ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರೇಣುಕಾಚಾರ್ಯ ಆಸ್ಪತ್ರೆಗೆ ದಾಖಲು!

ಬೈಕ್ ರ್ಯಾಲಿ ವೇಳೆ ಬಿದ್ದು ಗಾಯಗೊಂಡ ಮಾಜಿ ಸಚಿವ

ದಾವಣೆಗೆರೆ : ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಬೈಕ್ ರ್ಯಾಲಿಯಲ್ಲಿ ಬಿದ್ದು, ಗಾಯಗೊಂಡು, ಆಸ್ಪತ್ರೆ ಸೇರಿದ್ದಾರೆ. ಭದ್ರಾ ಬಲದಂಡೆ ನಾಲೆ ಕಾಮಗಾರಿ ವಿರೋಧಿಸಿ ಬೃಹತ್ ಪ್ರತಿಭಟನೆ, ಬೈಕ್ ಬೈಕ್ ರ್ಯಾಲಿ ಕೈಗೊಳ್ಳಲಾಗಿತ್ತು. ಈ ವೇಳೆ ದಾವಣಗೆರೆ ಮಹಾನಗರ ಪಾಲಿಕೆ ಕಚೇರಿ ಬಳಿಯ ಕೆಳಸೇತುವೆ ಬಳಿ ರೇಣುಕಾಚಾರ್ಯ ತೆರಳುತ್ತಿದ್ದ ಬೈಕ್ ಸ್ಕಿಡ್ ಆಗಿದೆ.

ನಾಳೆ ದಾವಣಗೆರೆ ಬಂದ್‌ಗೆ ರೈತ ಸಂಘಟನೆಗಳು ಕರೆ ನೀಡಿದ್ದವು. ಬಂದ್‌ಗೆ ಸಹಕರಿಸಲು ಬೈಕ್ ರ್ಯಾಲಿ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಲಾಗ್ತಿತ್ತು. ದಾವಣಗೆರೆಯ ಹಳೆಯ ಪ್ರವಾಸ ಮಂದಿರದಿಂದ ಶುರುವಾಗಿದ್ದ ರ್ಯಾಲಿಯಲ್ಲಿ ರೇಣುಕಾಚಾರ್ಯ ಸೇರಿದಂತೆ ಹಲವರು ಭಾಗಿಯಾಗಿದ್ದರು. ಮೊದಲು ಬುಲೆಟ್ ಏರಿ ಬೈಕ್ ರ್ಯಾಲಿಯಲ್ಲಿ ರೇಣುಕಾಚಾರ್ಯ ಭಾಗಿಯಾಗಿದ್ರು. ಬಳಿಕ ಎಲೆಕ್ಟ್ರಿಕ್ ಸ್ಕೂಟರ್ ಏರಿ ಬೈಕ್‌ ರ್ಯಾಲಿಯಲ್ಲಿ ರೇಣುಕಾಚಾರ್ಯ ಸವಾರಿ ಮಾಡುತ್ತಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!