ರಕರಣಗಳು ಅತಿ ಹೆಚ್ಚಾಗಿ ನಡೆಯುತ್ತಿದ್ದು ಇದಕ್ಕೆ ಈ ಕಾಯ್ದೆಯ ಮೂಲಕ ಕಡಿವಾಣವನ್ನು ಹಾಕಬೇಕಾಗಿದೆ ಜೊತೆಗೆ ಕನ್ನಡ ನಾಡಿನ ನುಡಿ ಸಂಸ್ಕೃತಿ ಹಾಗೂ ಕನ್ನಡಿಗರ ರಕ್ಷಣೆಗೆ ನಾಂದಿ ಆಡಬೇಕಿದೆ.
ಬೇರೆ ರಾಜ್ಯದಿಂದ ಬೆಂಗಳೂರಲ್ಲಿ ಬಂದು ಜೀವನ ನಡೆಸುತ್ತಿರುವ ಕೆಲವು ಪುಢಾರಿಗಳು ತಮ್ಮದೇ ಆದಂತಹ ಗುಂಪುಗಳನ್ನು ನಿರ್ಮಿಸಿಕೊಂಡು ದಾಂಧಲೆಗಳನ್ನು ಮಾಡಿಕೊಂಡು ಕನ್ನಡದ ಘನತೆ ಮತ್ತು ಗೌರವಗಳಿಗೆ ಧಕ್ಕೆ ತರುತ್ತಿದ್ದು ಅಂತಹ ಪುಡಾರಿಗಳಿಗೆ ಈ ಕಾಯ್ದೆಯು ಒಂದು ಬ್ರಹ್ಮಾಸ್ತ್ರವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಸತ್ಯ.
ಕೆಲವೊಂದು ಪ್ರಕರಣಗಳು ಇಂದಿಗೂ ನಮ್ಮ ಕಣ್ಣ ಮುಂದೆ ನಡೆದಂತೆಯೇ ಭಾಸವಾಗುತ್ತಿದೆ.
- ಹೊಸ ವರ್ಷದ ಸಂದರ್ಭಗಳಲ್ಲಿ ಅನ್ಯ ಭಾಷಿಕರು ಮದ್ಯಪಾನ ಮಾಡಿ ತೂರಾಡುತ್ತಿರುವುದು.
- ಕೆಲವು ಪ್ರತಿಷ್ಠಿತ ಏರಿಯಾಗಳಲ್ಲಿ ಹೆಣ್ಣು ಮಕ್ಕಳನ್ನು ತಬ್ಬಿಕೊಳ್ಳುವುದು ಅಸಭ್ಯವಾಗಿ ವರ್ತಿಸುವುದು, ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವುದು.
- ಆಟೋ ಕ್ಯಾಬ್ ಡ್ರೈವರ್ ಗಳ ಮೇಲೆ ಹಲ್ಲೆಗಳಾಗುವುದು ಹಾಗೂ ಸುಳ್ಳು ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದು.
- ಪ್ರತಿಷ್ಠಿತ ಪಬ್ಬು ಮತ್ತು ಬಾರ್ ಗಳಲ್ಲಿ ಕನ್ನಡ ಚಿತ್ರಗೀತೆಗಳನ್ನು ನಿಷೇಧ ಮಾಡುವುದು ಕೇಳಿದರೆ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುವುದು.
- ಎಲ್ಲಾ ಅನ್ಯ ಭಾಷಿಕರ ಅಂಗಡಿಗಳ ಮೇಲೆ ಹಾಗೂ ವ್ಯವಹಾರ ಪತ್ರಗಳಲ್ಲಿ ಕನ್ನಡವನ್ನು ಬಳಸದಿರುವುದು.
- ಕನ್ನಡದ ಪರವಾಗಿ ಹೋರಾಟವನ್ನು ರೂಪಿಸುವ ಹೋರಾಟಗಾರರಿಗೆ ಹಾಗೂ ಕನ್ನಡದ ಪರವಾಗಿ ಜೀವಿಸುವ ಜೀವಗಳಿಗೆ ಹೆದರಿಕೆ ಮತ್ತು ಪ್ರಾಣ ಹಾನಿಯನ್ನು ಮಾಡುವುದು.
