ಬಳ್ಳಾರಿ/ ಕಂಪ್ಲಿ : ಪಟ್ಟಣದ ಹೌಸಿಂಗ್ ಬೋರ್ಡ್ ನಲ್ಲಿ ಹೊಸ ಕಟ್ಟಡದ ಪೇಂಟಿಂಗ್ ಕೆಲಸ ಮಾಡುವ ವೇಳೆಯಲ್ಲಿ ಪೇಂಟಿಂಗ್ ಸ್ಟಿಕ್ ವಿದ್ಯುತ್ ಕಂಬದ ಮೇನ್ ವಿದ್ಯುತ್ ತಂತಿಗೆ ತಗಲಿ ಯುವಕ ಮೃತ ಪಟ್ಟ ಘಟನೆ ಜರುಗಿದೆ.
ಮೃತಪಟ್ಟ ಯುವಕ 4ನೇ ವಾರ್ಡಿನ ಕನಕ (28) ಎಂದು ಗೊತ್ತಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯರು ಜೆಸ್ಕಾಂಗೆ ಮಾಹಿತಿ ತಿಳಿಸಿದ ಕ್ಷಣ ಆ ಏರಿಯಾದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಕುಟುಂಬಸ್ಥರ ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.
ವರದಿ : ಜಿಲಾನಸಾಬ್ ಬಡಿಗೇರ್
