ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿ : ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ’

ಬಳ್ಳಾರಿ / ಕಂಪ್ಲಿ : ಪಿಐ ಕೆ.ಬಿ.ವಾಸುಕುಮಾರ ಮಾತನಾಡಿ, ‘ಪಟ್ಟಣದಲ್ಲಿ 16 ಕಡೆ ಸೇರಿದಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 36 ಕಡೆಗಳಲ್ಲಿ ಪೀರಗಳನ್ನು ಕೂಡಿಸುತ್ತಿದ್ದು, ಸಮಿತಿಗಳನ್ನು ರಚಿಸಿಕೊಳ್ಳಬೇಕು, ಸಮಸ್ಯೆಯಾದರೆ ಸಮಿತಿಯ ಸದಸ್ಯರೇ ನೇರ ಹೊಣೆಯಾಗುತ್ತಾರೆ. ಪೀರಗಳನ್ನು ದಫನ ಮಾಡುವಾಗ ತಂಟೆ ತಕರಾರು ಮಾಡದೆ ಹಬ್ಬ ಆಚರಿಸಬೇಕು’ ಗಿಡಮರಗಳನ್ನು ಕಡಿಯಬಾರದು ಪರಿಸರವನ್ನು ಸಂರಕ್ಷಿಸಬೇಕು ಎಂದು ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆ ಸಭಾಂಗಣದಲ್ಲಿ ಮಂಗಳವಾರ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ದೇಶದಲ್ಲಿ ಹಬ್ಬಗಳು ಭಾವೈಕ್ಯತೆಯ ಸಂಕೇತವಾಗಿವೆ. ಎಲ್ಲರೂ ಸೇರಿ ಸಮಸ್ಯೆಯಾಗದಂತೆ ಹಬ್ಬವನ್ನು ಸರ್ವಧರ್ಮೀಯರು ಸೌಹಾರ್ದತೆಯಿಂದ ಆಚರಿಸಬೇಕು. ಕೋಮು-ಗಲಭೆಗಳನ್ನು ಸೃಷ್ಟಿಸಿಕೊಂಡು ಹಬ್ಬ ಆಚರಿಸುವುದರಿಂದ ಧಾರ್ಮಿಕ ನಂಬಿಕೆಗಳು ದೂರವಾಗುತ್ತವೆ. ಹೀಗಾಗಿ ಎಲ್ಲರೂ ಸಹೋದರರಂತೆ ಮೊಹರಂ ಹಬ್ಬವನ್ನು ಆಚರಿಸಬೇಕು ಎಂದರು. ಪೀರಲದೇವರುಗಳ ದಫನ್ ದಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಬಂದೋಬಸ್ತ್ ಕಲ್ಪಿಸಲಾಗುವುದು ಎಂದರು.

ಹಿಂದೂ–ಮುಸ್ಲಿಮ್‌ ಸೌಹಾರ್ದಕ್ಕೆ ಹೆಸರಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು’ ಎಂದು ಕಂಪ್ಲಿ ಠಾಣೆ ಕಾನೂನು ವ್ಯವಸ್ಥೆಯ ಪಿಎಸ್‌ಐ ಅವಿನಾಶ ಕಾಂಬ್ಳೆ ತಿಳಿಸಿದರು.

ಇದಕ್ಕೂ ಮುಂಚೆ ಮಾತನಾಡಿದ ಸಭೆಯಲ್ಲಿ ಪಾಲ್ಗೊಂಡ ಮುಖಂಡರು ದೇವರ ದಫನ ತೆರಳುವ ಮಾರ್ಗವನ್ನು ಸ್ವಚ್ಛಗೊಳಿಸಬೇಕು, ಅವಶ್ಯಕತೆವಾದರೆ ಮಾತ್ರ ಮಾರ್ಗ ಬದಲಾಯಿಸಬೇಕು, ಬೆಳಕಿನ ದೀಪದ (Lighting Decoration) ಅಲಂಕಾರದಲ್ಲಿ ವಿದ್ಯುತ್ತಿನ ಜಾಗೃತ ವಹಿಸಿ, ಯಾವುದೇ ಅವಗಡಗಳು ಆಗದಂತೆ ಎಚ್ಚರಿಕೆ ವಹಿಸಬೇಕು, ನಗರದ್ಯಾಂತ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ ಜಾಗೃತಿವಹಿಸಬೇಕು, ಅಲಾಯಿಗೆ ಮರ-ಗಿಡಗಳನ್ನು ಕಡಿಯಬಾರದು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸಲಹೆಗಳನ್ನೂ ನೀಡಿ ಮಾತನಾಡಿದರು.

ಎಎಸ್‌ಐ ಬಸವರಾಜ, ಪೊಲೀಸ್ ಠಾಣಾ ಸಿಬ್ಬಂದಿಯವರು, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಉಸ್ಮಾನ್, ಪುರಸಭೆ ಸದಸ್ಯರಾದ ಲಡ್ಡು ಹೊನ್ನೂರ ವಲಿ, ಟಿ.ವಿ. ಸುದರ್ಶನ್ ರೆಡ್ಡಿ, ಮಾಜಿ ಪುರಸಭೆ ಅಧ್ಯಕ್ಷ ಬಿ. ಸಿದ್ದಪ್ಪ, ಮುಖಂಡರಾದ ಜಿ. ರಾಮಣ್ಣ, ಷಣ್ಮುಖಪ್ಪ, ಬಿ. ಜಾಫರ್, ಕೆ ಮನೋಹರ, ಡಾ.ವೆಂಕಟೇಶ್ ಭರಮಕ್ಕನವರ, ಕೆ. ಮೆಹಬೂಬ್, ಬಳೆ ಮಲ್ಲಿಕಾರ್ಜುನ, ಕೆ. ವಾಹಿದ್, ಎಸಿ. ಯಲ್ಲಪ್ಪ, ಎಲೆಗಾರ ನಾಗರಾಜ್, ಪುಟ್ಟಿ ಸಚಿನ್, ಬಾಲೆಸಾಬ್, ಜಂಗ್ ನಾಗರಾಜ್, ಸಿ. ಚೆನ್ನಪ್ಪ, ಹಾಗೂ ವಿವಿಧ ಗ್ರಾಮದ ಮುಖಂಡರು ಸೇರಿದಂತೆ ಪಂಜಾ ಮಸೀದಿಗಳ ಮುಜುವಾರಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಮುಖ್ಯಸ್ಥರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!