- ಅನ್ಯ ಭಾಷಿಕರು ಇರುವ ಏರಿಯಾಗಳಲ್ಲಿ ಅವರದೇ ಭಾಷೆಗಳ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದು.
ಇನ್ನೂ ಅನೇಕ ರೀತಿಯಲ್ಲಿ ಅನ್ಯ ಭಾಷಿಕರಿಂದ ಕನ್ನಡಿಗರ ಮೇಲೆ ನಿರಂತರ ದೌರ್ಜನ್ಯಗಳು ದಬ್ಬಾಳಿಕೆಗೆ ನಡೆಯುತ್ತಿವೆ ಜೊತೆಗೆ ಅವರು ಕರ್ನಾಟಕಕ್ಕೆ ವಲಸೆ ಬಂದು ತಮ್ಮನ್ನು ತಾವು ಹಂತ ಹಂತವಾಗಿ ಬೆಳೆಸಿಕೊಂಡು ತಮ್ಮವರನ್ನು ಕೂಡಾ ಇಲ್ಲಿಗೆ ಕರೆಸಿಕೊಂಡು ನಮ್ಮಲಿಯೇ ಇದ್ದುಕೊಂಡು ನಮ್ಮ ಭಾಷೆ ನೆಲ ಜಲ ನುಡಿಗೆ ದ್ರೋಹ ಮಾಡುತ್ತಿರುವುದು ಖಂಡನೀಯ.
ಅನ್ಯ ಭಾಷಿಕರ ಅಪರಾಧ ತಡೆ ಕಾಯಿದೆ 2025 ರನ್ನು ಈ ಕೆಳಕಂಡ ಕೆಲವು ವಿಷಯಗಳ ಜೊತೆಗೆ ಇನ್ನೊಂದಷ್ಟು ವಿಷಯಗಳನ್ನು ಸೇರಿಸಿ ಕಾಯ್ದೆಯನ್ನು ನಿಯಮ ನಿಬಂಧನೆಗಳೊಂದಿಗೆ ರೂಪಿಸಬೇಕಾಗಿ ಕೋರುತ್ತಾ..
- ರಾಜ್ಯಕ್ಕೆ ಅಕ್ರಮವಾಗಿ ನುಸಳುತ್ತಿರುವವರ ವಿರುದ್ಧ ಕ್ರಮ.
- ರಾಜ್ಯಕ್ಕೆ ಅಕ್ರಮವಾಗಿ ನುನುಳಿದ ವಲಸಿಗರನ್ನು ಗುಂಪು ಕಟ್ಟದಂತೆ ಕ್ರಮ ವಹಿಸುವುದು.
- ಅಕ್ರಮವಾಗಿ ರಾಜ್ಯಕ್ಕೆ ನುಗ್ಗಿದ ವಲಸಿಗರು ಸಂಘ ಸಂಸ್ಥೆಗಳ ಜೊತೆಗೆ ತಮ್ಮ ಅಧಿಕಾರವನ್ನು ಸ್ಥಾಪಿಸಿಕೊಳ್ಳಲು ತಡೆಹಿಡಿಯುವುದು.
- ಅಕ್ರಮವಾಗಿ ರಾಜ್ಯಕ್ಕೆ ನುಗ್ಗಿದ ವಲಸಿಗರು ಇಲ್ಲಿಯೇ ಇರಲು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದು ಅದಕ್ಕೆ ಕಡಿವಾಣ ಹಾಕುವುದು.
- ಅಕ್ರಮವಾಗಿ ಬಂದಂತಹ ವಲಸಿಗರು ಆಸ್ತಿಗಳನ್ನು ಸಂಪಾದಿಸಿಕೊಳ್ಳುತ್ತಿದ್ದು ಅದಕ್ಕೆ ಕ್ರಮ ವಹಿಸುವುದು.
- ಅಕ್ರಮವಾಗಿ ಬಂದಂತಹ ವಲಸಿಗರು ತಮ್ಮ ವ್ಯಾಪಾರ ವ್ಯವಹಾರಗಳನ್ನು ಅನಧಿಕೃತವಾಗಿ ಸ್ಥಾಪಿಸದಂತೆ ಕ್ರಮ ವಹಿಸುವುದು.
