ಬಳ್ಳಾರಿ / ಕಂಪ್ಲಿ : ಕಂಪ್ಲಿ ಪಟ್ಟಣದ ಸೋಮಪ್ಪನಕೆರೆ ಆವರಣದಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಪ್ರೀ-ಎಂಜಿನಿಯರ್ಡ್ ಬಿಲ್ಡಿಂಗ್ (PEB) ಮಾದರಿಯ ಗ್ರಂಥಾಲಯ ಉದ್ಘಾಟನೆ ಜೂನ್ 2ನೇ ವಾರದಲ್ಲಿ ಪ್ರಾರಂಭವಾಗಬಹುದು ಎಂದು ತಿಳಿದು ಬಂದಿದೆ. ಹಲವು ತಿಂಗಳಿಂದ ಖಾಲಿ ಇರುವುದು ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿತ್ತು.
ವಿದ್ಯಾರ್ಥಿಗಳು, ಪುರಸಭೆ ಮತ್ತು ಕ್ಷೇತ್ರದ ಶಾಸಕರಿಗೆ ಮನವಿ ಮಾಡಿ, “ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕು ಕಸಿದುಕೊಳ್ಳಬಾರದು. ಕೂಡಲೇ ಗ್ರಂಥಾಲಯ ಉದ್ಘಾಟನೆ ಆಗಬೇಕು” ಎಂಬುದಾಗಿ ಆಗ್ರಹಿಸಿದರು. ಸ್ಥಳೀಯ ಆಡಳಿತ ಮತ್ತು ಶಾಸಕರು ತಕ್ಷಣ ಕ್ರಮ ಕೈಗೊಂಡು ಗ್ರಂಥಾಲಯವನ್ನು ಸಾರ್ವಜನಿಕರಿಗೆ ಪ್ರಾರಂಭಿಸಿ ಓದುಗರಿಗೆ ಅನುಕೂಲವಾಗಲಿ ಎಂಬುದೇ ನಮ್ಮ ಆಶಯ.
ವರದಿ : ಜಿಲಾನಸಾಬ್ ಬಡಿಗೇರ್
