
ಯಾದಗಿರಿ/ ಸೈದಾಪುರ: ತಾಲ್ಲೂಕಿನ ಸೈದಾಪುರ ಮೂಲದ ದಿಲೀಪ್ ಕುಮಾರ್ ದೋಖಾ ಎಂಬ 55 ವರ್ಷದ ಕೋಟ್ಯಾಧಿಪತಿ, ಜೈನ್ ಬಡಾವಣೆಯ ನಿವಾಸಿ, ನೂರಾರು ಕೋಟಿ ರೂ ಆಸ್ತಿಯ ಒಡೆಯ, ಮೂವರು ಹೆಣ್ಣು ಮಕ್ಕಳು ಮತ್ತು ಪತ್ನಿಯನ್ನು ಬಿಟ್ಟು ಇದೀಗ ಜೈನ ದೀಕ್ಷೆ ಪಡೆದಿದ್ದಾರೆ.
ಆಧುನಿಕ ಕಾಲಘಟ್ಟದಲ್ಲಿ ಎಲ್ಲವನ್ನೂ ತೊರೆದು ಧರ್ಮದ ರಕ್ಷಣೆಯ ಕೆಲಸ ಮಾಡುವವರು ವಿರಳ. ಅದರಲ್ಲೂ ಸನ್ಯಾಸ ದೀಕ್ಷೆ ಪಡೆಯುತ್ತಿರುವವರು ತೀರಾ ಕಡಿಮೆ ಅದಕ್ಕೆ ವಿರುದ್ದ ಎನ್ನುವ ಹಾಗಾಗಿದೆ.
ದಿಲೀಪ್ ಕುಮಾರ್ ದೋಖಾ ಅವರು ಸುಮಾರು ವರ್ಷಗಳಿಂದ ಅಮೆರಿಕಾದಲ್ಲಿ ಮೆಡಿಸಿನ್ ಉತ್ಪಾದನಾ ವ್ಯವಹಾರ ಮಾಡುತ್ತಿದ್ದರು, ಸೈದಾಪುರ ಸೇರಿದಂತೆ ಬೆಂಗಳೂರಿನಲ್ಲೂ ಆಸ್ತಿ ಹೊಂದಿದ್ದಾರೆ. ದಿಲೀಪ್ ಕುಮಾರ್ ದೋಖಾ ಸಂಸಾರ ಜೀವನಕ್ಕೆ ವಿದಾಯ ಹೇಳಿ, ತನ್ನ ಮಕ್ಕಳ ಮದುವೆ ಆದ ಕೂಡಲೇ ಜೈನ ಮುನಿ ಆಗಿ ಪರಿವರ್ತನೆ ಆಗಿದ್ದಾರೆ.
ದಿಲೀಪ್ ಕುಮಾರ್ ದೋಖಾ ಅವರು ಜೈನ ದೀಕ್ಷೆ ತಮ್ಮ 14 ನೇಯ ವಯಸ್ಸಿನಲ್ಲಿ ಪಡೆಯುವಾಗ ಪೋಷಕರು ವಿರೋಧ ಪಡಿಸಿದ ಕಾರಣ ತೆಗೆದುಕೊಳ್ಳಲು ಸಾಧ್ಯವಾಗದ ಹಿನ್ನಲೆಯಲ್ಲಿ 41 ವರ್ಷಗಳ ಬಳಿಕ ಈಗ ಸ್ವಿಕಾರ ಮಾಡಿದ್ದಾರೆ.
ಇನ್ನು ಜೈನ್ ದೀಕ್ಷೆ ಪಡೆದಿದ್ದಕ್ಕೆ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಕೊನೆಯದಾಗಿ ಅದ್ದೂರಿಯಾಗಿ ಸೈದಾಪುರ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾರೋಟದಲ್ಲಿ ಮೆರವಣಿಗೆ ಮಾಡಿ ಬಿಳ್ಕೋಡುಗೆ ನೀಡಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ
