ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪೂರ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುನರ್ವಸತಿ ಕೇಂದ್ರ ಶಾಲೆಯಲ್ಲಿ 2025-26 ನೇ ಸಾಲಿನ ಎಸ್ ಡಿ ಎಂ ಸಿ ಗೆ 19 ಜನರನ್ನು ನೂತನವಾಗಿ
ಆಯ್ಕೆ ಮಾಡಿಲಾಯಿತು. ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ನೂತನ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಶ್ರೀ ಶಂಕರಗೌಡ ಶರಣಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ರೇಣುಕಾ ಸಿದ್ದಪ್ಪ ಮಾದರ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಹಾಗೂ ಶಾಲೆಯ ಶಿಕ್ಷಕರು ಭಾಗಿಯಾದರು.
ನಂತರ ನೂತನ ಅಧ್ಯಕ್ಷರಿಗೆ ಸದಸ್ಯರಿಗೆ ಶಾಲೆಯ ಮುಖ್ಯ ಗುರುಗಳಾದ ಎಲ್ ಟಿ ಗೋಂದಳಿ ಸ್ವಾಗತಿಸಿದರು ಹಾಗೂ ನಿರೂಪಣೆ ಗಿರೀಶ್ ಹೂವಿನಹಳ್ಳಿ ನಡೆಸಿಕೊಟ್ಟರು.
ವರದಿ. ಹಣಮಂತ ಚ. ಕಟಬರ್



















