
ಬಳ್ಳಾರಿ / ಕಂಪ್ಲಿ : ಒತ್ತಡ ಜೀವನದಲ್ಲಿ ಯೋಗ ಧ್ಯಾನ ಪ್ರಾಣಯಾಮ ಮಾಡುವದರಿಂದ ಅರೋಗ್ಯ ಕಾಪಾಡಿಕೊಳ್ಳಬಹುದು ಎಂದು ಯೋಗ ಸಾಧಕ ಬಾಲಚಂದ್ರ ಶರ್ಮ ಹೇಳಿದರು. ಪಟ್ಟಣದ ಶಾರದ ಹಿ.ಪ್ರಾ.ಶಾಲೆ ಆವರಣದಲ್ಲಿ ಪತಂಜಲಿ ಯೋಗ ಸಮಿತಿಯಿಂದ ಏರ್ಪಾಡಿಸಿದ 11ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಯೋಗದಿಂದ ಒತ್ತಡಗಳು ನಿವಾರಣೆಯಾಗುತ್ತವೇದೈಹಿಕ ಮತ್ತು ಮಾನಸಿಕವಾಗಿ ಸಧೃಡರಾಗಬಹುದು. ಮಕ್ಕಳಲ್ಲಿ ಜ್ಞಾಪಕ ಶಕ್ತಿ ವೃಧ್ದಿಯಾಗಬೇಕಾದರೆ ಧ್ಯಾನ ಅವಶ್ಯಕ ಪ್ರತಿಯೋಬ್ಬರು ಯೋಗ ಧ್ಯಾನ ಅಳವಡಿಸಿಕೊಂಡಾಗ ನೆಮ್ಮದಿ ಜೀವನ ನೆಡಸಬಹುದು. ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಆರೋಗ್ಯದ ಸರಳ ಸೂತ್ರವಾಗಿದೆ. ಯೋಗದಿಂದ ನೆಮ್ಮದಿ, ತೃಪ್ತಿ, ಸಂತೋಷ ಲಭಿಸಲಿದೆ. ಮಾನವ ಸರ್ವತೋಮುಖ ಅಭಿವೃದ್ಧಿಗಾಗಿ ಯೋಗದ ಅವಶ್ಯಕತೆ ಇದೆ ಎಂದರು.
ಪತಂಜಲಿ ಯೋಗ ಸಮಿತಿ ತಾಲೂಕು ಪ್ರಭಾರಿ ಡಿ.ಮೌನೇಶ ಮಾತನಾಡಿ, ಯೋಗವು ಇಂದಿನ ದಿನಮಾನದಲ್ಲಿ ಮನುಷ್ಯನಿಗೆ ಅತ್ಯವಶ್ಯಕವಾಗಿದೆ. ಯೋಗವು ವ್ಯಕ್ತಿಯಲ್ಲಿನ ಶಕ್ತಿ ವೃದ್ಧಿಪಡಿಸುವ ವಿಧಾನವಾಗಿದೆ. ಮಾನವನ ಪ್ರಜ್ಞೆಯು ಆತ್ಮಶಕ್ತಿ ಅಭಿವೃದ್ಧಿ ಯೋಗವು ವಿಕಾಸವಾಗುತ್ತಿರುವ ಪ್ರಕ್ರಿಯೆಯಾಗಿದೆ ಎಂದರು. ನಂತರ ವಿದ್ಯಾರ್ಥಿಗಳು ಶಿಬಿರರ್ಥಿಗಳಿಗೆ ಯೋಗಾಸನವನ್ನು ಉಚಿತವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕೊಟ್ರೇಶ, ಕಾರ್ಯದರ್ಶಿ ಎಸ್.ಜಿ.ಚಿತ್ರಗಾರ, ಮಹಿಳಾ ಪ್ರಭಾರಿ ಕಲ್ಗುಡಿ ರತ್ನಮ್ಮ, ಯೋಗ ಸಾಧಕರಾದ ಡಾ.ರಾಮರಾಜ್ ವಿರೂಪಾಕ್ಷಿ, ತಿಪ್ಪೇಸ್ವಾಮಿ, ಭೀಮನಗೌಡ, ಡಾ.ಜಂಬನಾಥ, ಚಂದ್ರಣ್ಣ, ಮೋಹನ್ ರಾವ್, ನಾಗರತ್ನಮ್ಮ, ಕೆ.ನಿರ್ಮಲಮ್ಮ, ಭವಾನಿ, ಉಮಾ, ಮಮತಾ, ವೆಂಕಟೇಶ, ವಿರೂಪಾಕ್ಷಿ, ಶ್ರೀನಿವಾಸ ಸೇರಿದಂತೆ ಯೋಗಪಟುಗಳು ಹಾಗೂ ಮಕ್ಕಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