- ಕನ್ನಡ ಭಾಷೆ, ನೆಲ, ಜಲ, ನುಡಿಗೆ ಗೌರವವನ್ನು ನೀಡುವುದು ಹಾಗೂ ಕನ್ನಡಿಗರನ್ನು ಪ್ರೀತಿ ಮತ್ತು ಗೌರವದಿಂದ ಕಾಣುವಂತೆ.
- ವಲಸಿಗರು ಅದಷ್ಟು ನಾಡಿನಲ್ಲಿ ನಿಯಂತ್ರಣವಾಗಿ ಕಾನೂನಿನ ಅರಿವನ್ನು ಪಡೆದು ಅಪರಾಧಗಳನ್ನು ಮಾಡದಂತೆ ಕ್ರಮವಹಿಸುವುದು
- ವಲಸೆ ಬಂದಂತಹ ವಲಸಿಗರು ಕೂಡ ಕನ್ನಡದ ಪರವಾಗಿ ದುಡಿದು ಕನ್ನಡಕ್ಕಾಗಿ ಧ್ವನಿ ಎತ್ತುವಂತೆ ಯೋಜನೆಗಳನ್ನು ರೂಪಿಸುವಂದದ್ದು.
- ಹಾಗೂ ಕನ್ನಡದ ಪರವಾಗಿ ಹೋರಾಟ ನಡೆಸುವ ಹೋರಾಟಗಾರರಿಗೆ ಕಾನೂನು ಚೌಕಟ್ಟಿನ ವ್ಯವಸ್ಥೆಗಳನ್ನು ನಿರ್ಮಾಣ ಮಾಡುವುದು.
- ಕನ್ನಡದ ಕನ್ನಡಿಗರಿಗೆ ಎಲ್ಲಾ ವಿಷಯಗಳಲ್ಲೂ ಮೊದಲ ಸ್ಥಾನವನ್ನು ನೀಡುವುದು ಹಾಗೂ ಹೆಚ್ಚಿನ ಗೌರವವನ್ನು ನೀಡುವುದು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮೊನ್ನೆಯಷ್ಟೇ ನಡೆದ ಹುಬ್ಬಳ್ಳಿ ಅಪ್ರಾಪ್ತ ಬಾಲಕಿಯನ್ನು ಬಿಹಾರಿ ಮೂಲದ ವ್ಯಕ್ತಿಯೂಬ್ಬ ಅಪಹರಣ ಮಾಡಿ ಕೊಲೆ ಮಾಡಿದ ಪ್ರಕರಣ ಇದೇ ರೀತಿ ವಲಸಿಗರು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಬಂದು ಬಿಟ್ಟಿರುವುದು ಅಪಾಯದ ಮುನ್ಸೂಚನೆ ಆಗಿದೆ.
ಕನ್ನಡಿಗರ ಮೇಲೆ ಕನ್ನಡದ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಯ ವಿರುದ್ಧ ಈ ಕಾಯ್ದೆಯನ್ನು ಒಂದು ಸಮಿತಿಯೊಂದಿಗೆ ಇನ್ನೊಂದಷ್ಟು ಗಂಭೀರ ವಿಷಯಗಳನ್ನು ಸೇರಿಸಿ ಕೂಡಲೇ ಜಾರಿಗೆ ತಂದು ನಾಡು ನುಡಿಯ ರಕ್ಷಣೆ ಮುಂದಾಗ ಬೇಕೆಂದು ವಿದ್ಯಾರ್ಥಿ ಯುವ ಸಂಘಟನೆಯ ಹಾಸನ ಜಿಲ್ಲಾ ಹೋರಾಟಗಾರ ವರುಣ್ ಚಕ್ರವರ್ತಿ ಹಾಸನ ಉಪ ತಹಶೀಲ್ದಾರ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮುಖಂಡರಾದ ಪೃಥ್ವಿ, ಕಿರಣ್ ಮತ್ತಿತರರು ಮನವಿ ಹಾಜರಿದ್ದರು.
- ಕರುನಾಡ ಕಂದ
