
ಬಾಗಲಕೋಟೆ : ಪ್ರತಿಯೊಬ್ಬರೂ ಕಾನೂನಿನ ಅರಿವು ಇರಬೇಕು ಕಾನೂನು ಅರಿವಿದ್ದರೆ ಅನ್ಯಾಯಗಳು ಕಡಿಮೆಯಾಗುತ್ತವೆ ಎಂದು ಜಿಲ್ಲಾ ಹಿರಿಯ ನ್ಯಾಯವಾದಿ ಚಂದ್ರಶೇಖರ ದಿಡ್ಡಿ ಹೇಳಿದರು.
ಅವರು ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಬಾಪೂಜಿ ಪ. ಪೂ. ಕಾಲೇಜಿನಲ್ಲಿ ದಿ. 24/6/2025ರಂದು ಮಂಗಳವಾರ ಆಯೋಜಿಸಿದ್ದ ಮಕ್ಕಳಿಗೆ ಕಾನೂನು ಹರಿವು ನೆರವು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಮಾತನಾಡಿದ ಅವರು ಬಾಲ್ಯ ವಿವಾಹ, ಬಾಲಕಾರ್ಮಿಕತೆ ಉಂಟಾಗುವ ದುಷ್ಪರಿಣಾಮಗಳು ಮತ್ತು ಅನಾಥ ಮಕ್ಕಳಿಗೆ ಆಧಾರ್ ಕಾರ್ಡ್ ದಾಖಲಾತಿ ಮಾಡಿಸಲು ಸೆಖಿ ಯೋಜನೆ ಬಗ್ಗೆ , ವಿವರಿಸಿದರಲ್ಲದೆ ಮುಂದುವರೆದು ಬದುಕಲು ಆಹಾರ ಬಟ್ಟೆ ಎಷ್ಟು ಅವಶ್ಯವೂ ಸಮಾಜದಲ್ಲಿ ಬದುಕಲು ಕಾನೂನಿನ ಅರಿವು ಅಷ್ಟೇ ಅವಶ್ಯವಾಗಿದೆ ಎಂದು ಹೇಳಿದ ಅವರು
ಭಾರತದ ಸರ್ವೋಚ್ಛ ನ್ಯಾಯಾಲಯವು ರೂಪಿಸಿದ ಸಾಥಿ, ಆಶು, ಜಾಗೃತಿ, ಸಂವಾದ, ಡಾನ್ ಈ ಯೋಜನೆಯ ಅಡಿಯಲ್ಲಿ ಬರುವ ಸೌಲಭ್ಯಗಳು ಮತ್ತು ಕಾನೂನಿನ ಮಾಹಿತಿಗಳ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಅವರನ್ನು ಎಸ್ ಆರ್ ಪಾಟೀಲ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಸ್ ಆರ್ ಪಾಟೀಲರು ಸನ್ಮಾನಿಸಿದರು, ಕಾರ್ಯದರ್ಶಿಗಳಾದ ಶ್ರೀ ಎಮ್. ಎನ್. ಪಾಟೀಲ, ಸಲಹಾ ಮಾರ್ಗದರ್ಶಕರಾದ ಎಚ್. ಬಿ. ಧರ್ಮಣ್ಣವರ ಗುರುಗಳು ಅಧ್ಯಕ್ಷತೆ ವಹಿಸಿದ್ದರು ಹಾಗೂ ಬಾಪೂಜಿ ಪ. ಪೂ. ವಿದ್ಯಾಲಯ ಬಾಡಂಗಡಿಯ ಪ್ರಾಚಾರ್ಯರಾದ ಸನ್ಮಾನ್ಯ ಶಿವಭೋದ ಶೆಟ್ಟಿ ಮತ್ತು ವೈದ್ಯಕೀಯ ಮಹಾವಿದ್ಯಾಲಯದ ಅಧೀಕ್ಷರಾದ ಧರ್ಮರಾಯ ಇಂಗಳೆ ಅವರು ಉಪಸ್ಥಿತರಿದ್ದರು.
- ಕರುನಾಡ ಕಂದ



















