ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪಿ. ಯು .ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸಂಭ್ರಮದ ಸ್ವಾಗತ

ಎಮ್. ಎಮ್. ಎಸ್. ಎ. ಪಿಯು ಕಾಲೇಜ್ ಬಳಗಾನೂರ

ವಿಜಯಪುರ: ತಾಳಿಕೋಟೆ ಸಮೀಪದ ಬಳಗಾನೂರ ಕ್ರಾಸ್ ನೀಲಗಂಗಾ ನಗರದಲ್ಲಿರುವ ಕುವೆಂಪು ಗ್ರಾಮೀಣಾಭಿವೃದ್ಧಿ ಸಂಘ ( ರಿ.) ಅಡಿಯಲ್ಲಿ ನಡೆಯುತ್ತಿರುವ ಎಮ್. ಎಮ್. ಎಸ್. ಎ. ಪಿ ಯು ಕಾಲೇಜ್ ನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ. ನಿ. ಪ್ರ. ವೀರಸಿದ್ಧ ಮಹಾಸ್ವಾಮಿಗಳು ನಂದಿಮಠ ವಡವಾಡಗಿ, ಮುಖ್ಯ ಅತಿಥಿಯಾಗಿ ಡಾ. ಜಿ. ಎನ್. ಹರ್ನಾಳ ಪ್ರಾಚಾರ್ಯರು ಜಿ ಎನ್ ಎಮ್ ಕೆ ಕಾಲೇಜು ಮುದ್ದೇಬಿಹಾಳ, ಶ್ರೀ ತಾರಣಾಳ ದೈಹಿಕ ಶಿಕ್ಷಕರು, ಮುಖ್ಯ ಉಪಸ್ಥಿತಿ ಶ್ರೀಮತಿ ಕೆ ಎನ್ ಹಿರೇಗೌಡರ್ ಹೆಚ್ ಪಿ ಎಸ್ ಚೋಕಾವಿ, ಅಧ್ಯಕ್ಷತೆ ಶ್ರೀ ಬಿ ಏನ್ ನಾಯ್ಕೋಡಿ ಸಂಸ್ಥಾಪಕ ಅಧ್ಯಕ್ಷರು ಕುವೆಂಪು ಗ್ರಾಮೀಣಾಭಿವೃದ್ಧಿ ಸಂಘ ( ರಿ. ), ಜಯಶ್ರೀ ಕಾಗಿಯವರ ಆಡಳಿತ ವರ್ಗ, ಸವಿತಾ ಕಾಗಿಯವರ ಪ್ರಾಚಾರ್ಯರು ಹಾಗೂ ಎಮ್ ಬಿ ನಾಯ್ಕೋಡಿ ಕಾರ್ಯದರ್ಶಿಗಳು ಎಮ್ ಎಮ್ ಎಸ್ ಎ ಪಿಯು ಕಾಲೇಜ್ ಹಾಗೂ ಬೋಧಕ ಭೋದಕೇತರ ಸಿಬ್ಬಂದಿ ವರ್ಗದವರು ಮತ್ತು ಮುದ್ದು ವಿದ್ಯಾರ್ಥಿ / ನಿಯರು ಭಾಗವಹಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪೂಜ್ಯರು ಹಾಗೂ ಎಲ್ಲಾ ಗಣ್ಯ ಮಹನೀಯರು ಸಸಿಗೆ ನೀರೇರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯ ಮೇಲೆ ಆಸೀನರಾದ ಪೂಜ್ಯರಿಗೆ, ಗಣ್ಯರಿಗೆ, ಮಹನೀಯರಿಗೆ ಸ್ವಾಗತ ಮತ್ತು ಗೌರವ ಶ್ರೀರಕ್ಷೆ ನೀಡುವ ಮೂಲಕ ಪ್ರಾಚಾರ್ಯರಾದ ಸವಿತಾ ಕಾಗಿಯವರು ಪ್ರಾಸ್ತಾವಿಕ ಭಾಷಣ ಮಾಡಿದರು. ದ್ವಿತೀಯ ವರ್ಷದ ವಿದ್ಯಾರ್ಥಿ/ ನಿಯರು ಪ್ರಥಮ ವರ್ಷದ ವಿದ್ಯಾರ್ಥಿ/ ನಿಯರಿಗೆ ಸವಿ ನೆನಪಿನ ಕಾಣಿಕೆ ನೀಡುವ ಮೂಲಕ ಸಡಗರ ಸಂಭ್ರಮದಿಂದ ಸ್ವಾಗತ ಕೋರಿದರು.
ಪ್ರಥಮ ವರ್ಷದ ವಿದ್ಯಾರ್ಥಿ/ನಿಯರು ಸಂತೋಷದ ನುಡಿಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿಗಳಾದ ಡಾ. ಜಿ ಎನ್ ಹರ್ನಾಳರವರು ಸ್ವಾಗತ ಎಂದರೆ ಮಕ್ಕಳ ವಿದ್ಯಾರ್ಜನೆಯ ಯಶಸ್ಸಿನ ಹಾದಿ ಎಂದು ಹೇಳಿ ಮಕ್ಕಳ ಮನ ಮುಟ್ಟುವಂತೆ ಜಾನಪದ ಗಾಯನದೊಂದಿಗೆ ಭಾಷಣಕ್ಕೆ ವಿರಾಮ ನೀಡಿದರು. ಕಾರ್ಯದರ್ಶಿಗಳಾದ ಮನು ಬಿ ನಾಯ್ಕೋಡಿಯವರು ಮಕ್ಕಳ ಯಶಸ್ಸಿಗೆ ಶಿಸ್ತು ಮುಖ್ಯ ಎಂದು ತಿಳಿಸಿದರು. ಶ್ರೀಗಳ ಆಶೀರ್ವಾಚನದೊಂದಿಗೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಡಗರ ಸಂಭ್ರಮದಿಂದ ಭಾಗವಹಿಸಿ ಕುಣಿದು ಕುಪ್ಪಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಭೀಮನಗೌಡ ನಡೆಸಿಕೊಟ್ಟರು. ಪ್ರಾರ್ಥನೆ ಸಹನಾ ಮತ್ತು ಸಂಜನಾ, ಸ್ವಾಗತ ಸಾನಿಕಾ, ಅಂಕಿತಾ ಹಾಗೂ ಭಾಗ್ಯ ವಂದನಾರ್ಪಣೆ ನೆರವೇರಿಸಿದರು. ರೋಹಿತ್ ತಿವಾರಿ ಕಾರ್ಯಕ್ರಮಕ್ಕೆ ಪೂರ್ಣ ವಿರಾಮ ನೀಡಿದರು.

ವರದಿಗಾರ : ಉಸ್ಮಾನ ಬಾಗವಾನ ( ಬಳಗಾನೂರ )

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!