
ಯಾದಗಿರಿ/ ಗುರುಮಠಕಲ್: ತಾಲೂಕಿನ ಕಾಳೆಬೆಳಗುಂದಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇಲ್ಛಾವಣಿ ಶಿಥಿಲಗೊಂಡಿರುವ ಬಗ್ಗೆ ವರದಿಯ ಬೆನ್ನಲ್ಲೇ, ಶಾಲೆಯ ಸ್ಥಿತಿಗತಿ ಪರಿಶೀಲಿಸಿದ ಸಮೂಹ ಸಂಪನ್ಮೂಲ ವ್ಯಕ್ತಿ ಶಂಕರ್, BRP ಪ್ರಭು ಹಾಗೂ ತಾಲೂಕ ಪಂಚಾಯತ ಸಿಬ್ಬಂದಿ.
ಕ. ರ. ವೇ ಶರಣಬಸಪ್ಪ ಅವರು ಶಾಲೆಯ ಸ್ಥಿತಿ ಗತಿ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ಅಧಿಕಾರಿಗಳ ಭೇಟಿ ಹಾಗೂ ಮಕ್ಕಳಿಗಾಗಿ ಪರ್ಯಾಯ ಕೊಠಡಿಯ ವ್ಯವಸ್ಥೆ,
ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಶಾಲಾ ಕೊಠಡಿಗಳ ವೀಕ್ಷಣೆ ಮಾಡಿ, ಮುಂಜಾಗ್ರತೆಯಾಗಿ ಮಕ್ಕಳಿಗಾಗಿ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ. ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ಸ್ಥಳದ ಸಮೀಕ್ಷೆ ಮಾಡಿದ್ದಾರೆ.
ಈಗಾಗಲೇ ಅನುದಾನ ಬಂದಿರುತ್ತದೆ, ಆದರೆ ಸ್ಥಳದ ಕೊರತೆ ಉಂಟಾಗಿದ್ದು,ತುಂಬಾ ದಿನಗಳಿಂದ ದಾನಿಗಳ ನಿರೀಕ್ಷೆಯಲ್ಲಿರುವದಾಗಿ ತಿಳಿಸಿದ್ದಾರೆ.
ನಿನ್ನೆ ಭೇಟಿ ನೀಡಿದ ತಾಲೂಕ ಪಂಚಾಯತ ಅಧಿಕಾರಿಗಳಿಂದ ಶಾಲೆಗೆ ಒಂದು ಎಕರೆ ಸ್ಥಳ ನೀಡುವ ಭರವಸೆ, ಹೊಸ ಸುಸಜ್ಜಿತ ನಾಲ್ಕು ಕೊನೆಗಳ ನಿರ್ಮಾಣಕ್ಕೆ ಶೀಘ್ರವೇ ಮೇಲಾಧಿಕಾರಿಗಳ ಜೊತೆ ಸಮಾಲೋಚನೆ.
ವರದಿ: ಜಗದೀಶ್ ಕುಮಾರ್ ಭೂಮಾ



















