ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಸವಲತ್ತು ಕಟ್ಟ ಕಡೆಯ ವ್ಯಕ್ತಿಗಳಿಗೆ ತಲುಪಿಸಲು ಕ್ರಮ : ಶಾಸಕ ಎಂ.ಆರ್. ಮಂಜುನಾಥ್

ಚಾಮರಾಜನಗರ/ ಹನೂರು : ತಾಲೂಕಿನ ಒಡೆಯರಪಾಳ್ಯ ಗ್ರಾಮವೇ ಒಂದು ಸುಂದರ ರಮಣೀಯವಾದ ಪ್ರೇಕ್ಷಣೀಯ ಸ್ಥಳ ಹಾಗೂ ಮಲೆನಾಡಿನಂತಿದೆ ಇಲ್ಲಿ ಇಂತಹ ಸಂಘಟನೆಯನ್ನು ಮಾಡಿರುವುದು ಬಹಳ ಸಂತೋಷವಾಗಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಹನೂರು ತಾಲ್ಲೂಕಿನ ಒಡೆಯರಪಾಳ್ಯದ ಶ್ರೀ ಗುರುಮಲ್ಲೇಶ್ವರ ಸಭಾ ಭವನದಲ್ಲಿ ಉದ್ಘಾಟನೆಗೊಂಡ ಕರ್ನಾಟಕ ರಾಜ್ಯ ಭಾರತಮಾತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ರಿ.) ಉದ್ಘಾಟನೆ ಮತ್ತು ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕಾರ್ಮಿಕ ವರ್ಗಕ್ಕೆ ಸಿದ್ದರಾಜು ಪ್ರಾರಂಭಿಸಿದ ಸಂಘವನ್ನು ಇಂದು ಬೃಹದಾಕಾರದಲ್ಲಿ ಬೆಳೆಸಿದ್ದಾರೆ ,ಸರ್ಕಾರವು ನಿಮಗೆ ಸಹಾಯ ಮಾಡಲು ಅನೇಕ ಯೋಜನೆಯನ್ನು ನೀಡುತ್ತದೆ ಹನೂರು ತಾಲ್ಲೂಕಿನಲ್ಲಿ ಸುಮಾರು ನಾಲ್ಕು ಸಾವಿರದ ಐದು ನೂರು ಸದಸ್ಯರು ನೊಂದಾಯಿತರಾಗಿದ್ದಾರೆ ಇಂತಹ ಸಂದರ್ಭಗಳಲ್ಲಿ ಕಾರ್ಮಿಕರ ಹಿತರಕ್ಷಣೆಗಾಗಿ ಅಧಿಕಾರಿಗಳು ಪ್ರಚಾರ ಕಾರ್ಯವನ್ನು ಮಾಡಬೇಕು , ಇದು ಶ್ರಮಿಕ ವರ್ಗವಾಗಿದೆ ಎಲ್ಲರಿಗೂ ಮಾಹಿತಿ ತಲುಪಿ ಸರ್ಕಾರದ ಯೋಜನೆಯನ್ನು ಪಡೆದುಕೊಳ್ಳಲು ಸಹಕಾರಿಯಾಗಬೇಕು , ಪಿಂಚಣಿ ನೀಡುವಂತಹ ಕಾರ್ಯವನ್ನು ಸಹ ವಯಸ್ಸಾದಂತಹವರಿಗೆ ಮಾಡಿಸಬೇಕು ,ಈ ಸ್ಥಳವು ನಿಮಗೆ ಆರ್ಥಿಕವಾಗಿ ಸದೃಡವಾಗಲು ಉತ್ತಮ ಸ್ಥಳವಾಗಿದೆ ,ಕೃಷಿಗೆ ಇಲ್ಲಿ ಉತ್ತಮ ವಾತಾವರಣ ನಿರ್ಮಿಸ ಬೇಕಾಗುತ್ತದೆ , ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವಾರು ರಸ್ತೆಗಳ ಕಾಮಗಾರಿಗಳನ್ನು ಮಾಡಲು ಮುಂದಾಗುತ್ತೇನೆ , ನೀರಿನ ಅಭಾವವಾಗದಂತೆ ಮಾಡಲಾಗುತ್ತದೆ , ಪ್ರತಿಯೊಂದು ಸಮಾನ ರೀತಿಯಲ್ಲಿ ತಲುಪಲು ಸಂಘವು ಸಹಕಾರಿಯಾಗಬೇಕು ಮುಂದಿನ ದಿನಗಳಲ್ಲಿ ನನ್ನಿಂದ ನಿಮಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.

