
ಬೀದರ / ಬಸವಕಲ್ಯಾಣ : ನಗರದಲ್ಲಿ ಇಂದು ದಿನಾಂಕ 24/05/2025 ಶನಿವಾರ ದಂದು ಆಪರೇಶನ್ ಸಿಂಧೂರ ಹಿನ್ನೆಲೆಯಲ್ಲಿ ನಗರದ ಕೋಟೆಯಿಂದ ಬೃಹತ್ ಆಕಾರದ ತಿರಂಗಾ ಧ್ವಜ ಯಾತ್ರೆಯು ಮುಖ್ಯ ರಸ್ತೆ ಮಾರ್ಗವಾಗಿ ಗಾಂಧಿಚೌಕ್, ಬಸವೇಶ್ವರ ಚೌಕ, ಅಂಬೇಡ್ಕರ್ ಚೌಕ, ಹರಳಯ್ಯ ಚೌಕದಿಂದ ಶಿವಾಜಿ ಮಹಾರಾಜರ ಚೌಕ ವರೆಗೆ ಅದ್ದೂರಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಬಸವಕಲ್ಯಾಣ ಶಾಸಕರಾದ ಶ್ರೀ ಶರಣು ಸಲಗರ, ತಹಶೀಲ್ದಾರ ಸಾವಿತ್ರಿ ಶರಣು ಸಲಗರ, ಹುಮನಾಬಾದ ಶಾಸಕ ಶ್ರೀ ಸಿದ್ದು ಪಾಟೀಲ್, ಹಾರಕೂಡದ ಪರಮ ಪೂಜ್ಯ ಶ್ರೀ ಷ. ಬ್ರ. ಡಾ. ಚನ್ನವೀರ ಶಿವಾಚಾರ್ಯರು, ಡಾ. ಅಭಿನವ ಘನಲಿಂಗ ಶಿವಾಚಾರ್ಯರು, ಹಿರೇನಗಾಂವ್ ಶ್ರೀಗಳು, ಮುಚಲಮಬ ಶ್ರೀಗಳು, ಮಂಠಾಳ ಶ್ರೀಗಳು, ಸೇರಿದಂತೆ ರಾಜಕೀಯ ಮುಖಂಡರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹೀಗೆ ಅಪಾರ ಜನಸ್ತೋಮದ ಮಧ್ಯೆ ತಿರಂಗಾ ಧ್ವಜ ಯಾತ್ರೆ ಅದ್ದೂರಿಯಾಗಿ ಜರುಗಿತು.
ವರದಿ : ಶ್ರೀನಿವಾಸ್ ಬಿರಾದಾರ
