ಬಳ್ಳಾರಿ/ ಕಂಪ್ಲಿ : ಕಂಪ್ಲಿಯ ಪಶು ಆಸ್ಪತ್ರೆಯ ಕಿರಿಯ ಪಶು ವೈದ್ಯಕೀಯ ಪರೀಕ್ಷಕ ಉಪ್ಪಳಪ್ಪ, ಮೆಟ್ರಿ ಆಯುಷ್ಮಾನ್ ಆರೋಗ್ಯ ಮಂದಿರದ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಎರ‍್ರಿಸ್ವಾಮಿ, ಕಣವಿ ತಿಮ್ಮಲಾಪುರದ ಸ್ವಾಮಿ ವಿವೇಕಾನಂದ ಯೂತ್ ಅಸೋಷಿಯೇಷನ್ ಅಧ್ಯಕ್ಷ ಜಗದೀಶ್ ಪೂಜಾರ್ ಇವರ ಸಮಾಜ ಸೇವೆಯನ್ನು ಗುರುತಿಸಿ, ಹೊಸಪೇಟೆಯ ಸಂಗೀತ ಭಾರತಿ ಸಂಸ್ಥೆಯು ಭಾನುವಾರ ಸಮಾಜ ಸೇವಾ ಭಾರ್ಗವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಗೀತ ಭಾರತಿ ಅಧ್ಯಕ್ಷ ಎಚ್.ಪಿ.ಕಲ್ಲಂಭಟ್, ರಂಗಭೂಮಿ ಕಲಾವಿದರಾದ ಕೃಷ್ಣ ಕುಲಕರ್ಣಿ, ಸುರೇಶ, ಕಂಪ್ಲಿಯ ಅಂಬ್ಯುಲೇನ್ಸ್ ಸಹಾಯಕ ಗಜೇಂದ್ರ ಕೊನೇರು, ತಾಲೂಕು ಶರಣ ಸಾಹಿತ್ಯ ಪರಿಷತ್ ತಾಲೂಕು ಕಾರ್ಯದರ್ಶಿ ಬಂಗಿ ದೊಡ್ಡ ಮಂಜುನಾಥ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
