ಶಿವಮೊಗ್ಗ: ಸಾವಯವ ಕೃಷಿ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್. ಪ್ರದೀಪ್ ಅವರ ಮನೆ, ಕಚೇರಿ, ಫಾರಂ ಹೌಸ್ ಸೇರಿ ಒಟ್ಟು ಆರು ಕಡೆಗಳಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.
ನಗರದ ಪ್ರಿಯದರ್ಶಿನಿ ಬಡಾವಣೆಯಲ್ಲಿರುವ ಮನೆ, ಕಚೇರಿ ಸೇರಿ ನಾಲ್ಕು ಕಡೆಗಳಲ್ಲಿ ದಿಢೀರ್ ದಾಳಿ ಮಾಡಲಾಗಿದೆ. ಶಿಕಾರಿಪುರ ತಾಲೂಕು ಭದ್ರಾಪುರದಲ್ಲಿರುವ ಫಾರ್ಮ್ ಹೌಸ್ ಸೇರಿದಂತೆ ಹಲವೆಡೆ ಪರಿಶೀಲನೆ ನಡೆಸಿದ್ದು, ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇರುವುದಕ್ಕೆ ದಾಖಲೆಗಳು ಲಭಿಸಿವೆ.
ಮನೆ, ಕಚೇರಿ ಮತ್ತು ಫಾರಂ ಹೌಸ್ ಸೇರಿ ಆರು ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು 66 ಎಕರೆ ಜಮೀನು, ಎರಡೆರಡು ಫಾರ್ಮ್ ಹೌಸ್, 91 ಕುರಿಗಳು ಮತ್ತು 100 ನಾಟಿ ಕೋಳಿ ಸೇರಿ 4 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ
ದಾಳಿಯಲ್ಲಿ 50 ದೇಶಗಳ ಪಾರಿವಾಳಗಳು, 10 ಹಂಸಗಳು ಮತ್ತು 40 ಬಾತುಕೋಳಿ ಸೇರಿ ಭಾರೀ ವ್ಯವಹಾರಗಳು ಪತ್ತೆಯಾಗಿವೆ.
ವರದಿ : ಜಿಲಾನಸಾಬ್ ಬಡಿಗೇರ್



