ಇದೇ ಸಮಯದಲ್ಲಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾಕ್ಟರ್ ದತ್ತೇಶ್ ಕುಮಾರ್ ರಾಜ್ಯದಲ್ಲೆ ಕಟ್ಟಡ ಕಾರ್ಮಿಕರು ಮೊದಲಿಗೆ ಅತಿ ನಿರ್ಲಕ್ಷ್ಯಕ್ಕೆ ಒಳಗಾದ ಸಂಘಟನೆಯಾಗಿತ್ತು ಆದರೆ ಇಂದು ಬಹಳ ಎತ್ತರಕ್ಕೆ ಬೆಳೆದಿದ್ದಾರೆ , ಮೂಲ ಕಟ್ಟಡ ನಿರ್ಮಾಣ ಮಾಡಬೇಕಾದರೆ ಸರ್ಕಾರವು ಒಂದು ಪರ್ಸೆಂಟ್ ಹಣವನ್ನು ಸೆಸ್ ಕಟ್ಟಿಸಿಕೊಳ್ಳಲಾಗುತ್ತದೆ ಅದರಿಂದ ನಿಮಗೆ ಉಪಯೋಗವಾಗುತ್ತದೆ ಸರ್ಕಾರದಿಂದ ಕಾರ್ಮಿಕರ ಕಲ್ಯಾಣ ನಿಧಿಯನ್ನು ಸಂಗ್ರಹ ಮಾಡಲಾಗುತ್ತಿದೆ ಪ್ರತಿಯೊಬ್ಬರೂ ಸರ್ಕಾರದಿಂದ ನೀಡುವ ಗುರುತಿನ ಚೀಟಿಯನ್ನು ಪಡೆದುಕೊಂಡು ಸರ್ಕಾರದಿಂದ ನೀಡುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಸಂಘ ನಿಮಗೆ ನೀಡುತ್ತದೆ ಎಂದು ತಿಳಿಸಿದರು.

ನಂತರ ಸಂಘದ ರಾಜ್ಯದ್ಯಕ್ಷರಾದ
ಸಿದ್ದರಾಜು ಮಾತನಾಡಿ 1996 ರಲ್ಲಿ ಈ ಕಟ್ಟಡ ಕಾರ್ಮಿಕರ ಸಂಘ ಪ್ರಾರಂಭಿಸಲಾಯಿತು ಕಾರಣ ನಾನು ಕಂಡ ಒಂದು ಸಾವಿನ ಘಟನೆಯಿಂದ ನೊಂದು ಈ ಸಂಘಟನೆ ಪ್ರಾರಂಭಿಸಿದ್ದೇನೆ ರಾಜ್ಯವ್ಯಾಪಿ ಸಂಘವನ್ನು ಉದ್ಘಾಟನೆ ಮಾಡಿದ್ದೇವೆ , ನಾವು ಸರ್ಕಾರ ಮತ್ತು ಕಾರ್ಮಿಕರ ನಡುವಿನ ಕೊಂಡಿಯಾಗಿ ಮಾಡಲು ಕೆಲಸ ಮಾಡಲು ಸದಾ ಸಿದ್ದರಾಗಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರ ಇಲಾಖೆಯಿಂದ ವಿವಿಧ ಸವಲತ್ತುಗಳನ್ನು ಪಲಾನುಭವಿಗಳಿಗೆ ನೀಡಲಾಯಿತು.

ಇದೇ ಸಂದರ್ಭದಲ್ಲಿ ಸಹಾಯಕ ಕಾರ್ಯ ಅಭಿಯಂತರರು ರಂಗಸ್ವಾಮಿ , ನೂರ್ ಅಹ್ಮದ್ ಮೈಸೂರು , ತಾಲ್ಲೂಕು ಅದ್ಯಕ್ಷರುಗಳಾದ ರಾಜೇಶ್ , ಕಾರ್ಮಿಕ ನಿರೀಕ್ಷಕರಾದ ವಿ ಎಲ್ ಪ್ರಸಾದ್ ,ಸಂಘದ ಅದ್ಯಕ್ಷ ನಾಗೇಂದ್ರ ,ವಿಶ್ವನಾಥ್ ,ಮಂಜುನಾಥ್ .ಜಿ. ಸೇರಿದಂತೆ ಇನ್ನಿತರರು ಹಾಜರಿದ್ದರು.

ವರದಿ :ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