ವಿಜಯನಗರ / ಹೊಸಪೇಟೆ : ಮದುವೆ ಎಂದರೆ ಹಲವರ ಜೀವನದಲ್ಲಿ ಒಂದು ವಿಶೇಷತೆ, ಮದುವೆಗಳು ವಿಚಿತ್ರ ವಿಶೇಷ ಎನಿಸುವಂತೆ ನಡೆದಿದೆ ವಿಮಾನದಲ್ಲಿ, ನಗರದ ವೃತ್ತಗಳಲ್ಲಿ ನಿಂತು, ಐಷಾರಾಮಿ ಹೋಟೆಲ್ಗಳಲ್ಲಿ, ದೂರದ ದೇವಸ್ಥಾನಗಳಲ್ಲಿ , ಅಷ್ಟೇ ಏಕೆ ಸ್ಮಶಾನಗಳಲ್ಲಿಯೂ ಮದುವೆಯಾದವರು ಇದ್ದಾರೆ.
ಕೆಲವರಿಗೆ ಕೋರ್ಟ್, ವಿಧಾನಸೌಧ, ತಾಜ್ ಮಹಲ್, ಅರಮನೆಗಳಲ್ಲಿ ಮದುವೆ ಆಗುವ ಕನಸು ಇರುತ್ತದೆ.
ಮಾದರಿ ಎನಿಸುವ ಕುವೆಂಪು ತೋರಿಸಿದ ಸರಳ ಮಂತ್ರ ಮಾಂಗಲ್ಯದ ರೀತಿಯಲ್ಲಿ ಮದುವೆಗಳು ನಡೆದಿದೆ ಆದರೆ ಇಲ್ಲೊಂದು ಜೋಡಿ ವಿಶೇಷವಾಗಿ ಮಾದರಿ ಎನಿಸುವಂತೆ ಸಂವಿಧಾನದ ಸಾಕ್ಷಿಯಾಗಿ ಸರಳವಾಗಿ ವಿವಾಹ ನೆರವೇರಿಸಿಕೊಂಡಿರುವುದು ಬುದ್ಧ, ಬಸವ, ಅಂಬೇಡ್ಕರ್, ಆಸೆಗಳ ಪಾಲನೆಗೆ ಕಂಕಣ ಬದ್ಧರಾಗಿರುವುದು ಇಂದಿನ ಯುವ ಜನಾಂಗಕ್ಕೆ ಸಮಾಜಕ್ಕೆ ಮಾದರಿ ನಡೆಯಾಗಿದೆ ಇಂಥದೊಂದು ಮಾದರಿ ಮದುವೆ ಹೊಸಪೇಟೆಯಲ್ಲಿ ನಡೆದಿದೆ.
ಹೊಸಪೇಟೆಯ ಜೆ. ಶಿವಕುಮಾರ್ ಹಾಗೂ ಜಿ. ಸ್ವಾತಿ ಎಂಬುವರು ವಿನೂತನ ರೀತಿಯಲ್ಲಿ ಸಂವಿಧಾನದ ಸಾಕ್ಷಿ ಸಾಂಗತ್ಯದ ವಿವಾಹವಾದ ನವ ಜೋಡಿಗಳು.
ಒಟ್ಟಿನಲ್ಲಿ ಆಡಂಬರದ ಜೀವನಕ್ಕೆ ಮಾರು ಹೋಗುತ್ತಿರುವ ಇಂದಿನ ಯುವ ಜನಾಂಗದ ನಡುವಿನಲ್ಲಿ ಸಂವಿಧಾನದ ಆಶಯಗಳಿಗೆ ತಕ್ಕಂತೆ ಬುದ್ಧ , ಬಸವ, ಅಂಬೇಡ್ಕರ್ ಹಾಗೂ ಶರಣ ಸಂಸ್ಕೃತಿಯ ಆಶಯಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಯುವ ಜೋಡಿಯೊಂದು ಹೊಸ ಬಾಳಿಗೆ ಹೆಜ್ಜೆ ಇಟ್ಟಿರುವುದು ಸಮಾಜದ ಹಿತದೃಷ್ಟಿಯಿಂದ ಒಂದು ಉತ್ತಮ ಹೆಜ್ಜೆ ಇದೇ ರೀತಿಯ ಹತ್ತು , ಹಲವು, ಸಾವಿರಾರು ವಿವಾಹಗಳು ನೆರವೇರಲಿ. ಸಾಮಾಜಿಕ ಸಮಾನತೆ ಕೌಟಂಬಿಕ ಭದ್ರತೆಗೆ ಮಾದರಿಯಾಗಲಿ ಹಾಗೂ . ಶಿವಕುಮಾರ್ ಜಿ. ಸ್ವಾತಿ ಜೋಡಿ ನೂರಾರು ಕಾಲ ಸಮಾನತೆ ಸಹ ಬಾಳ್ವೆಯ ಜೀವನದೊಂದಿಗೆ ಸಮಾಜಕ್ಕೆ ಮಾದರಿಯಾಗಲಿ ಎನ್ನುವುದು ಎಲ್ಲರ ಆಶಯ.
ವರದಿ : ಜಿಲಾನಸಾಬ್ ಬಡಿಗೇರ್
