ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಈ ವಾರ ಒಟಿಟಿಗೆ ಬಂದ ಸಿನಿಮಾಗಳು ಯಾವುವು ? ಇಲ್ಲಿದೆ ಪಟ್ಟಿ

ಪ್ರತಿ ವಾರದಂತೆ ಈ ವಾರವೂ ಸಹ (ಜೂನ್ 19 ರಿಂದ ಜೂನ್ 25) ಹಲವು ಸಿನಿಮಾಗಳು, ವೆಬ್ ಸರಣಿಗಳು, ಕೆಲ ರಿಯಾಲಿಟಿ ಶೋಗಳು ಒಟಿಟಿಗೆ ಬಂದಿವೆ. ಕನ್ನಡದ ಕೆಲ ಸಿನಿಮಾಗಳು ಸೇರಿದಂತೆ ಕೆಲವು ಒಳ್ಳೆಯ ಸಿನಿಮಾಗಳು ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿವೆ. ಚಿತ್ರಮಂದಿರಗಳಲ್ಲಿ ಸ್ಟಾರ್ ನಟರ ಸಿನಿಮಾಗಳು ಇಲ್ಲದ ಈ ಸಮಯದಲ್ಲಿ ಒಟಿಟಿಗಳು ಸಿನಿಮಾ ಪ್ರೇಕ್ಷಕರನ್ನು ಬ್ಯುಸಿಯಾಗಿರಿಸಿವೆ. ಈ ವಾರ ಒಟಿಟಿಗೆ ಬಂದ ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ…

ಖ್ಯಾತ ಗಾಯಕ, ನಟ ದಿಲ್ಜೀತ್ ದುಸ್ಸಾಂಜ್ ನಟಿಸಿರುವ ಕಾಮಿಡಿ, ಥ್ರಿಲ್ಲರ್ ಕತೆಯುಳ್ಳ ಡಿಟೆಕ್ಟಿವ್ ಶೇರ್ದಿಲ್ ಸಿನಿಮಾ ಈ ವಾರ ಜೀ5ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಶ್ರೀಮಂತ ವ್ಯಕ್ತಿಯೊಬ್ಬನ ಕೊಲೆ ಆಗುತ್ತದೆ. ಆ ಕೊಲೆಯ ತನಿಖೆಯ ಜವಾಬ್ದಾರಿ ದೀಲ್ಜೀತ್ ಹೆಗಲೇರುತ್ತದೆ. ಮುಂದಿನ ಕತೆ ಸಿನಿಮಾ ನೋಡಿ ತಿಳಿಯಬೇಕು.

ಇಮ್ರಾನ್ ಹಶ್ಮಿ ನಟನೆಯ ಆರ್ಮಿ ಹಿನ್ನೆಲೆಯ ಕತೆಯನ್ನು ಹೊಂದಿರುವ ‘ಗ್ರೌಂಡ್ ಜೀರೋ’ ಸಿನಿಮಾ ಈ ವಾರ ಪ್ರೈಂ ವಿಡಿಯೋನಲ್ಲಿ ಬಿಡುಗಡೆ ಆಗಿದೆ. ಕುಖ್ಯಾತ ಟೆರರಿಸ್ಟ್ ಒಬ್ಬಾತನನ್ನು ಹೊಡೆದುರುಳಿಸುವ ಸೀಕ್ರೆಟ್ ಆಪರೇಷನ್ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಕಪಿಲ್ ಶರ್ಮಾ ನಿರೂಪಣೆ ಮಾಡುತ್ತಿರುವ ತನ್ನದೇ ಹೆಸರಿನ ಹಾಸ್ಯ ಶೋನ ಮೂರನೇ ಸೀಸನ್ ಇದೀಗ ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ. ಹಲವು ಚಾನೆಲ್​ಗಳಲ್ಲಿ ಪ್ರಸಾರವಾದ ಬಳಿಕ ಕೊನೆಯದಾಗಿ ಈಗ ನೆಟ್​ಫ್ಲಿಕ್ಸ್​ಗೆ ಈ ಶೋ ಬಂದಿದ್ದು, ಈ ಬಾರಿ ಅರ್ಚನಾ ಪೂರನ್ ಸಿಂಗ್ ಜೊತೆಗೆ ನವಜೋತ್ ಸಿಂಗ್ ಸಿಧು ಸಹ ಮರಳಿ ಬಂದಿದ್ದಾರೆ.

ಥ್ರಿಲ್ಲರ್ ಕತೆಯುಳ್ಳ ‘ಕೇರಳ ಕ್ರೈಂ ಫೈಲ್ಸ್’ ವೆಬ್ ಸರಣಿಯ ಎರಡನೇ ಸೀಸನ್ ಇದೀಗ ಬಿಡುಗಡೆ ಆಗಿದೆ. ಜಿಯೋ ಹಾಟ್​ಸ್ಟಾರ್​​ನಲ್ಲಿ ಈ ವೆಬ್ ಸರಣಿ ಬಿಡುಗಡೆ ಆಗಿದ್ದು, ಮೊದಲ ಸೀಸನ್ ಸಖತ್ ಹಿಟ್ ಆಗಿತ್ತು. ಇದರ ಜೊತೆಗೆ ‘ಪ್ರಿನ್ಸ್ ಆಂಡ್ ಫ್ಯಾಮಿಲಿ’ ಹೆಸರಿನ ಮಲಯಾಳಂ ಸಿನಿಮಾ ಜೀ5ನಲ್ಲಿ ಬಿಡುಗಡೆ ಆಗಿದೆ.

ಅಜಯ್ ರಾವ್ ನಟಿಸಿ ನಿರ್ಮಾಣವೂ ಮಾಡಿರುವ ‘ಯುದ್ಧಕಾಂಡ’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಕೋರ್ಟ್ ಡ್ರಾಮಾ ಕತೆ ಹೊಂದಿರುವ ಈ ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ಈ ಹಿಂದೆ ವ್ಯಕ್ತವಾಗಿದ್ದವು. ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ ಗಮನ ಸೆಳೆದಿದ್ದ ಈ ಸಿನಿಮಾ ಈಗ ಅಮೆಜಾನ್ ಪ್ರೈಂನಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!