ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಷ್ಟಗಳನ್ನು ಮೆಟ್ಟಿ ನಿಂತಾಗ ಮಾತ್ರ ಸಾಧನೆ ಸಾಧ್ಯ : ನಿವೃತ್ತ ಮುಖ್ಯಗುರು ಯು. ಶ್ರೀನಿವಾಸ

ಬಳ್ಳಾರಿ / ಕಂಪ್ಲಿ : ಪಟ್ಟಣದ ಶುಗರ್ ಫ್ಯಾಕ್ಟರಿಯಲ್ಲಿರುವ ಮುಕ್ತಿ ನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತಿಚಿಗೆ ಸುಗೂರು ಪ್ರೌಢ ಶಾಲೆಯಲ್ಲಿ ಮುಖ್ಯಗುರು ಯು. ಶ್ರೀನಿವಾಸ ವಯೋ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಕಂಪ್ಲಿಯ ಉಡೇಗೊಳ ಕುಟುಂಬದಿಂದ ನಿವೃತ್ತಿ ಮುಖ್ಯಗುರು ಯು. ಶ್ರೀನಿವಾಸ ದಂಪತಿಗಳಿಗೆ ರವಿವಾರ ಅದ್ಧೂರಿಯಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ನಿವೃತ್ತಿ ಮು.ಗು ಶ್ರೀನಿವಾಸ ಮಾತನಾಡಿ, ಕಷ್ಟಗಳನ್ನು ಮೆಟ್ಟಿ ನಿಂತಾಗ ಮಾತ್ರ ಜಯ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ವೃತ್ತಿ ಜೀವನವನ್ನು ಕಷ್ಟ ಸುಖದ ನಡುವೆ ಉತ್ತಮ ಸೇವೆ ಸಲ್ಲಿಸಿದ ತೃಪ್ತಿ ತಮ್ಮದ್ದಾಗಿದೆ ಜನರ ಪ್ರೀತಿ, ವಿಶ್ವಾಸದಿಂದ ಸರ್ಕಾರಿ ವೃತ್ತಿ ಜೀವನ ಕಳೆದಿರುವೆ ಕಂಪ್ಲಿಯ ಬಿ.ಎಸ್.ವಿ. ಶಾಲೆ ಮು.ಗು 5 ವರ್ಷ ಅನಂತರ ಹುಮುನಾಬಾದ್ ಹಳ್ಳಿಕೇರಿ ಪ್ರೌಢಶಾಲೆ ಮತ್ತು ಎಮ್ಮಿಗನೂರು ಪ್ರೌಢಶಾಲೆ. 18 ವರ್ಷ ಸೂಗುರು ಪ್ರೌಢ್ರ ಶಾಲೆಯಲ್ಲಿ ಮುಖ್ಯಗುರುಗಳಾಗಿ 13 ವರ್ಷ, ಒಟ್ಟು 33ವರ್ಷ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು. ಗಂಗಾಮತ ಸಮಾಜದ ಮುಖಂಡರು ಮತ್ತು ಸಹ ಶಿಕ್ಷಕರು ಸೇರಿದಂತೆ ಅನೇಕರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಯು. ಹನುಮಂತಪ್ಪ, ಸಹ ಶಿಕ್ಷಕ ರವಿ, ಉಮಾ ಮತ್ತು ಕುಟುಂಬ ವರ್ಗ
ಬಿ. ಸಿದ್ದಪ್ಪ, ಅಯ್ಯೋದಿ ವೆಂಕಟೇಶ, ಈರಣ್ಣ, ಉಮೇಶ, ಶೈಲಜಾಗೌಡ, ಎಸ್. ಶ್ಯಾಮಸುಂದರ, ರಾಜ, ದಾದಾಪೀರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!