ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇಂತಹ ಆಧುನಿಕ ಕಾಲದಲ್ಲೂ ಶೋಷಿತರ ಮೇಲಾಗುವ ದೌರ್ಜನ್ಯ, ಅನ್ಯಾಯವನ್ನು ಖಂಡಿಸುತ್ತ ಸಿಡಿದೆದ್ದು ಕ್ರಾಂತಿಕಾರಿಯಾಗುತ್ತಾರೆ ಲೇಖಕರು

-ಸುರೇಶ ಮಲ್ಲಿಗೆಮನೆ
ಯುವ ಸಾಹಿತಿಗಳು. ತೀರ್ಥಹಳ್ಳಿ.

ಎಲ್ಲಾ ಕಾಲಕ್ಕೂ ಸಲ್ಲುವ ಮತ್ತು ಯಾವುದೇ ಒಂದೇ ಪ್ರಾದೇಶಿಕ ಭಾಷೆಗೆ ಮಾತ್ರ ಸೀಮಿತವಾಗಿದೆ ಎಲ್ಲರಿಗೂ ಆಪ್ತವಾಗುವಂತ ಕಥೆಗಳ ಗುಚ್ಛ ಆಪ್ತಮಿತ್ರ ಚಿರಂಜೀವಿ ರೋಡಕರ್ ನ ಈ “ಕೊಡಲಿ ಕಾವು” ಕಥಾ ಸಂಕಲನ.

ಸಾಧಾರಣವಾಗಿ ಉತ್ತರ ಕರ್ನಾಟಕದ ಬಹುಪಾಲು ಲೇಖಕರಿಗೆ ತಮ್ಮ ಬರವಣಿಗೆಯಲ್ಲಿ ಪ್ರಾದೇಶಿಕ ಭಾಷೆಯ ಪ್ರಭಾವ ಎದ್ದು ಕಾಣುತ್ತಿರುತ್ತದೆ. ಆದರೆ ಇಲ್ಲಿನ ಕಥೆಗಳು ಇದಕ್ಕೆ ಹೊರತಾಗಿರುವುದು ವಿಶೇಷ.

ಲೇಖಕರು ತಮ್ಮ ಮೊದಲನೇ ಕವನ ಸಂಕಲನದಲ್ಲೇ ತಮ್ಮ ಪ್ರಾದೇಶಿಕ ಭಾಷೆಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವುದರ ಜೊತೆಗೇ ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ಅನ್ವಯ ಆಗುವಂತೆ ಸಾರ್ವತ್ರಿಕವಾಗಿ ಒತ್ತುಕೊಟ್ಟು ಪ್ರತಿಯೊಂದು ಕಥೆಗಳಿಗೂ ನ್ಯಾಯ ಒದಗಿಸಿದ್ದಾರೆ.

ಇಲ್ಲಿ ಪ್ರತಿಯೊಂದು ಕಥೆಗಳ ಕಥಾವಸ್ತು ಹಳತಾದರೂ, ಕಥೆಗಳ ನಿರೂಪಣೆ, ಅಕ್ಷರಗಳ ಪೂಣಿಕೆ, ಪದಬಳಕೆ ಮತ್ತು ಬಳಸಿದ ಭಾಷೆ ಮನಸ್ಸಿಗೆ ತುಂಬಾ ಆಪ್ತ ಎನಿಸುತ್ತದೆ.

ಈ ಕಥಾ ಸಂಕಲನದಲ್ಲಿ ಬರುವ ಏಳು ಕಥೆಗಳಲ್ಲಿ ಆರು ಕತೆಗಳಾದ “ಕುಸುಮ,ರೋಜ್ ಕಹಾನಿ, ಅಪ್ಪ ಬರ್ತಾನಾ?, ಹುಲಿ ಹೈದ, ಕೊಡಲಿ ಕಾವು, ಕೋಟೆ ಹೇಳಿದ ಕಥೆ” ಒಂದು ತೂಕವಾದರೆ; ಕೊನೆಯಲ್ಲಿ ಬರುವ ನೀಲ್ಗತೆಯಂತಿರುವ “ಸಂಜೆ ಸಿಂಧೂರ”ಕಥೆಯದೇ ಒಂದು ತೂಕ.

