
ಚಾಮರಾಜನಗರ/ ಹನೂರು: ಆಪರೇಷನ್ ಸಿಂಧೂರ ವಿಜಯೋತ್ಸವದ ಅಂಗವಾಗಿ ಹನೂರು ಬಿಜೆಪಿ ಮಂಡಲ ವತಿಯಿಂದ ಪಟ್ಟಣದಲ್ಲಿ ತಿರಂಗ ಯಾತ್ರೆ ನಡೆಸಲಾಯಿತು.
ಪಟ್ಟಣದ ಆರ್. ಎಂ. ಸಿ ಆವರಣದಿಂದ ಹೊರಟು ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಮುಖಾಂತರ ಮುಖ್ಯ ರಸ್ತೆಯಲ್ಲಿ ತೆರಳಿ ಭಾರತೀಯ ಸೇನೆ ಮುಖ್ಯಸ್ಥರಿಗೆ ಜೈಕಾರದೊಂದಿಗೆ ಭಾರತ ಮಾತಾಕಿ ಜೈ ಭಾರತಾಂಬೆಗೆ ಜೈ ಎಂದು ಘೋಷಣೆಗಳನ್ನು ಕೂಗುತ್ತಾ, ನಾಗಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.
ಈ ವೇಳೆ ಮಾತನಾಡಿದ ಹನೂರು ಬಿಜೆಪಿ ಮಂಡಲ ಅಧ್ಯಕ್ಷ ವೃಷಭೇಂದ್ರ ಭಾರತೀಯರು ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ನಮ್ಮ ಭಾರತೀಯ ಪ್ರವಾಸಿಗರನ್ನು ಗುಂಡಿಟ್ಟು ಕೊಂದಿದ್ದ ಉಗ್ರವಾದಿಗಳ ವಿರುದ್ಧ ಭಾರತ ಸರ್ಕಾರ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನೂರಾರು ಭಯೋತ್ಪಾದಕರನ್ನು ಮಟ್ಟ ಹಾಕುವ ಮೂಲಕ ಪಾಕಿಸ್ತಾನದೊಳಗೆ ಭಯೋತ್ಪಾದಕ ಅಡಗುತಾಣಗಳನ್ನು ಚಿದ್ರಗೊಳಿಸಿದ್ದಾರೆ. ನಮ್ಮ ಭಾರತೀಯ ಸೇನೆ ಹಾಗೂ ಯೋಧರಿಗೆ ಧನ್ಯವಾದಗಳು ತಿಳಿಸುತ್ತೇವೆ. ಭಾರತೀಯ ಸೈನಿಕರಿಗೆ ಬೆಂಬಲವಾಗಿ ಈ ಯಾತ್ರೆಯನ್ನು
ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಎಪಿಎಂಸಿ ಮತ್ತು ಬಿಜೆಪಿ ಮಂಡಲ ಅಧ್ಯಕ್ಷರು ಜಗನ್ನಾಥ ನಾಯ್ಡು, ಬಿಜೆಪಿ ಒಬಿಸಿ ಘಟಕದ ಸಂಚಾಲಕ ಲೋಕೇಶ್ ಜಟ್ಟಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವರಪ್ರಸಾದ್, ಮುಖಂಡರಾದ ರವಿ, ವಕೀಲ ಚಿನ್ನರಾಜು, ಮಾತೃಭೂಮಿ ಮೂರ್ತಿ, ಬಸವಣ್ಣ ಇನ್ನಿತರರು ಯಾತ್ರೆಯಲ್ಲಿ ಭಾಗವಹಿಸಿದ್ದರು.
ವರದಿ ಉಸ್ಮಾನ್ ಖಾನ್
