ಬಳ್ಳಾರಿ / ಕಂಪ್ಲಿ : ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಸತಿ ಇಲಾಖೆಯಲ್ಲಿ ಆಗಿರುವ ಬಡವರ ಮನೆಯ ಹಗರಣದ ನೈತಿಕ ಹೊಣೆ ಒತ್ತು ಸಚಿವ ಜಮೀರ್ ಅಹ್ಮದ್ ಅವರು ಕೂಡಲೇ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ, ಭಾರತೀಯ ಜನತಾ ಪಕ್ಷದ ಕಂಪ್ಲಿ ಮಂಡಲ, ನಗರ ಘಟಕದ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ಕೆ.ಶ್ರೀಕುಮಾರ ಇವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು. ನಂತರ ಕಂಪ್ಲಿ ತಾಲೂಕು ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಮಾತನಾಡಿ, ಸರ್ಕಾರದ ಆಳಂದ ಶಾಸಕರಾಗಿರುವ ಬಿ.ಆರ್ ಪಾಟೀಲ್ ಅವರು ಹೇಳುವಂತೆ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಇವರ ಮೂಲಕ ಸುಮಾರು 200 ಮನೆಗಳ ಹಣವನ್ನು ಪಡೆದು ನುಂಗಿ ಹಾಕಿದ್ದಾರೆ. ಇದರಂತೆ ರಾಜ್ಯದ ಉದ್ದಗಲಕ್ಕೂ ಹಣ ಪಡೆದಂತಾಗಿದೆ. ಹಣ ನೀಡದಕ್ಕೆ ಕೆಲ ಮನೆಗಳನ್ನು ಮಂಜೂರು ಮಾಡುವುದನ್ನು ತಡೆ ಹಿಡಿದ್ದಾರೆ. ಆದ್ದರಿಂದ ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಕೂಡಲೇ ವಸತಿ ಸಚಿವ ಜಮೀರ್ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಟಿ.ವಿ.ಸುದರ್ಶನರೆಡ್ಡಿ, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಸುಗುಣ, ನಗರ ಘಟಕ ಅಧ್ಯಕ್ಷ ವೈ.ಮುರಳಿ ಮೋಹನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಕಟ್ಟೆ ವಿಶ್ವನಾಥ, ಮುಖಂಡರಾದ ಅಳ್ಳಳ್ಳಿ ವಿರೇಶ, ಪಿ.ಬ್ರಹ್ಮಯ್ಯ, ಬಾಲಚಂದ್ರ, ಜಿ.ಸುಧಾಕರ, ಪ್ರಶಾಂತ, ಬಿ.ದೇವೇಂದ್ರ, ಶ್ರೀಧರಶ್ರೇಷ್ಠಿ, ಶ್ರೀನಿವಾಸ, ಹುಲುಗಪ್ಪ, ಶಿವುಕುಮಾರ, ಬಿ.ರಮೇಶ, ರವಿಚಂದ್ರ, ತಿಪ್ಪೇಶ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