ಕುವೆಂಪು ರವರ ವಿಚಾರಗಳಿಂದ ಪ್ರಭಾವಿತರಾದರಿಂದಲೋ; ವಿಜ್ಞಾನ ಮತ್ತು ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಒಡನಾಟದ ಪ್ರತಿಫಲವೋ ಏನೋ ಈ ವಿಚಾರಕ್ಕೇ ಸಂಬಂಧಿಸಿದ ಮತ್ತು ತನ್ನ ಜೀವನಾನುಭವಗಳಿಂದ ಪಡೆದ ಜ್ಞಾನದಿಂದಲೂ ವೈಚಾರಿಕ ವಿಚಾರಗಳನ್ನೇ ಹೆಕ್ಕಿ ಮೂಡನಂಬಿಗಳ ಕುರಿತ ವಿರೋದಾಭಾವವನ್ನು ತನ್ನ ಬರವಣಿಗೆಯಲ್ಲಿ ವ್ಯಕ್ತಪಡಿಸುತ್ತಾ ಹೋಗುತ್ತಾರೆ ಲೇಖಕರು.

ಒಟ್ಟಿನಲ್ಲಿ ಇದು ಅವರ ಮೊದಲ ಕಥಾಸಂಕಲನವಾದರೂ ಅನುಭವಸ್ಥನಂತೆ ತಾನು ಕಂಡುಂಡ ನೋವು ನಲಿವು, ವಿರಹ, ಪ್ರೀತಿ ಪ್ರೇಮಮನ್ನು ತನ್ನದೇ ಆದ ದೃಷ್ಟಿಕೋನದಲ್ಲಿ ಕಾಣುತ್ತಾ; ಇಂತಹ ಆಧುನಿಕ ಕಾಲದಲ್ಲೂ ಶೋಷಿತರ ಮೇಲಾಗುವ ದೌರ್ಜನ್ಯ, ಅನ್ಯಾಯವನ್ನು ಖಂಡಿಸುತ್ತ ಸಿಡಿದೆದ್ದು ಕ್ರಾಂತಿಕಾರಿಯಾಗುತ್ತಾರೆ ಲೇಖಕರು.

ಅದಾಗಿಯೂ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳನ್ನ, ಕಥಾ ವಸ್ತು ಮತ್ತು ಬರವಣಿಗೆ ಹಾಗೂ ನಿರೂಪಣಾ ಶೈಲಿಯಲ್ಲಿ ಮತ್ತಷ್ಟು ಹೊಸತನದ ಬದಲಾವಣೆಗಳನ್ನು ತಂದುಕೊಂಡು ಇನ್ನಷ್ಟೂ ಪಳಗಬೇಕಾಗಿದೆ.
ಇದರ ಹೊರತಾಗಿ “ಕೊಡಲಿಯ ಕಾವಿನ ಎಲ್ಲಾ ಕಥೆಗಳು ಒಮ್ಮೆ ಕಣ್ಣಾಡಿಸಿದ ಓದುಗನನ್ನು ಕಚ್ಚಿಸಿಕೊಂಡು ಹೋಗುವುದರಲ್ಲಿ ಎರಡು ಮಾತಿಲ್ಲ.
ಶುಭವಾಗಲಿ.

  • ಸುರೇಶ್ ಮಲ್ಲಿಗೆ ಮನೆ.
    ತೀರ್ಥಹಳ್ಳಿ ,
    ಪ್ರತಿಗಳಿಗೆ ಸಂಪರ್ಕಿಸಿ
    9845484624.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!