
ಬೆಳಗಾವಿ: ಬೆಳಗಾವಿ ಜಿಲ್ಲಾ ಪೊಲೀಸ್, ಅಥಣಿ ಉಪ ವಿಭಾಗದ ಅಥಣಿ ನಗರದಲ್ಲಿ ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದ ವತಿಯಿಂದ ಅಥಣಿಯಲ್ಲಿ ಸಂಚಾರ ನಿಯಮ ಕುರಿತು ಜಾಗೃತ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಾಹನ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು, ಮೊಬೈಲ್ ಬಳಕೆ ಮಾಡಬಾರದು, ಮದ್ಯಪಾನ ಮಾಡಬಾರದು, ಧೂಮಪಾನ ಮಾಡಬಾರದು, ಅತಿ ವೇಗವಾಗಿ ಚಲಿಸಬಾರದು ಹೀಗೆ ಇನ್ನೂ ಅನೇಕ ವಾಹನ ಜಾಗೃತಿ ಕಾರ್ಯಕ್ರಮಗಳು ನಡೆದವು.
ಈ ಕಾರ್ಯಕ್ರಮದ ಜೊತೆಯಾಗಿ ಶಿಕ್ಷಣ ಇಲಾಖೆ ಯವರು ಕೂಡಾ ಜೊತೆಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಪಿಎಸ್ಐ ಮತ್ತು ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು ಮತ್ತು ಅಥಣಿಯ ಸಿದ್ಧಾಂತ ಮೆಡಿಕಲ್ ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೂಡಾ ಭಾಗವಹಿಸಿ ಈ ಕಾರ್ಯಕ್ರಮಕ್ಕೆ ಶೋಭೆ ತಂದರು.
ವರದಿ : ವಿಠ್ಠಲ ಖೋಕಾಟೆ ಅಥಣಿ.




















