
ಬೆಳಗಾವಿ/ ಅಥಣಿ ನಗರದಲ್ಲಿ ಆದಿ ಬಣಜಿಗ ಯುವ ವೇದಿಕೆ ಅಥಣಿ ಇವರು ಏರ್ಪಡಿಸಿದ 2024 ಮತ್ತು 2025 ನೇ ಸಾಲಿನ ರಾಜ್ಯಮಟ್ಟದ 8 ನೆಯ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಿತು.
ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡಯಾದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಅಥಣಿಯ ಶಿವಣಗಿ ಕಾರ್ಯಾಲಯದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿಯವರು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು.
ಇದೇ ಸಮಾರಂಭದಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಸನ್ಮಾನದೊಂದಿಗೆ ಪುರಸ್ಕಾರ ಮಾಡಲಾಯಿತು. ಮತ್ತು ಶಾಸಕರಾದ ಲಕ್ಷ್ಮಣ ಸವದಿ ಅವರಿಗೆ ಆದಿ ಬಣಜಿಗ ಯುವ ವೇದಿಕೆ ವತಿಯಿಂದ ಕೂಡಾ ಸತ್ಕಾರ ನೆರವೇರಿತು.
ಈ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ದಿವ್ಯಸಾನಿಧ್ಯವನ್ನು ಶೆಟ್ಟರ ಮಠದ ಪ.ಪೂ.ಶ್ರೀ ಮ.ನಿ.ಪ್ರ.ಮರುಳಸಿದ್ಧ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು.
ಹಿರಿಯ ಮುಖಂಡರಾದ ಶ್ರೀ ರಾಜಣ್ಣ ಕೊರವಿ, ಶ್ರೀ ಗಂಗಾಧರ ಸಂಬಣ್ಣಿ, ಶ್ರೀ ಡಾ.ದಯಾನಂದ ಕರೆಣ್ಣವರ ಹಾಗೂ ಆದಿಬಣಿಜಿಗ ಸಮಾಜ ಅಥಣಿ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಬಳ್ಳೊಳ್ಳಿ, ಆದಿಬಣಿಜಿಗ ಯುವ ವೇದಿಕೆ ಅಥಣಿ ನೂತನ ಅಧ್ಯಕ್ಷರಾದ ಶ್ರೀ ರಾಜು ಆಲಬಾಳ, ಹಾಲಿ ಅಧ್ಯಕ್ಷರಾದ ಶ್ರೀ ಅಶೋಕ ಮಾರಾಪೂರ ಶಿವಯೋಗಿ ನಗರದ ಮುಖಂಡರಾದ ಸುರೇಶ ಆಲಬಾಳ ಹಾಗೂ ಸಮಾಜದ ಮುಖಂಡರು ಮತ್ತು ವಿದ್ಯಾರ್ಥಿಗಳು , ಪಾಲಕರು ಹಾಗೂ ಬಹಳ ಜನಸಂಖ್ಯೆಯಲ್ಲಿ ಜನಸ್ತೋಮ ಪಾಲ್ಗೊಂಡಿತ್ತು.
ವರದಿ. ವಿಠ್ಠಲ ಖೋಕಾಟೆ, ಅಥಣಿ.



















