ಬಳ್ಳಾರಿ/ ಕಂಪ್ಲಿ: ಇಲ್ಲಿನ ಶಾರದಾ ಶಾಲೆಯಲ್ಲಿ ತಾಲೂಕು ವೀರಶೈವ ಮಹಾಸಭಾ ವತಿಯಿಂದ ಡಾ. ಎನ್. ತಿಪ್ಪಣ್ಣನವರಿಗೆ ಸಂತಾಪ ಸೂಚಿಸಲಾಯಿತು.
ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಪಿ. ಮೂಕಯ್ಯಸ್ವಾಮಿ ಮಾತನಾಡಿ ಹಿರಿಯ ರಾಜಕಾರಣಿ, ಹಿರಿಯ ನ್ಯಾಯವಾದಿ, ಮಾಜಿ ವಿಧಾನಪರಿಷತ್ ಸದಸ್ಯರು, ವಿಧಾನ ಪರಿಷತ್ ಸಭಾದ್ಯಕರು, ವಿ. ವಿ. ಸಂಘದ ಮಾಜಿ ಅಧ್ಯಕ್ಷರು, ಮಾಜಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರಾಗಿದ್ದ ಕರ್ನಾಟಕ ವಕೀಲರ ಪರಿಷತ ಮಾಜಿ ಅಧ್ಯಕ್ಷರು ಹೀಗೆ ಸಮಾಜದ ವಿವಿಧ ಹುದ್ದೆಗಳನ್ನು ಅಲಂಕರಿಸಿ ತಮ್ಮದೇ ಆದ ನಡೆ ನುಡಿ ಮತ್ತು ದುರದೃಷ್ಟಿಯಿಂದ ಇವರು ಬಳ್ಳಾರಿ ವಿ. ವಿ. ಸಂಘ ಸಮಗ್ರ ಅಭಿವೃದ್ದಿ ಹೊಂದಿ ವಿವಿಧ ಶಾಲೆ ಕಾಲೇಜು ಪ್ರಾರಂಭಿಸಿ ಶಿಕ್ಷಣದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಿದ್ದಾರೆ ಸಮಾಜಕ್ಕೆ ತಮ್ಮ ಶಕ್ತಿ ಮೀರಿ ಶ್ರಮ ಪಟ್ಟ ಹಿರಿಯರಾದ ಡಾ. ಎನ್. ತಿಪ್ಪಣ್ಣನವರು (97) ಸಾರ್ಥಕ ಜೀವನ ನಡೆಸಿ ಶುಕ್ರವಾರ ಬೆಳಗಿನ ಲಿಂಗೈಕ್ಯರಾಗಿದ್ದು ನಾಡಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಇವರ ಅಗಲಿಕೆ ಅಪಾರ ಅಭಿಮಾನಿಗಳಿಗೂ ದುಃಖವನ್ನು ತುಂಬಿದೆ ಅಗಲಿದ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲೆಂದು ಎಲ್ಲರೂ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ತಾಲೂಕು ವೀರಶೈವ ಸಮಾಜದ ಪದಾಧಿಕಾರಿಗಳು, ಅಭಿಮಾನಿಗಳು ಸೇರಿದಂತೆ ಬಾಂಧವರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ



















