ಬೀದರ / ಬಸವಕಲ್ಯಾಣ : ಮೂಡಬಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬಗದುರಿ ಗ್ರಾಮದ ರೈತರ ಜಮೀನುಗಳಲ್ಲಿ ಮಂಗಗಳ ಕಾಟಕ್ಕೆ ಸುಮಾರು ಸಲ ಅರ್ಜಿ ಸಲ್ಲಿಸಿದರೂ ಕ್ಯಾರೆ ಎನ್ನದ ಅಧಿಕಾರಿಗಳು ರೈತರೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆಂದು ದಿನಾಂಕ 22/05/2025 ಗುರುವಾರ ದಂದು ಪುನಃ ಬಸವಕಲ್ಯಾಣ ತಹಶೀಲ್ದಾರರ ಕಚೇರಿಗೆ ಮುತ್ತಿಗೆ ಹಾಕಿದಾಗ ಅಲ್ಲಿನ ತಹಶೀಲ್ದಾರರು ರೈತರಿಗೆ ಪೊಲೀಸರನ್ನು ಕರೆಸುತ್ತೇನೆ ಎನ್ನುವ ಮೂಲಕ ಬೆದರಿಕೆ ಹಾಕಿದಾಗ ರೈತರು ದಂಡಾಧಿಕಾರಿಗಳ ವಿರುದ್ಧ ಘೋಷಣೆ ಕೂಗತೊಡಗಿದರು. ಆಗ ಅಲ್ಲಿನ ಸಹಾಯಕ ಆಯುಕ್ತರು ಬಂದು ರೈತರ ಸಮಸ್ಯೆ ಆಲಿಸಿ ತಕ್ಷಣವೇ ದಂಡಾಧಿಕಾರಿಗಳು ರೈತರನ್ನು ಕ್ಷಮೆ ಕೇಳಿ ರೈತರಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ ಮೇಲೆ ರೈತರು ಮತ್ತೊಮ್ಮೆ ದಂಡಾಧಿಕಾರಿಗಳಾದ ದತ್ತಾತ್ರಿ ಗಾಧಾ ರವರಿಗೆ ಮನವಿ ಪತ್ರ ಸಲ್ಲಿಸಿ ತಮ್ಮ ಸತ್ಯಾಗ್ರಹ ಅಂತ್ಯಗೊಳಿಸಿದರು.
ಈ ಸಂದರ್ಭದಲ್ಲಿ ನಗರ ಠಾಣೆ ಪಿ.ಎಸ್. ಐ. ಅಂಬರೀಷ್ ವಾಗ್ಮೊಡೆ, ಕ್ರೈಮ್ ಪಿ.ಎಸ್. ಐ. ಸುರೇಶ್ ಹಜ್ಜರ್ಗಿ ಸೇರಿದಂತೆ ಗ್ರಾಮದ ರೈತ ಮುಖಂಡರಾದ ಪ್ರಶಾಂತ ಬಿರಾದಾರ, ಈಶ್ವರ್ ಬಿರಾದಾರ , ಶಿವಾನಂದ ಬಿರಾದಾರ, ಸೂರ್ಯಕಾಂತ ಬಿರಾದಾರ, ಬಸಯ್ಯ ಸ್ವಾಮಿ, ಓಂಕಾರ್ ಬಿರಾದಾರ, ಪರಮೇಶ್ವರ್ ಬಿರಾದಾರ, ನಾರಾಯಣರಾವ್ ಬಿರಾದಾರ , ಜಿತೇಂದ್ರ ಮಂದಿರಾಕರ, ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ ಬಿರಾದಾರ, ಭೀಮಶಾ ಮಂದಿರಕರ್ ಸೇರಿದಂತೆ ಗ್ರಾಮದ ಇತರರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ವರದಿ : ಶ್ರೀನಿವಾಸ ಬಿರಾದಾರ
