ಬಳ್ಳಾರಿ/ ಕಂಪ್ಲಿ : ಕಂಪ್ಲಿ ಪಟ್ಟಣದ ಐತಿಹಾಸಿಕ ಸೋಮಪ್ಪ ಕೆರೆ ಅಂಗಳದಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರ ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕಂಪ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೇ.15ರ ರಾತ್ರಿ ಸಮಯದಲ್ಲಿ ಆಂಧ್ರ ಪ್ರದೇಶದ ನದಿಚಾಗಿ ಗ್ರಾಮದ ದೊಡ್ಡ ಬಸವನಗೌಡ ಇವರನ್ನು ಆರೋಪಿಗಳು ಬರ್ಬರವಾಗಿ ಕೊಲೆ ಮಾಡಿ, ತಲೆ ಮರೆಸಿಕೊಂಡಿದ್ದರು. ಆದರೆ, ಕಂಪ್ಲಿ ಠಾಣೆಯಲ್ಲಿ ಸಂಬಂಧಿಕರಾದ ಚನ್ನಬಸಪ್ಪ ಇವರು ದೂರು ನೀಡಿದ ಹಿನ್ನಲೆ ನಂತರ ಎಸ್ಪಿ ಡಾ. ಶೋಭಾ ರಾಣಿ ಅವರ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಪಿ. ರವಿಕುಮಾರ ಅವರ ಮುಂದಾಳತ್ವದಲ್ಲಿ ತಂಡ ರಚಿಸಿ, ಕಂಪ್ಲಿ ನಗರದ ಆರೋಪಿ ರಾಜಶೇಖರ(19) ಮತ್ತು ಪ್ರಾಯ ಬಾಲಕನನ್ನು ಬಂಧಿಸಿದ್ದಾರೆ.
ಡಿವೈಎಸ್ಪಿ ಪ್ರಸಾದ್ ಗೋಖುಲೆ, ಪಿಐ ಕೆ.ಬಿ.ವಾಸುಕುಮಾರ, ಪಿಎಸ್ಐ ಅವಿನಾಶ ಕಾಂಬ್ಳೆ, ಎಎಸ್ಐ ಬಸವರಾಜ, ಸಿಬ್ಬಂದಿಗಳಾದ ಬಸವರಾಜ ಹಿರೇಮಠ, ರಮೇಶ, ಮಲ್ಲೇಶ ರಾಥೋಡ್, ಸತ್ಯನಾರಾಯಣ, ಸುರೇಶ, ಮುತ್ತುರಾಜ್, ಗಾದಿಲಿಂಗಪ್ಪ, ವಿಶ್ವನಾಥ, ಪ್ರಭಾಕರ, ತಿಮ್ಮಯ್ಯ ಇವರು ಆರೋಪಿಗಳನ್ನು ಪತ್ತೆ ಹಚ್ಚುವ ಮೂಲಕ ಯಶಸ್ವಿಯಾಗಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















