ನನ್ನ ಪ್ರಾಣಕ್ಕಿಂತ ಹೆಚ್ಚಾಗಿರುವ ನೀ ಅಪ್ಪ
ಏನೆಂದು ವರ್ಣಿಸಲಿ ಏನೆಂದು ಹೇಳಲಿ ನಿನ್ನ ಅಪ್ಪ
ನಾ ಹುಟ್ಟಿದಾಗ ಕಾತುರದ ನನ್ನ ನೋಡಲು ನಿನ್ನ ಕಂಗಳು ನನ್ನ ನೀ ನೋಡಿದ ತಕ್ಷಣ ಆನಂದ ಭಾಷ್ಪಗಳು
ತಪ್ಪಾದಾಗ ತಿದ್ದಿದಿ
ನಾ ಅತ್ತಾಗ ನೀ ಮುದ್ದಿಸಿದೆ
ಸಂತೋಷದ ಅಮೃತವ ನೀ ಕುಡಿಸಿದಿ
ಪ್ರತಿ ಹಂತದಲ್ಲೂ ಆಶೀರ್ವಾದದಿಂದ ಹಾರೈಸಿದೆ
ನಿನ್ನೆಲ್ಲಾ ಕನಸುಗಳು ನನ್ನಲ್ಲಿ ಕಾಣಿಸಿದೆ
ಸ್ವಾರ್ಥವ ತೊರೆದು
ನಮಗಾಗಿ ನೀ ಜೀವ ಸವೆಸಿದಿ
ಎಲ್ಲರಿಗೂ ಖುಷಿ ಹಂಚಿದೆ
ನೀ ನಮ್ಮೆಲ್ಲಾ ದುಃಖವನ್ನು ಉಂಡಿದೆ.
ನಿನ್ನ ಪ್ರೀತಿಗೆ ಯಾರಿಲ್ಲ ಪೈಪೋಟಿ
ನಿನ್ನ ತ್ಯಾಗಗಳಿಗೆ ನೀನೇ ಸರಿಸಾಟಿ
ನಿನ್ನ ಮುಗ್ದತೆಗೆ ಯಾವದಿಲ್ಲ ದಾಟಿ
ನಮಗಾಗಿ ನೀ ತಿನ್ನುತ್ತಿದ್ದಿ ಕಷ್ಟದ ಚಾಟಿ
ಅಪ್ಪ ಎಂಬ ಎರಡಕ್ಷರ ಹೇಗೆ ವರ್ಣಿಸಲಿ ನಾ
ಏಳೇಳು ಜನ್ಮಮಗಳು ಬೇಕು
ಅಪ್ಪ ಎಂಬ ಪದದ ಪೀಠಿಕೆಯ
ವಿವರಿಸಿ ಬರೆದು ಹೊಗಳಲು
ಆಕಾಶವನ್ನು ಕೈಯಲ್ಲಿ ಹಿಡಿಯುವ ಹಂಬಲ
ನೀನಾದೆ ಸದಾ ನನಗೆ ಬೆಂಬಲ
ಆದ್ವಿತೀಯ 24 ಕ್ಯಾರೆಟ್ ಬಂಗಾರ
ನನ್ನೆಲ್ಲ ಇಚ್ಛೆಗಳ ಈಡೇರಿಸುವ ಸಾಹುಕಾರ
ಸಾಗುವ ದಾರಿಯಲ್ಲಿ ನೀ ಹೀಗೆ ಸದಾ ನನ್ನ ಜೊತೆ ಇದ್ದರೆ ಚಂದ
ಸಾಧನೆಯನ್ನು ಮಾಡುವೆ ನಿನ್ನ ಆಶೀರ್ವಾದದಿಂದ
✍️ ಬಡಿಗೇರ ಜಿಲಾನಸಾಬ್, ಕಂಪ್ಲಿ.
