ಮೂಲತ: ಭಾರತದ ಕೊಡುಗೆಯಾದ ಯೋಗ – ವಿಶ್ವದಲ್ಲೇ ಅತ್ಯಂತ ಪ್ರಾಚೀನವಾದುದು, ಸುಮಾರು 5,000 ವರ್ಷಗಳಿಗೂ ಹಿಂದಿನ ವಿದ್ಯೆಯಾಗಿದ್ದು…
ಓಂ ಅಸತೋಮ ಸದ್ಗಮಯ |
ತಮಸೋಮ ಜ್ಯೋತಿರ್ಗಮಯ |
ಮೃತ್ಯೋರ್ಮಾ ಅಮೃಂತಂಗಮಯ |
ಓಂ ಶಾಂತಿ ಶಾಂತಿ ಶಾಂತಿ : ||
ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮರತ್ವದ ಕಡೆಗೆ,ಸಾಗಲಿ ಜೀವನ ಮತ್ತು ಎಲ್ಲರಿಗೂ ಶಾಂತಿ ಲಭಿಸಲಿ ಎಂಬ ಸಂದೇಶ ವೇದಗಳಿಂದ ಬಂದಿದೆ. ಹೀಗೆ ಸಾಗುವುದೇ ಅರ್ಥಪೂರ್ಣ ಜೀವನವಲ್ಲವೇ ?
ಯೋಗ ಕರ್ಮಸು ಕೌಶಲಂ ‘ ಎಂದು ಭಗವದ್ಗೀತೆ ತಿಳಿಸುತ್ತದೆ.ಅಂದರೆ ಯಾವುದೇ ಕೆಲಸವನ್ನು ಕುಶಲತೆಯಿಂದ ಯಶಸ್ವಿಯಾಗಿ ನಿರ್ವಹಿಸುವುದೂ ಯೋಗವೇ.
ಯೋಗ’ ಯುಜ್ ‘ (ಅರ್ಥ ಸೇರಿಸು) ಎಂಬ ಸಂಸ್ಕೃತ ಧಾತುವಿನಿಂದ ಉಂಟಾಗಿದೆ. ಯೋಗವೆಂದರೆ ಮನಸ್ಸು ಮತ್ತು ಶರೀರಗಳ ಒಂದುಗೂಡುವಿಕೆ. ಸ್ವಸ್ಥ ಸದೃಢ ಶರೀರ ಮನಸ್ಸು ಮತ್ತು ಏಕಾಗ್ರ ಚಿತ್ತವಿದ್ದರೆ ಏನನ್ನೂ ಸಾಧಿಸಲು ಸಾಧ್ಯ. ಪತಂಜಲಿ ಮುನಿಗಳು ತಿಳಿಸಿರುವ ಎಂಟು ಅಂಗಗಳೂ ಇದಕ್ಕೆ ಅವಶ್ಯಕ.
- ಯಮ –ನಡವಳಿಕೆಗಳು,
- ನಿಯಮ – ಕ್ರಮಬದ್ಧತೆ,ಶಿಸ್ತು, ಜೀವನ ಮೌಲ್ಯಗಳು,
- ಆಸನ – ದೇಹದ ಭಂಗಿ/ನಿಲುವು
- ಪ್ರಾಣಾಯಾಮ – ಉಸಿರಾಟದ ನಿಯಂತ್ರಣ ,
- ಪ್ರತ್ಯಾಹಾರ – ಇಂದ್ರಿಯ ನಿಗ್ರಹ
- ಧಾರಣ – ಮನಸ್ಸಿನ ಏಕಾಗ್ರತೆ ಆಲೋಚನೆಗಳ ಹಿಡಿತ
- ಧ್ಯಾನ –ಏಕಾಗ್ರ ಚಿತ್ತದಿಂದ ಚಿಂತನೆ, ಯಾವುದೇ ಮಗ್ನತೆ, ಧ್ಯಾನಿಸುವ ಸ್ಥಿತಿ
- ಸಮಾಧಿ – ತಲ್ಲೀನತೆ, ಧ್ಯಾನದಿಂದ ಭಾವ ಪರವಶ ಸ್ಥಿತಿ,
ಪ್ರತಿ ಜೀವಿಯೂ ಮೂಲತ: ದಿವ್ಯವೇ ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ನಮ್ಮ ಶರೀರದ ಒಳಗೆ ಮತ್ತು ಹೊರಗೆ ಸುಪ್ತವಾಗಿರುವ ದಿವ್ಯತ್ವವನ್ನು ಜಾಗೃತಗೊಳಿಸಿ ಬದುಕಬೇಕು.
ಯೋಗಾಸನಗಳಲ್ಲಿ ಪ್ರಕೃತಿಯಲ್ಲಿ ಇರುವ ಮೃಗ-ಪಕ್ಷಿಗಳ ಭಂಗಿಯನ್ನು ಆಧರಿಸಿಯೇ ಆಸನಗಳನ್ನು ರಚಿಸಿ,ಹೆಸರಿಸಲಾಗಿದೆ.. ಹಾಗೇ ಮರಗಳ ,ಋಷಿಗಳ ಹೆಸರಿನ, ಆಸನಗಳೂ ಇವೆ. ಮುಖ್ಯವಾಗಿ 84 ಆಸನಗಳಿವೆ ಎಂದು ಹೇಳಲಾಗಿದೆ.
ಯೋಗಾಭ್ಯಾಸದಿಂದ ಆಗುವ ಪ್ರಯೋಜನಗಳು ಅನೇಕ.ನಿರತಂರ ಯೋಗಾಭ್ಯಾಸದಿಂದ ನರಮಂಡಲದ ಸಾಮರ್ಥ್ಯ ಹೆಚ್ಚಿ ದೇಹ ಉತ್ತಮವಾಗಿ ಕಾರ್ಯವೆಸಗುತ್ತದೆ.ಶರೀರದಲ್ಲಿರುವ ಕಲುಷಿತ ವಸ್ತುಗಳು, ತ್ಯಾಜ್ಯಗಳೂ ಹೊರಹಾಕಲ್ಪಟ್ಟು ಆರೋಗ್ಯ ಸುಧಾರಿಸುತ್ತದೆ. ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ರಕ್ತ ಪರಿಚಲನೆ ಸರಿಯಾಗುತ್ತದೆ. ಪಾಚಕಾಂಗಗಳು ಸಮರ್ಥವಾಗಿ ಕೆಲಸ ಮಾಡಲು ಸಹಕಾರಿ. ಹೃದಯ,ಶ್ವಾಸಕೋಶ, ಕಿಡ್ನಿ,ಮೆದುಳು,ದೇಹದ ಎಲ್ಲ ಪ್ರಮುಖ ಅಂಗಗಳು ಸುಸ್ಥಿತಿಯಲ್ಲಿರುತ್ತವೆ. ವಾಗುತ್ತವೆ. ಮಾನಸಿಕ ಸಂತೋಷ ಹೆಚ್ಚುತ್ತದೆ. ದೇಹಕ್ಕೆ,ಮನಸ್ಸಿಗೆ ವಿಶ್ರಾಂತಿ ದೊರೆತಾಗ ಹೆಚ್ಚಿನ ಸಾಧನೆ ಸಾಧ್ಯವಾಗುತ್ತದೆ.
ಯೋಗ ದಿನಾಚರಣೆಯನ್ನು ಅಂತರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸಲು ಪ್ರಯತ್ನಿಸೋಣ ‘ ಎಂದು ಹೇಳಿದಾಗ ವಿಶ್ವಸಂಸ್ಥೆ ಸಮ್ಮತಿಸಿ ಜಗತ್ತಿನ 192 ರಾಷ್ಟ್ರಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಿಸಲು ಕರೆ ನೀಡಿದ್ದು 177 ರಾಷ್ಟ್ರಗಳು ಸಹ ಪ್ರಾಯೋಜಕರಾಗಲು ಮುಂದೆ ಬಂದಿರುವುದು ಸುಯೋಗವೇ ಸರಿ.
ಜೂನ್ 21 ರಂದು ದಕ್ಷಿಣಾಯನದ ಆರಂಭ ದಿನ ( ಅತ್ಯಂತ ಹೆಚ್ಚು ಹಗಲಿರುವ ದಿನ )ಯೋಗ ದಿನಾಚರಣೆಯನ್ನು ಆಚರಿಸುವ ಸುಸಂದರ್ಭದಲ್ಲಿ ಯೋಗ ಪಿತಾಮಹ ಪತಂಜಲಿ ಮಹರ್ಷಿಗಳಿಗೆ ಭಕ್ತಿಪೂರ್ವಕ ನಮನಗಳು. ವಿಶ್ವದೆಲ್ಲೆಡೆ ಯೋಗದಿಂದ ಆರೋಗ್ಯ ಪಡೆಯೋಣ. ನೆಮ್ಮದಿಯ ಬದುಕು ಎಲ್ಲರಿಗೂ ಸಿಗುವಂತಾಗಲಿ.
ಸದೃಢವಾಗಿ ಆರೋಗ್ಯ ಇರಬೇಕಾದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಯೋಗ ಮಾಡಬೇಕು. ಇದರಿಂದಾಗಿ ಯಾವುದೇ ರೀತಿಯಿಂದ ರೋಗ ರುಜಿನಗಳು ಬರುವುದಿಲ್ಲ. ಮನಸ್ಸು ಉಲ್ಲಾಸದಿಂದ ಇರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಒತ್ತಡದಿಂದ ಜೀವನ ನಡೆಸಿ ನಾನಾ ರೋಗಗಳಿಗೆ ತುತ್ತಾಗುವ ಮೂಲಕ ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದಾರೆ. ಆದರೆ ಇದರಿಂದ ಹೊರ ಬರಲು ಯೋಗದಿಂದ ಮಾತ್ರ ಸಾಧ್ಯವಾಗುತ್ತದೆ. ಯೋಗ ಮನುಷ್ಯನಿಗೆ ರೋಗದಿಂದ ಮುಕ್ತಿ ಮಾಡುತ್ತದೆ.
ವಿಶೇಷ ಲೇಖನ: ಜಿಲಾನಸಾಬ್ ಬಡಿಗೇರ್




















