ಯಾದಗಿರಿ: 2025-26ನೇ ಸಾಲಿನ ಜಿಲ್ಲಾ, ವಲಯ ಯೋಜನೆಯ ‘ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹೊಲಿಗೆಯಂತ್ರ ಹಾಗೂ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಯೋಜನೆ’ ಯಡಿ ಗ್ರಾಮೀಣ ಪ್ರದೇಶದ ವೃತ್ತಿನಿರತ ಬಡಿಗಿತನ ಮತ್ತು ಕ್ಷೌರಿಕ ಕಸಬುದಾರರಿಗೆ ಉಚಿತವಾಗಿ ಉಪಕರಣ ವಿತರಿಸಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ದಿನಾಂಕ: 01.07.2025 ರಿಂದ ದಿನಾಂಕ: 31.07.2025ರ ವರೆಗೆ ವೆಬ್ ಸೈಟ್ https://zpyadgiri karnataka.gov.in ) https://yadgir.nic.in ಮೂಲಕ ಅರ್ಜಿ ಸಲ್ಲಿಸಬಹುದು.
ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08473-253791 ಸಂಪರ್ಕಿಸಿ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
1) ಜನ್ಮ ದಿನಾಂಕ ನಮೂದಿಸಿರುವ ದಾಖಲೆ (ಅಂಕಪಟ್ಟಿ / ವರ್ಗಾವಣೆ ಪ್ರಮಾಣ ಪತ್ರ).
2) ಶೈಕ್ಷಣಿಕ ಅರ್ಹತೆ: ಹೊಲಿಗೆಯಂತ್ರಗಳಿಗಾಗಿ ಕನಿಷ್ಠ 8ನೇ ತರಗತಿ ಪಾಸಾಗಿರಬೇಕು ಮತ್ತು ಬಡಿಗಿತನ ಮತ್ತು ಕ್ಷೌರಿಕ ಉಪಕರಣಗಳಿಗಾಗಿ ಯಾವುದೇ ಶೈಕ್ಷಣಿಕ ಅರ್ಹತೆ ಇರುವುದಿಲ್ಲ.
(ವರ್ಗಾವಣೆ ಪ್ರಮಾಣಪತ್ರ/ ಅಂಕಪಟ್ಟಿ)
3) ಜಾತಿ ಪ್ರಮಾಣ ಪತ್ರ. (ಪ.ಜಾ, ಪ.ಪಂ ಮತ್ತು ಅಲ್ಪ ಸಂಖ್ಯಾತರಿಗೆ ಮಾತ್ರ)
4) ವಿಕಲಚೇತನ ಪ್ರಮಾಣ ಪತ್ರ (ವಿಕಲಚೇತನರಾಗಿದ್ದಲ್ಲಿ)
5) ಚಾಲ್ತಿಯಲ್ಲಿರುವ ಪಡಿತರ ಚೀಟಿ ಮತ್ತು ಅಧಾರ ಗುರುತಿನ ಚೀಟಿ.
6) ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ
7) ವೃತ್ತಿ ಪ್ರಮಾಣ ಪತ್ರ.
ಷರತ್ತುಗಳು (ಸೂಚನೆಗಳು):
1) ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು ನಗರ ಪ್ರದೇಶದ ಅಭ್ಯರ್ಥಿಗಳಿಗೆ ಅವಕಾಶವಿರುವುದಿಲ್ಲ.
2) ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
3) ಆಯಾ ಗ್ರಾಮ ಪಂಚಾಯತಿಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಂದ/ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಯವರಿಂದ ಹೊಲಿಗೆ/ಕ್ಷೌರಿಕ/ಬಡಿಗಿತನ ವೃತ್ತಿ ಮಾಡುತ್ತಿರುವ ಬಗ್ಗೆ, ಧೃಢೀಕರಣ ಪ್ರಮಾಣ.
4) ಹೊಲಿಗೆ ಯಂತ್ರಕ್ಕಾಗಿ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
5) ಬಡಿಗೆತನ ಉಪಕರಣಗಳಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.
6) ಕ್ಷೌರಿಕ ಉಪಕರಣಗಳಿಗಾಗಿ ಎಲ್ಲಾ ವರ್ಗದವರು ಅರ್ಜಿ ಸಲ್ಲಿಸಬಹುದು.
7) ಕಳೆದ 3 ವರ್ಷದಲ್ಲಿ ಈ ಇಲಾಖೆಯಿಂದ ಹೊಲಿಗೆ ಕ್ಷೌರಿಕ/ಬಡಿಗೆ ತನ ಸಲಕರಣೆಗಳನ್ನು ಪಡೆದಿದ್ದರೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
8) ಯಾವುದೇ ಫಲಾನುಭವಿಯು ಕೇವಲ ಒಂದು ಅರ್ಜಿ ಸಲ್ಲಿಸಲು ಹೊಲಿಗೆ/ಕ್ಷೌರಿಕ/ಬಡಿಗೆತನ ಅವಕಾಶವಿರುತ್ತದೆ.
9) ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
10) ಅಪ್ಲೋಡ್ ಮಾಡಿದ ಮೂಲ ದಾಖಲಾತಿಗಳು ಸ್ಪಷ್ಟವಾಗಿರಬೇಕು ಇಲ್ಲವಾದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.
11) ಆಯಾ ತಾಲೂಕಿನ ಅರ್ಜಿದಾರರು ಆಯಾ ತಾಲೂಕಿನಲ್ಲಿ ಅರ್ಜಿ ಸಲ್ಲಿಸಬೇಕು ಇಲ್ಲವಾದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.
12) ವಯಸ್ಸು: ಹೊಲಿಗೆ ಯಂತ್ರಗಳಿಗಾಗಿ ಕನಿಷ್ಠ 18 ವರ್ಷ ತುಂಬಿರಬೇಕು, ಗರಿಷ್ಠ 45 ವರ್ಷ ಮೀರಿರಬಾರದು. ಹಾಗೂ ಕ್ಷೌರಿಕ ಮತ್ತು ಬಡಿಗತನ ಉಪಕರಣಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು, ಗರಿಷ್ಠ 50 ವರ್ಷ ಮೀರಿರಬಾರದು
13) ಗುರಿಗಿಂತಲೂ ಹೆಚ್ಚಿನ ಅರ್ಹ ಅರ್ಜಿಗಳು ಸ್ವೀಕೃತವಾದಲ್ಲಿ ಆಯ್ಕೆ ಸಮಿತಿ ವತಿಯಿಂದ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು.
14) ಅರ್ಜಿದಾರರು ಆನ್ ಲೈನ್ ನಲ್ಲಿ ಸಲ್ಲಿಸಿದ ಅರ್ಜಿಯ ಮೂಲ ಪ್ರತಿಯನ್ನು ಕಾಯ್ದಿರಿಸಿಕೊಳ್ಳತಕ್ಕದ್ದು ಹಾಗೂ ಉಪಕರಣಗಳನ್ನು ಪಡೆಯುವಾಗ ಈ ಕಛೇರಿಗೆ ಸಲ್ಲಿಸುವುದು.
ವರದಿ: ಜಗದೀಶ್ ಕುಮಾರ್ ಭೂಮಾ



















