ಬಳ್ಳಾರಿ / ಕಂಪ್ಲಿ : ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ. ಎನ್. ಗಣೇಶ ಅವರು ಸಾರ್ವಜನಿಕರ ಬಹುದಿನಗಳ ಕನಸಾದ ಕಂಪ್ಲಿಯಲ್ಲಿ ಎರಡನೇ ಹಂತದ ಇಂದಿರಾ ಕ್ಯಾಂಟೀನ್ ಆರಂಭಿಸುವ ಕನಸು ಇದೀಗ ನನಸಾಗಿಸಿದ್ದಾರೆ. ಶಾಸಕರ ಮುತುವರ್ಜಿಯಿಂದ ಬಡವರು ಹಾಗೂ ಕಾರ್ಮಿಕರ ಹಸಿವು ನೀಗಿಸುವ ಇಂದಿರಾ ಕ್ಯಾಂಟಿನ್ ಉದ್ಘಾಟನೆಗೆ ಸಜ್ಜಾಗುತ್ತಿದೆ.
ಹಳೇ ಬಸ್ ನಿಲ್ದಾಣ ರಸ್ತೆಯು ಜನದಟ್ಟಣೆಯಿಂದ ಕೂಡಿರಲಿದೆ. ಅದೇ ಆವರಣದಲ್ಲಿ ಕ್ಯಾಂಟಿನ್ ಸಹ ನಿರ್ಮಿಸುತ್ತಿರುವುದು ಅನುಕೂಲವಾಗಲಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿವೆ.
ವಾಹನದಲ್ಲಿ ಬರುವವರಿಗೆ ಹಾಗೂ ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಗಮನದಲ್ಲಿ ಇಟ್ಟುಕೊಂಡು ನಗರದ ಹೃದಯ ಭಾಗವಾಗಿರುವ ಈ ಸ್ಥಳದಲ್ಲಿ ಕ್ಯಾಂಟಿನ್‌ನಲ್ಲಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಜೆ. ಎನ್. ಗಣೇಶ ತಿಳಿಸಿದರು.
ಜಿಲ್ಲಾಡಳಿತ ಬಳ್ಳಾರಿ ಮತ್ತು ಪೌರಾಡಳಿತ ಇಲಾಖೆ ವತಿಯಿಂದ ಪುರಸಭೆ ವ್ಯಾಪ್ತಿಯ ಹಳೇ ಬಸ್ ನಿಲ್ದಾಣದ ಆವರಣದಲ್ಲಿ ನೂತನ 2ನೇ ಹಂತದ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭ ಮೇ 28ರಂದು ಬೆಳಿಗ್ಗೆ 10 : 30 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ, ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ, ವಸತಿ ಅಲ್ಪಸಂಖ್ಯಾತ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ,ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಬಿ. ಜೆಡ್. ಜಮೀರ್ ಅಹ್ಮದ್ ಖಾನ್, ಪೌರಾಡಳಿತ ಸಚಿವರಾದ ಸನ್ಮಾನ್ಯ ಶ್ರೀ ರಹೀಮ್ ಖಾನ್, ಇವರ ಘನ ಉಪಸ್ಥಿತಿಯಲ್ಲಿ. ಮಾನ್ಯ ಶಾಸಕರು ವಿಧಾನಸಭಾ ಕ್ಷೇತ್ರ ಕಂಪ್ಲಿ ಹಾಗೂ ಅಧ್ಯಕ್ಷರು, ಕೈಮಗ್ಗ ಮತ್ತು ಜವಳಿ ಅಭಿವೃದ್ಧಿ ನಿಗಮ ಕರ್ನಾಟಕ ಸರ್ಕಾರದ ಸನ್ಮಾನ್ಯ ಶ್ರೀ ಜೆ. ಎನ್. ಗಣೇಶ ರವರ ಘನ ಅಧ್ಯಕ್ಷತೆಯಲ್ಲಿ, ಅತಿಥಿಗಳಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಈ. ತುಕಾರಾಂ, ಮಾನ್ಯ ರಾಜ್ಯಸಭಾ ಸದಸ್ಯರಾದ ಶ್ರೀ ಡಾ. ಸೈಯದ್ ನಾಸೀರ್ ಹುಸೇನ್, ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಾ. ಚಂದ್ರಶೇಖರ್ ಬಿ ಪಾಟೀಲ್, ಶ್ರೀ ವೈ. ಎಂ.ಸತೀಶ, ಪುರಸಭೆ ಅಧ್ಯಕ್ಷರಾದ ಶ್ರೀ ಬಿ. ಪ್ರಸಾದ, ಕಂಪ್ಲಿ ಪುರಸಭೆ ಉಪಾಧ್ಯಕ್ಷರು, ಸ್ಥಾಯಿ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ವಿಶೇಷ ಆಹ್ವಾನಿತರಾಗಿ ಶ್ರೀ ಜೆ. ಮಂಜುನಾಥ ನಾಯಕ್, ತಹಶೀಲ್ದಾರರು, ಕಂಪ್ಲಿ. ಶ್ರೀ ಪ್ರಮೋದ್, ಸಹಾಯಕ ಆಯುಕ್ತರು, ಬಳ್ಳಾರಿ. ಶ್ರೀ ರಾಘವೇಂದ್ರ ಗುರು, ಯೋಜನಾ ನಿರ್ದೇಶಕರು, ಜಿಲ್ಲಾ ನಗರ ಅಭಿವೃದ್ಧಿ ಕೋಶ ಬಳ್ಳಾರಿ. ಶ್ರೀ ಕೆ. ದುರುಗಣ್ಣ, ಮುಖ್ಯಾಧಿಕಾರಿಗಳು, ಪುರಸಭೆ, ಕಂಪ್ಲಿ. ಸೇರಿದಂತೆ ಪಟ್ಟಣ ಹಾಗೂ ತಾಲೂಕಿನ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವರದಿ : ಜಿಲಾನಸಾಬ್ ಬಡಿಗೇರ್
