
ಗದಗ :ಶ್ರೀ ವೀರೇಶ್ವರ ಪ್ರಾಥಮಿಕ ಶಾಲೆ ಕುರಡಗಿಯಲ್ಲಿ ಇಂದು 2025-26 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿತು.
ಮಕ್ಕಳಿಗೆ ಪುಷ್ಪ ನೀಡುವುದರೊಂದಿಗೆ ಶಾಲೆಗೆ ಬರಮಾಡಿಕೊಂಡು ಸಿಹಿ ನೀಡಿ ಸ್ವಾಗತಿಸಲಾಯಿತು. ಶ್ರೀಮತಿ ಮಮತಾಜಬಿ ನದಾಫ್ ಹಾಗೂ
ಪ್ರಧಾನ ಗುರು ಮಾತೆ ಶ್ರೀಮತಿ ಕರಿಜ್ಮಾ ನದಾಫ್ ಶಿಕ್ಷಕಿ ನೇತ್ರಾವತಿ ಕಮ್ಮಾರ ಉಪಸ್ಥಿತರಿದ್ದರು.
ಎಕ್ಸೆಲ್ ಅಕಾಡಮಿ ಜಿಲ್ಲಾ ಸಂಯೋಜಕ ಶೌಕತ್ ಅಲಿ ನದಾಫ್ ಕಾರ್ಯಕ್ರಮ ಕುರಿತು ಮಾತನಾಡಿ ಮಕ್ಕಳಿಗೆ ಶುಭ ಹಾರೈಸಿದರು,ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ಹಾಗೂ ಮಕ್ಕಳು ಹಾಜರಿದ್ದರು.
- ಕರುನಾಡ ಕಂದ
