ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸರ್ಕಾರಿ ವೈದ್ಯಕೀಯ ಸೀಟ್ ಪಡೆದ ರೈನ್‌ಬೋ ವಿದ್ಯಾರ್ಥಿನಿಗೆ ಸನ್ಮಾನ

ಬಳ್ಳಾರಿ / ಕಂಪಿ : ಕಂಪ್ಲಿ ಪಟ್ಟಣದಲ್ಲಿ ನೂತನವಾಗಿ ಆರಂಭವಾಗಿರುವ ಕೆಸಿಬಿ ಎಜ್ಯುಕೇಷನ್ ಟ್ರಸ್ಟ್‌ ನ ಆಶ್ರಯದಲ್ಲಿ ನಡೆಯುತ್ತಿರುವ ರೈನ್‌ಬೋ ನೀಟ್/ಜೆಇಇ ಅಕಾಡೆಮೆಯಲ್ಲಿ ತರಬೇತಿ ಪಡೆದು ಸರ್ಕಾರಿ ವೈದ್ಯಕೀಯ ಸೀಟ್ ಪಡೆದ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.ಕೆಸಿಬಿ ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ಕೆ.ಎಸ್.ಚಾಂದ್‌ಬಾಷಾ ಮಾತನಾಡಿ, ಅವರು ಪಟ್ಟಣದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ರೈನ್‌ಬೋ ಪಿಯು ಕಾಲೇಜು ಹಾಗೂ ರೈನ್‌ಬೋ ನೀಟ್/ಜೆಇಇ ಅಕಾಡೆಮೆ ತರಬೇತಿಯನ್ನು ಆರಂಭಿಸಲಾಗಿದ್ದು, ನಮ್ಮ ಸಂಸ್ಥೆಯು ಆರಂಭಿಸಿದ ತರಬೇತಿ ಕೇಂದ್ರದಲ್ಲಿ ಮೊದಲ ಬಾರಿಗೆ ಮೂರು ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ವಿಭಾಗದ ವಿವಿಧ ವಿಭಾಗಗಳಲ್ಲಿ ಸೀಟ್‌ಗಳನ್ನು ಪಡೆದು ಸಂಸ್ಥೆಯ ಕೀರ್ತಿಯನ್ನು ಬೆಳಗಿಸಿದ್ದಾರೆಂದರು.
ರೈನ್‌ಬೋ ನೀಟ್/ಜೆಇಇ ತರಬೇತಿ ಪಡೆದ ಸಣಾಪುರದ ಎಂ.ಕೀರ್ತನಾ(97.12%) ಎಂಬಿಬಿಎಸ್, ಹುಬ್ಬಳ್ಳಿಯ ಎಸ್.ನಂದಿನಿ(90.87%) ಬಿಡಿಎಸ್ ಮತ್ತು ಕಂಪ್ಲಿ ಸಕ್ಕರೆ ಕಾರ್ಖಾನೆಯ ಎಂ.ವಾಸುದೇವ್(89.54%) ಬಿಎಎಂಎಸ್ ವೈದ್ಯಕೀಯ ವಿಭಾಗದಲ್ಲಿ ಸರ್ಕಾರಿ ಸೀಟ್‌ಗಳನ್ನು ಪಡೆದಿದ್ದಾರೆಂದು ತಿಳಿಸಿದರು. ನಂತರ ಎಂಬಿಬಿಎಸ್ ವೈದ್ಯಕೀಯ ಸೀಟ್ ಪಡೆದ ವಿದ್ಯಾರ್ಥಿನಿ ಎಂ.ಕೀರ್ತನಾ ಮತ್ತು ಅವರ ತಂದೆ,ತಾಯಿಗಳಾದ ಶ್ರೀನಿವಾಸ್,ಎಂ.ಶಾರದಾ ಅವರುಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕೆಸಿಬಿ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಶಾರುಖ್, ಪ್ರಾಚಾರ್ಯ ಶ್ರೀನಿವಾಸ್, ಉಪ ಪ್ರಾಚಾರ್ಯ ಶಂಶೇರ್, ಉಪನ್ಯಾಸಕರಾದ ಮೇಘ,ಶ್ರೀದೇವಿ, ಆಯುಷ್, ರೋಹಿತ್, ಮಹ್ಮದ್, ಅನಿಲ್, ಜಡೆಪ್ಪ, ಬಶೀರ್, ಪರಮೇಶ್ವರರೆಡ್ಡಿ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!