ಶೃಂಗೇರಿ ಕ್ಷೇತ್ರ ಕಂಡ ಪ್ರತಿಭಾವಂತ ರಾಜಕೀಯ ಮುತ್ಸದ್ದಿ, ಧೀಮಂತ ರಾಜಕಾರಣಿ, ಸಾಮಾಜಿಕ ಕಳಕಳಿಯ ಮಡಬೂರು ರಾಜೇಂದ್ರ ಅವರು ಇಂದು ಕಾಲನ ಕರೆಗೆ ತಲೆಬಾಗಿದ್ದಾರೆ. ನರಸಿಂಹರಾಜಪುರ ವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸಿದ ರಾಜೇಂದ್ರ, ಶೃಂಗೇರಿ ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ ಜನರ ಭಾವನೆಗಳಿಗೆ ಸ್ಪಂದಿಸಿದವರು, ರಾಜ್ಯ ಜನತಾದಳದ ಉಪಾಧ್ಯಕ್ಷರಾಗಿ ಕೆಲಸ ಮಾಡಿದವರು, ಶೃಂಗೇರಿ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿದವರು. ನಾಲ್ಕಾರು ಭಾರಿ ಸಹ್ಯಾದ್ರಿ ಸಂಘದ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ನಮ್ಮನ್ನು ಪ್ರೋತ್ಸಾಹಿದವರು ಮತ್ತು ಸಂಘದ ಬಗ್ಗೆ ಅಭಿಮಾನ ಹೊಂದಿದವರು. ಅಧ್ಯಯನಶೀಲರು ಪ್ರಾಮಾಣಿಕರು ಹೋರಾಟಗಾರರು ಆದ ರಾಜೇಂದ್ರ ನಮ್ಮನ್ನು ಅಗಲಿರುವುದು ಮಲೆನಾಡ ಭಾಗಕ್ಕೆ ತೀವ್ರವಾದ ಹೊಡೆತ ಬಿದ್ದಂತಾಗಿದೆ ಮತ್ತು ಜನಪರ ಕಾಳಜಿಯ ವ್ಯಕ್ತಿಯನ್ನು ಕಳೆದುಕೊಂಡು ಮಲೆನಾಡು ಅದರಲ್ಲೂ ವಿಶೇಷವಾಗಿ ಶೃಂಗೇರಿ ಕ್ಷೇತ್ರ ಅನಾಥವಾಗಿದೆ. ರಾಜೇಂದ್ರ ನಿಧನಕ್ಕೆ ಸಹ್ಯಾದ್ರಿ ಸಂಘ ಅಶ್ರುತರ್ಪಣ ಸಲ್ಲಿಸುತ್ತದೆ. ದುಃಖ ತಪ್ತ ಕುಟುಂಬಕ್ಕೆ ಭಗವಂತ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.
ವರದಿ : ಪ್ರಸಾದ್ ಹೆಚ್ ಬಿ ,ತೀರ್ಥಹಳ್ಳಿ.



















