ಬೇಲೂರ ಹಳೇಬೀಡು ಶಿಲ್ಪಕಲೆ ಸುವಾಸನೆ ಸೂಸುವ ಶ್ರೀಗಂಧದ ಅಲೆ
ಅಕ್ಕಮಹಾದೇವಿಯಂತ ಶರಣರ ತಾಣ
ಮಾಸ್ತಿ ಕುವೆಂಪುರವರ ಸಾಹಿತ್ಯದ ಬಣ
ಸಿರಿ ಮಲ್ಲಿಗೆ ಗುಲಾಬಿಗಳ ಕಲರವ ಧುಮುಕಿ ಹರಿಯುವ ಜಲಪಾತಗಳ ಸರಿಗಮ
ಒನಕೆ ಓಬವ್ವನ ಛಲ
ಕಿತ್ತೂರು ರಾಣಿಯ ಬಲ ಅಚಲ
ಶತ್ರುಗಳ ಚಡೇಪಡೆಯುವ ಎದೆಗರ ನಾವು
ಶಿಲೆಯನ್ನು ಆರಾಧಿಸುವ ಹೃದಯವಂತರು ನಾವು.
- ಶೃತಿ ಜೋಷಿ, ರಾಯಚೂರು
