ಬಳ್ಳಾರಿ / ಕಂಪ್ಲಿ : ಗಂಗಾವತಿ ರಸ್ತೆಯಲ್ಲಿ ವಿಜಯನಗರ ( ಬೆಣಕನ) ಕಾಲುವೆಗೆ ನಿರ್ಮಿಸಿರುವ ಕಿರು ಸೇತುವೆ ಶಿಥಿಲಗೊಂಡಿರುವುದರಿಂದ ಅಧಿಕಾರಿಗಳು ಪರಿಶೀಲಿಸಿದರು.
ದಿಶಾ ರಾಜ್ಯ ಸಮಿತಿ ಸದಸ್ಯ ಎ.ಸಿ. ದಾನಪ್ಪ ಮಾತನಾಡಿ ವಿಜಯನಗರ ಕಾಲವೇ ಸೇತುವೆಯ ಎರಡು ಬದಿಯ ರಕ್ಷಣೆ ಗೋಡೆಗಳು ಬಿದ್ದು ಹೋಗಿದ್ದು ವಾಹನಗಳ ಸಂಚಾರಕ್ಕೆ ಅಪಾಯಕಾರಿಯಾಗಿದೆ ಸೇತುವೆ ಕುಸಿಯುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತು ಹೊಸ ಸೇತುವೆ ನಿರ್ಮಿಸಬೇಕೆಂದು ಒತ್ತಾಯಿಸಿದರು.
ನೀರಾವರಿ ನಿಗಮದ ಎಇಇ ಬಸಪ್ಪ ಜಾನಕರ್ ಮಾತನಾಡಿ ಈ ಸೇತುವೆ ಲೋಕೋಪಯೋಗಿ ಇಲಾಖೆಗೆ ಸುಪರ್ದಿಗೆ ಒಳಪಟ್ಟಿದ್ದು ಶಿಥಿಲಗೊಂಡಿರುವ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ಪಿಡಬ್ಲ್ಯೂಡಿ ಆನಂದ್ ಪೆಮ್ಮರ್ ಮಾತನಾಡಿ, ಸೇತುವೆ ಸದ್ಯ ಪೈಪ್ ಕಲ್ವರ್ಟ್ ಆಗಿದ್ದು ಇದನ್ನು ಬಾಕ್ಸ್ ಕಲ್ವರ್ಟನ್ನಾಗಿ ನಿರ್ಮಿಸಲಾಗುವುದು. ತುಂಗಾಭದ್ರ ನದಿಯಿಂದ ಹೊಸ ಬಸ್ ಸ್ಟಾಂಡ್ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ಈ ಕಾಲುವೆಗೆ ಸೇತುವೆ ನಿರ್ಮಿಸಲಾಗುವುದು ಸದ್ಯ ಸೇತುವೆ ನಿರ್ಮಾಣ ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದರು. ಪಿಡಬ್ಲ್ಯೂಡಿ ಜೆಇ ವೀರಭದ್ರಯ್ಯ ಸ್ವಾಮಿ, ನಂ 10 ಮುದ್ಧಾಪುರ ಗ್ರಾಂಪ ಸದಸ್ಯ ಎಸ್. ಚಂದ್ರಶೇಖರ, ಕೋಟೆ ರೈತ ಸಂಘದ ಅಧ್ಯಕ್ಷ ಮಣ್ಣೂರ್ ನವೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















