ಬಳ್ಳಾರಿ / ಕಂಪ್ಲಿ :
ತಾಲೂಕಿನ ನಂ.10 ಮುದ್ದಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕಣವಿತಿಮ್ಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಯೋ ನಿವೃತ್ತಿ ಹೊಂದಿದ ಹಿರಿಯ ಮುಖ್ಯಗುರು (ಇಸಿಒ) ಜಿ.ವಿರೇಶ ಇವರಿಗೆ ಶನಿವಾರ ಅದ್ಧೂರಿಯಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಜಿ.ವಿರೇಶ ಇವರು ಮಾತನಾಡಿ, ಕಷ್ಟಗಳನ್ನು ಮೆಟ್ಟಿ ನಿಂತಾಗ ಮಾತ್ರ ಜಯ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ವೃತ್ತಿ ಜೀವನವನ್ನು ಕಷ್ಟ ಸುಖದ ನಡುವೆ ಉತ್ತಮ ಸೇವೆ ಸಲ್ಲಿಸಿದ ತೃಪ್ತಿ ತಮ್ಮದ್ದಾಗಿದೆ.
ಕಂಪ್ಲಿ ತಾಲೂಕಿನ ಜನರ ಪ್ರೀತಿ, ವಿಶ್ವಾಸದಿಂದ ಸರ್ಕಾರಿ ವೃತ್ತಿ ಜೀವನ ಕಳೆದಿರುವೆ. ಮಕ್ಕಳು ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು.
ಇಲ್ಲಿ ಮುಖ್ಯಗುರುಗಳು, ಸಹ ಶಿಕ್ಷಕ ವೃಂದದವರು, ನಿವೃತ್ತ ಶಿಕ್ಷಕರು, ಎಸ್ಟಿಎಂಸಿಯವರು ಸೇರಿದಂತೆ ಅನೇಕರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಸ.ನೌ.ಸಂಘದ ರಾಜ್ಯ ಪ್ರಚಾರ ಸಮಿತಿ ನಿರ್ದೇಶಕ ಎಚ್.ಪಿ.ಸೋಮಶೇಖರ, ಇಸಿಒ ರೇವಣ್ಣ, ಸಿಆರ್‌ಪಿಗಳಾದ ವಿರೇಶ, ರೇಣುಕಾರಾಧ್ಯ, ಚಂದ್ರಯ್ಯ ಸೊಪ್ಪಿನಮಠ, ಪಿಡಿಒ ಬೀರಲಿಂಗ, ಶಿಲ್ಪರಾಣಿ, ಎಸ್ಡಿಎಂಸಿ ಅಧ್ಯಕ್ಷ ಪಿ.ಲಿಂಗಪ್ಪ, ಉಪಾಧ್ಯಕ್ಷೆ ಪಾರ್ವತಿ, ಮುಖ್ಯಗುರು ವಿಶ್ವನಾಥ, ಸಹ ಶಿಕ್ಷಕರಾದ ಪರಶುರಾಮ, ಬಿ.ಮಹಾದೇವಿ, ಪಂಪಾಪತಿ, ಪಾರ್ವತಿ, ಅಶ್ವಿನಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















