ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆರೋಗ್ಯದ ಮೂಲಮಂತ್ರ ಯೋಗ :ಕೆ.ಎಸ್.ಚಾಂದ್‌ಬಾಷಾ

ಬಳ್ಳಾರಿ / ಕಂಪ್ಲಿ : ಯೋಗ ಎಂಬುವುದು ಆರೋಗ್ಯ ವೃದ್ಧಿಸಲು ಹಾಗೂ ನಮ್ಮ ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿ ಅಭಿವೃದ್ಧಿಯಾಗಲು ಮೂಲ ಮಂತ್ರವಾಗಿದೆ ಎಂದು ಕೆಸಿಬಿ ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ಕೆ.ಎಸ್.ಚಾಂದ್ ಬಾಷಾ ಹೇಳಿದರು.
ಸ್ಥಳೀಯ ಸಣಾಪುರ ರಸ್ತೆಯಲ್ಲಿರುವ ರೈನ್ ಬೋ ಕಾಲೇಜಿನಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇವಲ ಒಂದು ದಿನಕ್ಕೆ ಇದು ಸೀಮಿತವಾಗಬಾರದು ಪ್ರತಿದಿನ ಪ್ರತಿಯೊಬ್ಬರೂ ಯೋಗವನ್ನು ಅನುಸರಿಸಿ ಮನೆಯಲ್ಲಿ ಅಥವಾ ಇನ್ನಿತರ ಸ್ಥಳಗಳಲ್ಲಿ ನಮ್ಮ ಜೊತೆ ನಮ್ಮ ಸ್ನೇಹಿತರುಗಳಿಗೆ ಯೋಗವನ್ನು ಕಲಿಸುವುದರೊಂದಿಗೆ ಜೀವನ ಪರ್ಯಂತ ನಾವು ಮಾಡಿಕೊಂಡು ಹೋಗಿದ್ದಲ್ಲಿ ಮಾತ್ರ ಆರೋಗ್ಯ ವೃದ್ಧಿಯಾಗಲು ಸಾಧ್ಯ ಎಂದರು.
ಕೆಸಿಬಿ ಎಜ್ಯುಕೀಷನ್ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಶಾರುಖ್ ಮಾತನಾಡಿ, ಭಾರತಾದ್ಯಂತ ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುತ್ತಿದೆ. ನಾವೆಲ್ಲರೂ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು ವ್ಯಾಯಾಮ ಯೋಗ, ವಾಯುವಿಹಾರ, ಮಾಡಿದರೆ ಮಾತ್ರ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಪ್ರತಿಯೊಬ್ಬರೂ ಯುವಕರು ವಯಸ್ಕರು, ವೃದ್ಧರು, ಯೋಗ ಮಾಡಿದರೆ ಹೆಚ್ಚಿನ ವರ್ಷ ಯಾವುದೇ ಕಾಯಿಲೆಗಳು ಇಲ್ಲದೆ ಬದುಕುವ ಮೂಲಕ ಸುಖಿಯಾಗಿರಬಹುದು ಎಂದು ತಿಳಿಸಿದರು.
ಯೋಗಪಟು ಸಣಾಪುರ ನಾಗಪ್ಪ, ಯೋಗ ಶಿಕ್ಷಕಿ ಉಮಾ ಇವರು ಯೋಗಾಸನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಶ್ರೀನಿವಾಸ್, ಉಪನ್ಯಾಸಕಿ ಮೇಘ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!