ಚಾಮರಾಜನಗರ/ ಹನೂರು :ಆನೆ ಕಂದಕಗಳನ್ನು ನಿರ್ಮಿಸಲು ನೂರಾಎಂಬತ್ತು ಕೋಟಿ ಹಣ ಬಿಡುಗಡೆಯಾಗಿದೆ ಅದರಲ್ಲಿ ಕ್ಷೇತ್ರದಲ್ಲಿ ಸದ್ಬಳಕೆ ಮಾಡಲು ತೀರ್ಮಾನ ಮಾಡಲು ಸೂಚಿಸಿದರು. ಮಾವತ್ತೂರು ಗ್ರಾಮದಲ್ಲಿ ನಡೆದ ಸ್ಥಳ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೆಳಕು ಯೋಜನೆಯನ್ನು ಸಮರ್ಪಕ ರೀತಿಯಲ್ಲಿ ಬಳಸಲು ಗುತ್ತಿಗೆದಾರರಿಗೆ ಸೂಚಿಸಿದರು.
ಕುಡಿಯುವ ನೀರಿನ ಸರಬರಾಜು ಮಾಡಲು ಪಂಚಾಯಿತಿಯಿಂದ ಅವಕಾಶ ಮಾಡಿಕೊಡಬೇಕು , ಉತ್ತಮವಾಗಿ ಚರಂಡಿ ಹೂಳೆತ್ತಲು ವ್ಯವಸ್ಥೆಯನ್ನು ಮಾಡಬೇಕು ಈ ರಸ್ತೆಯಲ್ಲಿ ಮೆಟ್ಲಿಂಗ್ ಮಾಡಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಗೊಂಬೆಗಲ್ಲು, ನೆಲ್ಲಿಕತ್ರಿ ಕೆರೆದಿಂಬಗಳಲ್ಲಿ 21 ಕಿಲೋಮೀಟರ್ ದೂರ ಬೆಳಕು ಯೋಜನೆಯನ್ನು ಮಾಡಲು ಅಂದಾಜು ವೆಚ್ಚ ಐದುಕೋಟಿ ರೂ. ಗಳಷ್ಟು ವಿನಿಯೋಗಿಸಲಾಗಿದೆ ,ಈ ಯೋಜನೆಯನ್ನು ಸಮರ್ಪಕವಾಗಿ ಮಾಡಲು ಗುತ್ತಿಗೆದಾರರಿಗೆ ಸೂಚಿಸಿದರು. ಇದೇ ಸಮಯದಲ್ಲಿ ಪಿಜಿ ಪಾಳ್ಯದಲ್ಲಿನ ದೊಡ್ಡಕೆರೆ ಒತ್ತುವರಿ ಸ್ಥಳದಲ್ಲೆ ಹುಕುಂ ನೀಡಿದವರಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿದರು. ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಹದಿನೈದನೆ ಹಣಕಾಸು ಯೋಜನೆಯ ಖರ್ಚುವೆಚ್ಚದ ಬಗ್ಗೆ ಮಾಹಿತಿ ಪಡೆದು ಅಭಿವೃದ್ಧಿ ಮಾಡಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಹಾಯಕ ಅಭಿಯಂತರರಾದ ರಂಗಸ್ವಾಮಿ ,ಕೆ ಆರ್ ಐಡಿಎಲ್ ಅಭಿಯಂತರರು ಕಾರ್ತಿಕ್ , ಪರಿಶಿಷ್ಟ ವರ್ಗಗಳ ತಾಲ್ಲೂಕು ಅಧಿಕಾರಿಗಳಾದ ರಾಜೇಶ್ ,ಮುಖಂಡರುಗಳಾದ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ ,ಮಹದೇವಸ್ವಾಮಿ , ಇಂದುವಾಡಿ ಗೋವಿಂದ, ಎಸ್,ಆರ್ ಮಹಾದೇವ,ಗೋವಿಂದ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್
