ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರುಮ್ಮನಗೂಡ ಗ್ರಾಮ ಪಂಚಾಯತ್ ಯಲ್ಲಿ ಅವ್ಯವಹಾರ ಪಿಡಿಓ ಮತ್ತು ಅಧ್ಯಕ್ಷರ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯ :ಮಾ. ದಂ. ಹೋ. ಸಮಿತಿ ಕಾಳಗಿ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ವ್ಯಾಪ್ತಿಗೆ ಬರುವ ರುಮ್ಮನ ಗೂಡ ಗ್ರಾಮ ಪಂಚಾಯತಿಯಲ್ಲಿ ಗ್ರಾಮದ ಜನರಿಗೆ ಸಿಗಬೇಕಾದ ಮೂಲ ಸವಲತ್ತುಗಳು ಮತ್ತು ಕುಡಿಯುವ ನೀರು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಕಾರಣ ಸರಕಾರದಿಂದ ಬಂದ 15ನೇ ಹಣಕಾಸಿನ ಅನುದಾನದವು ರುಮ್ಮನಗೂ ಡ್ ಗ್ರಾಮ ಪಂಚಾಯತಿಗೆ ಬಂದಿರುತ್ತದೆ. ಇದರಲ್ಲಿ ಸುಳ್ಳು ದಾಖಲೆಯನ್ನು ಸೃಷ್ಟಿಸಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ಕೂಡಿ ಈ ಹಣವನ್ನು ದೋಚಿರುತ್ತಾರೆ. ಅದಕ್ಕಾಗಿ ಇವರ ಮೇಲೆ ಸೂಕ್ತವಾದ ಕಾನೂನು ರೀತಿಯಲ್ಲಿ ಕ್ರಮ ತಗೊಳ್ಳಬೇಕು ಮತ್ತು ಇವರನ್ನು ಕೂಡಲೇ ಅಧಿಕಾರದಿಂದ ವಜಾಗೊಳಿಸಬೇಕೆಂದು ಕರಣ ಜಿ ರಾಜಪುರ್ ಅಧ್ಯಕ್ಷರು ಮಾ. ದಂ. ಹೋ.ಸಮಿತಿ ಕಾಳಗಿ ರವರು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಕಾಳಗಿ ಇವರಿಗೆ ಮನವಿ ಕೊಟ್ಟು ಆಗ್ರಹಿಸಿದರು.
ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಕಂಬಗಳಿಗೆ ಬೀದಿ ದೀಪ ಅಳವಡಿಸುವುದು, ವಸತಿ ಯೋಜನೆಯಲ್ಲಿ ಬಿ ಪಿ ಎಲ್ ಕಾರ್ಡುದಾರರಿಗೆ ಫೋಟೋ ಅಳವಡಿಸಲು ಲಂಚ ಕೇಳುತ್ತಿರುವುದು ಇದನ್ನು ನಿಲ್ಲಿಸಬೇಕು. ಪಿ ಡಿ ಓ ಅವರನ್ನು ಅಧಿಕಾರದಿಂದ ವಜಾಗೊಳಿಸಬೇಕೆಂದು ಒಂದು ವೇಳೆ ಇವರ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಮಾದಿಗ ದಂಡೋರ ಹೋರಾಟ ಸಮಿತಿ ಕಾಳಗಿ ರವರು ಒತ್ತಾಯಿಸುತ್ತಾರೆ.
ಈ ಸಂದರ್ಭದಲ್ಲಿ ಕರಣ ಜಿ ರಾಜಾಪೂರ ಅಧ್ಯಕ್ಷರು ಮಾ. ದಂ. ಹೋ. ಸಮಿತಿ ಕಾಳಗಿ, ಹಣಮಂತ್ ಮೇಲಿನಕೇರಿ ರುಮ್ಮನಗೂಡ, ಸುಂದರ್ ಡಿ ಸಾಗರ್ ಮಾ. ದಂ. ಜಿಲ್ಲಾ ಅಧ್ಯಕ್ಷರು, ವೀರಣ್ಣ ಗಂಗಾಣಿ ರೈತ ಸೇನೆ ತಾಲೂಕ ಅಧ್ಯಕ್ಷರು ಕಾಳಗಿ, ಡೇವಿಡ್ ರುಮ್ಮನ್ ಗೂಡ, ಶ್ರೀಕಾಂತ್ ಸಜ್ಜನ್, ಭೀಮು ರಟಕಲ್, ಮಲ್ಲಿಕಾರ್ಜುನ್ ಗೋಟುರ, ಸುರೇಶ್ ಕೋಡ್ಲಿ, ಪಿಂಟು ಕೋಡ್ಲಿ, ಪೀರಪ್ಪ ಸಾಲಹಳ್ಳಿ ಆನಂದ್ ಯಲಕಪಳ್ಳಿ, ಅನಿಲ್ ಹೆಬ್ಬಾಳ, ಚಂದ್ರಕಾಂತ್ ಸರ್, ಸುರೇಶ ಮೇಲಿನಕೇರಿ, ಸಂತೋಷ್ ಸಾಸರ್ ಗಾಂವ್, ಕಾಶಪ್ಪ ಮಾಸ್ಟರ್, ಮತ್ತು ರುಮ್ಮನಗೂಡ ಗ್ರಾಮದ ಜನರು ಭಾಗವಹಿಸಿದ್ದರು.

ವರದಿ ಚಂದ್ರಶೇಖರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!