ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರಖೇಡ ಗ್ರಾಮದಲ್ಲಿ ಸುಮಾರು 10 ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಹೆಸ್ಕಾಂ ಪವರ್ ಮೆನ್ ಶ್ರೀ ರಿಯಾಜ್ ಕೆರೂಟಿಗಿ ಯವರಿಗೆ ಇಂದು ಅಗರಖೇಡ ಗ್ರಾಮ ಪಂಚಾಯತಿ ವತಿಯಿಂದ ಹಾಗೂ ಗ್ರಾಮಸ್ಥರಿಂದ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಗ್ರಾ. ಪಂ. ಮಾಜಿ ಉಪಾಧ್ಯಕ್ಷರು ಭೀಮಾಶಂಕರ ಆಳೂರ ಇವರು ಮಾತನಾಡಿ ಇಂಥ ಕೆಲಸಗಾರರು ನಮ್ಮೂರಿಗೆ ಅವಶ್ಯವಿದ್ದು ಯಾವುದೇ ಜಾತಿ ಬೇಧ ಭಾವ ಮಾಡದೆ, ರಾತ್ರಿ ಹಗಲು ಎನ್ನದೆ ಫೋನ್ ಮಾಡಿದಾಗ ಕೆಲಸ ನಿರ್ವಹಿಸುವ ಇಂತ ವ್ಯಕ್ತಿಗೆ ಬೀಳ್ಕೊಡುವುದಕ್ಕೆ ತುಂಬಾ ಬೇಜಾರಾಗುತ್ತಿದೆ ಆದರೂ ಅವರು ವರ್ಗಾವಣೆಯಾಗಿರುವುದರಿಂದ ಅವರಿಗೆ ಬೀಳ್ಕೊಡುತ್ತಾ ಇದೀವಿ, ಮುಂದೆ ಅವಕಾಶ ಸಿಕ್ಕರೆ ನಮ್ಮೂರಿಗೆ ಮತ್ತೆ ಬನ್ನಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಶೋಕ್ ಖಂಡೇಕಾರ್, ವಿಶ್ವನಾಥ್ ಕೌಲಗಿ, ಸುರೇಶ್ ಬಿರಾದಾರ್, ಕಾಶಿನಾಥ್ ಮಾನೆ, ಶ್ಯಾಮ್ ಮೋರೆ, ಸುರೇಶ್ ದಿಕ್ಸಂಗಿ, ಜಾಕಿರ್ ವಾಲೀಕಾರ, ಶ್ರೀಶೈಲ ಸಾವಳೆ, ಚಂದು ಬಡಿಗೇರ, ಧರು ತೇಲಿ, ಮಹಂತೇಶ್ ಬಂಡಗಾರ್, ಸಂತುಗೌಡ ಪಾಟೀಲ್, ಭೀಮರಾಯ ಯಲಮೇಲಿ, ಮುದಕು ಜಗನ್ನಾಥ್, ಜಗೂ ಕೋಟಿ, ಪಿಂಟು ಡಂಗಿ ಮುಂತಾದವರು ಪಾಲ್ಗೊಂಡಿದ್ದರು.
- ಕರುನಾಡ ಕಂದ
