ವಿಜಯಪುರ/ ಇಂಡಿ : ಯೋಗದ ಮಹತ್ವವನ್ನು ಪ್ರಪಂಚಕ್ಕೆ ಸಾರುವುದಕ್ಕಾಗಿ ಪ್ರತಿ ವರ್ಷ ಜೂನ್ 21 ರಂದು ಯೋಗ ದಿನಾಚರಣೆಯನ್ನು ಆಚರಿಸಲಾಗುವುದು. ಯೋಗ ಎನ್ನುವುದು ನಿನ್ನೆ, ಮೊನ್ನೆ ಹುಟ್ಟಿಕೊಂಡ ಸಾಧನೆಯಲ್ಲ ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಯೋಗ ಹಿಂದೂ ಧರ್ಮದೊಂದಿಗೆ ಸಂಬಂಧವನ್ನು ಹೊಂದಿದೆ. ಯೋಗಕ್ಕೂ ಹಿಂದೂ ಧರ್ಮಕ್ಕೂ ಇರುವ ಸಂಬಂಧವೇನು.? ಯೋಗ ಹಿಂದೂ ಧರ್ಮದಿಂದ ಹುಟ್ಟಿಕೊಂಡಿದ್ದು ಹೇಗೆ.? ಸಕ್ಸಸ್ ಶಾಲೆಯ ಆಡಳಿತ ಅಧಿಕಾರಿ ಆದ ಸಿದ್ದು ಕಾಂಬಳೆ ಮಾತನಾಡಿದರು.
ಪ್ರತೀ ವರ್ಷದಂತೆ ಈ ವರ್ಷವೂ ಯೋಗ ದಿನಾಚರಣೆಯನ್ನು ಆಚರಿಸಲಾಗುವುದು, 2025ರ ಯೋಗ ದಿನಾಚರಣೆಯನ್ನು ಜೂನ್ 21 ರಂದು ಶನಿವಾರದ ದಿನದಂದು ಆಚರಿಸಲಾಗುತ್ತಿದೆ. ಯೋಗವು ಶಿವನೊಂದಿಗೆ ಹುಟ್ಟಿಕೊಂಡಿತು ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಶಿವನಿಂದಾಗಿ ಸಪ್ತ ಋಷಿಗಳು ಯೋಗವನ್ನು ಅನುಸರಿಸಿಕೊಂಡು ಬಂದರು. ಪ್ರಸ್ತುತ ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ನಾವು ಯೋಗವನ್ನು ಉತ್ತಮ ಆರೋಗ್ಯಕ್ಕಾಗಿ, ದೀರ್ಘಾಯುಷ್ಯಕ್ಕಾಗಿ ಮಾಡುತ್ತಿದ್ದೇವೆ. ಆದರೆ, ಹಿಂದೆಲ್ಲಾ ಜನರು ದೇವರನ್ನು ಧ್ಯಾನಿಸುವುದಕ್ಕಾಗಿ ಯೋಗವನ್ನು ಪಾಲಿಸುತ್ತಿದ್ದಾರೆ. ಸನಾತನ ಧರ್ಮದೊಂದಿಗೆ ಸಂಬಂಧವನ್ನು ಹೊಂದಿರುವ ಯೋಗವು ಸಾವಿರಾರು ವರ್ಷಗಳ ಐತಿಹ್ಯವನ್ನು ಹೊಂದಿದೆ ಎಂದರು. ಈ ಒಂದು ಯೋಗ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಆದ ಜ್ಯೋತಿ ಸನತ ತೃಪ್ತಿ ಚಾಬಕಸವಾರ ಮುಖ್ಯ ಶಿಕ್ಷಕರು ಚೈತನ್ಯ ರೇವುರಕರ ಅವರು ಯೋಗವನ್ನು ನಡೆಸಿಕೊಟ್ಟರು. ಹಾಗೂ ಸಕ್ಸಸ್ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ವರದಿ. ಅರವಿಂದ ಕಾಂಬಳೆ



















