ಬಳ್ಳಾರಿ/ ಕಂಪ್ಲಿ: ಜೂ.20. ಪಟ್ಟಣದ ಗಂಗಾಮತ ಸಮಾಜದ ಸಮುದಾಯ ಭವನದಲ್ಲಿ ಗಂಗಾಪರಮೇಶ್ವರಿ ಜಯಂತ್ಯೋತ್ಸವ ಸಂಭ್ರಮದಿಂದ ಹಾಗೂ ಅರ್ಥಪೂರ್ಣವಾಗಿ ಶುಕ್ರವಾರ ಆಚರಿಸಲಾಯಿತು.
ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷ ಎಲಿಗರ್ ನಾಗರಾಜ್ ಮಾತನಾಡಿ, ಗಂಗಾಮತ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಾಕಷ್ಟು ಹಿಂದುಳಿದ ಸಮಾಜವಾಗಿದೆ. ಗಂಗಾಮತ ಸಮಾಜದ ಅಭಿವೃದ್ಧಿಯ ದೃಷ್ಠಿಯಿಂದ ಎಸ್ ಟಿ ಮೀಸಲಾತಿ ಅವಶ್ಯಕವಾಗಿದೆ. ಸಮಾಜದವರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಜಾಗೃತಿವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬಿ.ಸಿದ್ದಪ್ಪ, ಕರೇಕಲ್ ಮನೋಹರ್, ಅಯ್ಯೋದಿ ವೆಂಕಟೇಶ್, ಕಂಬತ್ ಧನರಾಜ್, ಯಲ್ಲಪ್ಪ, ಆಟೋ ರಾಘವೇಂದ್ರ, ವಿರುಪಣ್ಣ, ಜೋಳಮರೋ ಈರಪ್ಪ, ಎಲಿಗಾರ್ ವೀರಭದ್ರಪ್ಪ, ಮಹೇಶ, ಗಂಗಣ್ಣ, ರಾಮಸಾಗರ ದುರುಗಪ್ಪ, ಅಯ್ಯೋದಿ ರಮೇಶ್, ಎಲ್.ಗುರುರಾಜ, ಬಸವರಾಜ ಸೇರಿದಂತೆ ಸಮಾಜದವರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















