ಕಲಬುರ್ಗಿ/ ಯಡ್ರಾಮಿ: ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಯಡವಟ್ಟಿನಿಂದ ಸುಮಾರು 40ಹಳ್ಳಿಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಸಾಮಾಜಿಕ ಹೋರಾಟಗಾರರಾದ ಬಬ್ರುವಾಹನ ಬೋವಿ ಮಾತನಾಡಿದರು ಅದೇ ರೀತಿಯಾಗಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳನ್ನು ಉನ್ನತೀಕರಿಸುವ ಬರದಲ್ಲಿ ಬಿಳವಾರ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವನ್ನು ಯಡ್ರಾಮಿ ತಾಲೂಕಿಗೆ ಸ್ಥಳಾಂತರಿಸುವುದರ ವಿರುದ್ಧ ತಮ್ಮ ವಿರೋಧವಿದೆ ಕೂಡಲೇ ಕಲಬುರಗಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಹಿಂದೆ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಬೇಕು ಈ ಹಿಂದೆ ಹೊರಡಿಸಿದ ಆದೇಶವು ಅವೈಜ್ಞಾನಿಕವಾಗಿದೆ ಕೂಡಲೆ ಈ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಬಿಳವಾರ ಗ್ರಾಮಸ್ಥರೊಂದಿಗೆ ರಸ್ತಾ ರೋಕೊ ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಬಬ್ರುವಾಹನ ಬೋವಿ ಬಿಳವಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ



















