ಬಳ್ಳಾರಿ / ಕಂಪ್ಲಿ : ಕರ್ನಾಟಕ ರಕ್ಷಣಾ ವೇದಿಕೆ ಟಿ. ಎನ್. ನಾರಾಯಣಗೌಡ ಬಣದ ಪದಾಧಿಕಾರಿಗಳು ನಿನ್ನೆ ನಮ್ಮ ಕರುನಾಡ ಕಂದ ಪತ್ರಿಕೆಯ ನ್ಯೂಸ್ ಪೋರ್ಟಲ್ ನಲ್ಲಿ “ನಾಮಫಲಕ, ಜಾಹೀರಾತು ಬ್ಯಾನರ್ ಗಳಲ್ಲಿ ಕನ್ನಡವೇ ಮಾಯ” ಎಂಬ ಶೀರ್ಷಿಕಡಿಯಲ್ಲಿ ಮಾಡಿದ ವರದಿಗೆ ಇಂದು ಎಚ್ಚೆತ್ತುಕೊಂಡು ಕಂಪ್ಲಿ ಕ್ಷೇತ್ರಾಧ್ಯಕ್ಷ ಬಳೆ ಮಲ್ಲಿಕಾರ್ಜುನ, ತಾಲೂಕು ಅಧ್ಯಕ್ಷ ಸಿ.ಡಿ. ರಾಜಶೇಖರ ಹಾಗೂ ಪದಾಧಿಕಾರಿಗಳು ಇಂದು ಪುರಸಭೆಯ ವ್ಯವಸ್ಥಾಪಕ ಚಿತ್ರಗಾರ ಪ್ರಶಾಂತರವರಿಗೆ ಮನವಿ ಪತ್ರವನ್ನು ನೀಡಿದ ನಂತರ ಮಾತನಾಡಿ ಕಂಪ್ಲಿಯಲ್ಲಿ ಆಂಗ್ಲ ಭಾಷೆ ನಾಮಫಲಕಗಳನ್ನು ರಾಜಾರೋಷವಾಗಿ ಹಾಕಲಾಗಿದೆ. ಆಂಗ್ಲ ಭಾಷೆಯ ನಾಮಫಲಕಗಳ ಹಾವಳಿ ಹೆಚ್ಚಾಗಿದೆ. ಅಂಗಡಿ, ಹೋಟೆಲ್ ಗಳ ನಾಮಫಲಕಗಳು ಆಂಗ್ಲಮಯವಾಗಿವೆ, ಕನ್ನಡ ಪ್ರಧಾನ ಭಾಷೆಯಾಗಿ ಕರ್ನಾಟಕ ಸರ್ಕಾರದ ಆದೇಶ ನಿಗದಿ ಪಡಿಸಿದ ಶೇಕಡಾ 60ರಷ್ಟು ಕನ್ನಡವನ್ನು ಬಳಸಿ ನಾಮ ಫಲಕಗಳನ್ನು ಹಾಕಬೇಕು ಮತ್ತು ಬ್ಯಾನರ್ ತಯಾರಿಸುವವರಿಗೆ ಸಹ ಪುರಸಭೆ ಆಡಳಿತ ಸೂಚಿಸಬೇಕೆಂದು ಮುಖ್ಯ ಅಧಿಕಾರಿಗಳಿಗೆ ವಿನಂತಿಸಿದರು. ಒಂದು ವೇಳೆ ಇದನ್ನು ಪಾಲಿಸದಿದ್ದರೆ ನಾಮಫಲಕಗಳಿಗೆ ಕಪ್ಪುಮಸಿಯನ್ನು ಬಳೆಯುತ್ತೇವೆಂದು ಆಗ್ರಹಿಸಿದರು. ಒಂದು ವಾರದೊಳಗೆ ಅಂದರೆ 31ನೇ ಮೇ 2025 ಕನ್ನಡದಲ್ಲಿ ಅಳವಡಿಸಬೇಕು ಇಲ್ಲವಾದಲ್ಲಿ ಕಪ್ಪು ಮಸಿಯನ್ನು ಬಳೆಯುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಜಂಗ್ ನಾಗರಾಜ, ರಾಘವೇಂದ್ರ, ಕಂಬಳಿ ರಾಮಕೃಷ್ಣ, ಎನ್ ಶಾಷವಲಿ, ಜೆ. ಕಾರ್ತಿಕ್, ಪರಶುರಾಮ, H. ಲಿಂಗೇಶ, ರಾಘು, ಸುಧಾಕರ, ವೀರನಗೌಡ, ಆಯೋದಿ ರಮೇಶ, ವಿ. ಟಿ. ನಾಗರಾಜ, ಹೂಗಾರ್ ಗಣೇಶ, ಇಟ್ಗಿ ಈರಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
