ಬೆಂಗಳೂರು/ ನೆಲಮಂಗಲ :
ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಸಹ ಯಾವ ಪುರುಷಾರ್ಥಕ್ಕಾಗಿ ಈ ವೃಷಭಾವತಿ ಹೆಸರಿನಲ್ಲಿ ಕೊಳಚೆ ನೀರು ತರುವ ಯೋಜನೆಗೆ ಸರ್ಕಾರ ಮುಂದಾಗಿದೆ ಎಂಬುದೆ ಯಕ್ಷ ಪ್ರಶ್ನೆಯಾಗಿದೆ ಹರಿಸುವುದೇ ಆದರೆ ಹೇಮಾವತಿ ನದಿ ನೀರು ಹರಿಸಲಿ ಅದು ಬಿಟ್ಟು ಕೊಳೆತು ನಾರುವ ರಾಸಾಯನ ಯುಕ್ತ ನೀರನ್ನು ಫಲವತ್ತಾದ ಗ್ರಾಮೀಣ ಭಾಗಕ್ಕೆ ಬಿಡುವುದು ಎಷ್ಟು ಮಾತ್ರ ಸರಿ, ನಿಮ್ಮ ಮನೆ ಮಗ ಎನ್ನುತ್ತ ಸದಾ ರೈತರ ಪರ ನಾನು ರೈತ ವಿರೋಧಿ ಕಾರ್ಯ ಎಂದೂ ಮಾಡುವುದಿಲ್ಲ ಎಂದು ಹೇಳುವ ಶಾಸಕರು ಈಗ ಮತ ಹಾಕಿದ ಗ್ರಾಮೀಣ ಭಾಗದ ಜನತೆಗೆ ಮತ ಹಾಕಿದ ತಪ್ಪಿಗೆ ವಿಷವುಣಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಕೇವಲ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಜನತೆ ಎದುರಿಸುತ್ತಿರುವ ಸಮಸ್ಯೆಯನ್ನು ಕಂಡರೂ ಕಾಣದಂತೆ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ಸಂಸ್ಕರಿಸಿದ ಹೆಸರಲ್ಲಿ ಹರಿಸುವ ನೊರೆ ಮಿಶ್ರಿತ ನೀರಿನಿಂದ ಜಲಚರಗಳಿಗೆ ಕಂಟಕ ಉಂಟಾಗುತ್ತದೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ, ವಿದ್ಯಾವಂತರಾದ ಶಾಸಕರ ಈ ನಡೆ ಬೇಸರ ತರಿಸಿದೆ, ವೃಷಭಾವತಿ (ಕೊಳಚೆ) ಏತ ನೀರಾವರಿ ಯೋಜನೆಯಿಂದಾಗುವ ನೂರಾರು ದುಷ್ಪರಿಣಾಮಗಳು ಕಣ್ಮುಂದೆಯೇ ಇದ್ದರು ಕಣ್ಮುಚ್ಚಿ ಕುಳಿತಿದ್ದಾರೆ ಈ ಕೊಳಚೆ ನೀರಿನ ಯೋಜನೆಯ ಅಡ್ಡಪರಿಣಾಮದ ತೀವ್ರತೆಯನ್ನು ಅರಿತು ಕೂಡ ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ತರಲು ಶಾಸಕರು ಪಟ್ಟುಹಿಡಿದಲ್ಲಿ ಪ್ರಾಣಬಿಡಲು ಸಿದ್ದವೇ ಹೊರತು ನೀರು ಹರಿಸಲು ಬಿಡುವುದಿಲ್ಲ ಎಂದು ನೆಲಮಂಗಲ ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷರಾದ ಜಗದೀಶ್ ಚೌಧರಿ ನೆಲಮಂಗಲ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
- ಕರುನಾಡ ಕಂದ
